ಚಿತ್ರದುರ್ಗ, ಮೇ 24,ಭಾನುವಾರದ ಲಾಕ್ ಡೌನ್ ಗೆ ಕೋಟೆ ನಾಡಿನಲ್ಲಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬಸ್ ಆಟೋ ಸಂಚಾರ ಸ್ತಬ್ಧ ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಆಗಿದ್ದು ಲಾಕ್ಡೌನ್ ನಿಯಮಗಳಿಗೆ ಬೆಲೆ ಕೊಟ್ಟ ಜನತೆ ಮನೆಯಿಂದ ಹೊರಬಂದಿಲ್ಲ ಅಗತ್ಯ ವಸ್ತುಗಳಾದ ದಿನಸಿ ಅಂಗಡಿ, ತರಕಾರಿ, ಹಣ್ಣು, ಪೆಟ್ರೋಲ್ ಬಂಕ್, ಮೆಡಿಕಲ್ ಶಾಪ್, ಆಸ್ಪತ್ರೆಗಳಿಗೆ ಎಂದಿನಂತೆ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿದೆ ನಿನ್ನೆ ಸಂಜೆಯಿಂದಲೇ ಜಿಲ್ಲೆಯಲ್ಲಿ ಕರ್ಫ್ಯೂ ಜಾರಿಯಾಗಿದ್ದು ನಾಳೆ ಬೆಳಿಗ್ಗೆ 7 ವರೆಗೂ ಜಾರಿಯಲ್ಲಿ ಇರುತ್ತದೆ ಸಾರಿಗೆ ಬಸ್, ಆಟೋ, ಟ್ಯಾಕ್ಸಿ, ಖಾಸಗಿ ವಾಹನ ಸಂಚಾರಕ್ಕೆ ನಿರ್ಭಂಧವಿದ್ದು ಉಳಿದಂತೆ ಮಾರುಕಟ್ಟೆ ಸಂಪೂರ್ಣವಾಗಿ ಸ್ತಬ್ಧ, ಪ್ರಮುಖ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.