36 ಗಂಟೆಗಳ ಸಂಪೂರ್ಣ ಲಾಕ್ ಡೌನ್ ಗೆ ರಾಜ್ಯಾದ್ಯಂತ ಉತ್ತಮ ಬೆಂಬಲ

ಬೆಂಗಳೂರು, ಮೇ, 24, ರಾಜ್ಯದಲ್ಲಿ ಮಾರಕ  ಕೊರೊನಾ ಸೋಂಕು ಹರಡದಂತೆ ತಡೆಯುವ  ನಿಟ್ಟಿನಲ್ಲಿ  ಶನಿವಾರ ಸಂಜೆಯಿಂದ ಜಾರಿಯಾದ   36 ಗಂಟೆಗಳ   ಸಂಪೂರ್ಣ ಲಾಕ್ಡೌನ್ಗೆ ರಾಜ್ಯಾದ್ಯಂತ   ಉತ್ತಮ ಬೆಂಬಲ ವ್ಯಕ್ತವಾಗಿದ್ದು ಜನಜೀವನ ಮಂಕಾಗಿದೆ. ಸದಾ ವಾಹನ ಸಂದಣಿಯಿಂದ ಗಿಜಿಗುಡುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ  ಬಹಳ ವಿರಳವಾಗಿದೆ. ರಾಜಧಾನಿ ಬೆಂಗಳೂರು ನಗರವೂ ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ.  ಬೀದರ್, ಬಳ್ಳಾರಿ, ರಾಮನಗರಗಳಲ್ಲಿ  ಬಹುತೇಕ ಜನಜವನ ಸ್ತಬ್ಧವಾಗಿದೆ.
ರಾಮನಗರ ಜಿಲ್ಲೆಯಲ್ಲಿ  ಅಂಗಡಿ ಮುಂಗಟ್ಟು ಮುಚ್ಚಿವೆ. ಹೋಟೆಲ್ಗಳೂ ಬಂದ್ ಆಗಿವೆ. ರೇಷ್ಮೆ ಮಾರುಕಟ್ಟೆ ಸಹ ಬಂದ್ ಆಗಿದೆ. ಹಾಲು, ಔಷಧ  ತರಕಾರಿ ಮಾಂಸ ಮಾರಾಟ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ  ತೊಂದರೆಯಾಗಿಲ್ಲ  . ಬಳ್ಳಾರಿಯಲ್ಲಿಯೂ ಲಾಕ್ಡೌನ್ ಬಹತೇಕ ಯಶಸ್ವಿಯಾಗಿದೆ  ಎನ್ನಲಾಗಿದೆ.  ಲಾಕ್ಡೌನ್ಗೆ ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಭಾನುವಾರದ ಲಾಕ್ ಡೌನ್ ಅಂಗವಾಗಿ ಕಲಬುರಗಿ ನಗರದಲ್ಲಿ ಬಸ್ ಹಾಗೂ ಇತರ ವಾಹನಗಳ ಸಂಚಾರ ಸ್ಥಗಿತವಾಗಿದೆ  ಲಾಕ್ ಡೌನ್ ಜೊತೆಗೆ ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ  ಜನರು ಮನೆಯಿಂದ ಹೊರಗೆ  ಬರುತ್ತಿಲ್ಲ ಹೀಗಾಗಿ ಜಿಲ್ಲೆಯಲ್ಲಿ  ಬಿಕೋ ಎಂಬ ವಾತವರಣ ಮುಂದುವರೆದಿದೆ. ಮಂಗಳೂರು ಮತ್ತು ಮೈಸೂರಿನಲ್ಲಿ ಜನಜೀವನ ಸ್ಥಬ್ದವಾಗಿದೆ ಒಟ್ಟಾರೆ ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮೇಲಾಗಿ ರಾಜ್ಯದ ಯಾವುದೇ ಭಾಗದಲ್ಲಿ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಪೊಲೀಸರು  ಹೇಳಿದ್ದಾರೆ.