ಕೇಂದ್ರ ಬಜೆಟ್ ನಲ್ಲಿ ವೇತನದಾರರಿಗೆ ಖುಷಿ ಸುದ್ದಿ

ನವದೆಹಲಿ, ಡಿಸೆಂಬರ್  27,  ಮುಂದಿನ ಸಾಲಿನ  ಕೇಂದ್ರ ಬಜೆಟ್ ನಲ್ಲಿ ಹಣಕಾಸು  ಸಚಿವರು  ವೇತನದಾರರಿಗೆ ಖುಷಿ ಕೊಡುವ ಸುದ್ದಿ ನೀಡುವುದು ಬಹುತೇಕ ಖಾತರಿಯಾದಂತಿದೆ...!ಉನ್ನತ ಮೂಲಗಳ ಪ್ರಕಾರ  ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ  ಇಳಿಕೆ ಮಾಡಲು ಹಣಕಾಸು  ಸಚಿವಾಲಯ ಎಲ್ಲ ತಯಾರಿ ನಡೆಸಿದೆ ಎನ್ನಲಾಗಿದೆ .ನೇರ ತೆರಿಗೆ ಮಂಡಳಿ ನೀಡಿರುವ ಶಿಫಾರಸುಗಳನ್ನು ಗಮನದಲ್ಲಿಇಟ್ಟುಕೊಂಡು  ಹೊಸ ರೀತಿಯ ಸ್ಲ್ಯಾಬ್ ಗಳು  ಮತ್ತು ತೆರಿಗೆ ದರ ನಿಗದಿ ಮಾಡಲು ಸಿದ್ದತೆ ಮಾಡಲಾಗಿದೆ  ಎಂದು ಮೂಲಗಳು ಹೇಳಿವೆ.ಅಂದರೆ, 2.5 ಲಕ್ಷ ರೂ.ಗಳಿಂದ 10 ಲಕ್ಷದವರೆಗೆ ಶೇ.10, 10-20 ಲಕ್ಷದ ವರೆಗೆ ಶೇ.20, 20 ಲಕ್ಷದಿಂದ 2 ಕೋಟಿ ವರೆಗೆ ಶೇ.30 ಹಾಗೂ 2 ಕೋಟಿಯಿಂದ ಮೇಲ್ಪಟ್ಟು ಗಳಿಸುವವರಿಗೆ ಶೇ.35 ರಷ್ಟು ತೆರಿಗೆ ವಿಧಿಸಲು  ಅಲೋಚನೆ ಮಾಡಲಾಗಿದೆ.  ಈ ಬಗ್ಗೆ ಈಗಾಗಲೇ ತಯಾರಿಗಳು ತಡೆದಿದ್ದು, ಫೆ.1ರ ಬಜೆಟ್ ನಲ್ಲಿ ಇದು ಅಧಿಕೃತವಾಗಿ ಘೋಷಣೆಯಾಗಲಿದೆ ಎಂದೂ  ಹೇಳಲಾಗಿದೆ.