ತುಂಬೆಬೀಡು ಪ್ರಾಥಮಿಕ ಶಾಲೆಗೆ ಸುವರ್ಣ ಸಂಭ್ರಮ

ಲೋಕದರ್ಶನ ವರದಿ

ಯಲ್ಲಾಪುರ,15: ತಾಲೂಕಿನ ಮಂಚೀಕೇರಿ ಸಮೀಪದ ತುಂಬೆಬೀಡಿನ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ. 17 ರಂದು ಸುವರ್ಣ ಸಂಭ್ರಮ  ಕಾರ್ಯಕ್ರಮ ಆಯೋಜನೆಗೊಂಡಿದೆ. ಶಾಸಕ ಶಿವರಾಮ ಹೆಬ್ಬಾರ್  ಸುವರ್ಣ ಸಂಭ್ರಮ  ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಅನಂತ ಕುಮಾರ ಹೆಗಡೆಯವರು  ಶಾಲೆಯಲ್ಲಿ ಕಲಿತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಸನ್ಮಾನಿಸಲಿದ್ದಾರೆ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಊರಿನ ಹಿರಿಯರಾದ  ಆರ್.ಎಸ್.ಹೆಗಡೆ ಕಂಪ್ಲಿಯವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ ನೂತನ ಬಯಲು ರಂಗಮಂದಿರ ಉದ್ಘಾಟನೆಗೊಳ್ಳಲಿದ್ದು ಶಾಲಾ ಮಕ್ಕಳ ಕಲಿಕೆಗೆ ಪೂರಕವಾದ ವಿದ್ಯುನ್ಮಾನ ಕಲಿಕಾ ಕೊಠಡಿ ಕೂಡ ಮಕ್ಕಳ ಕಲಿಕೆಗೆ ಮುಕ್ತಗೊಳ್ಳಲಿದೆ.  ವಿದ್ಯಾಥರ್ಿಗಳ ಹಸ್ತಪತ್ರಿಕೆ ಬಿಡುಗಡೆಗೊಳ್ಳಲಿದೆ. 

1965ರಲ್ಲಿ ಚಿಕ್ಕ ಗುಡಿಸಲಿನಲ್ಲಿ ಪ್ರಾರಂಭಗೊಂಡಿದ್ದ ಈ ಶಾಲೆಯು ತುಂಬೆಬೀಡು, ಕಂಪ್ಲಿ, ಕೆಳಗಿನ ಮಂಚೀಕೇರಿ, ಅರಳೀಮಕ್ಕಿ, ಕುಂಬಾರಕುಳಿ, ಬಾಳಕಲ್, ನೆರೆಮನೆ, ನಗರಜಡ್ಡಿ, ಸೂರೆಮನೆ, ಪಚ್ಚೇಕುಡ್ಲು ಈ ಎಲ್ಲ ಊರಿನ ಗ್ರಾಮೀಣ ಮಕ್ಕಳ ಪ್ರಾಥಮಿಕ ಶಿಕ್ಷಣ ಪೂರೈಸುವ ಕೇಂದ್ರವಾಗಿದೆ.   ನಂತರದ ದಿನಗಳಲ್ಲಿ ಗ್ರಾಮಸ್ಥರ ಹಾಗೂ ಸಕರ್ಾರದ ಅನುದಾನದಿಂದ ಸುಸಜ್ಜಿತ ಕಟ್ಟಡ, ಆಟದ ಬಯಲು, ಶೌಚಾಲಯ, ಶುಧ್ಧ ಕುಡಿಯುವ ನೀರು, ಬಯಲು ರಂಗ ಮಂದಿರ ಹಾಗೂ ಸಂಪನ್ಮೂಲ ಶಿಕ್ಷಕರಿಂದ ಸುತ್ತಲಿನ ಹಳ್ಳಿಗಳ ಮಕ್ಕಳ ಜ್ಞಾನದಾಹವನ್ನು  ತಣಿಸುತ್ತಿದೆ. ಇದುವರೆಗೆ ಸುಮಾರು 800ಕ್ಕೂ ಅಧಿಕ ವಿದ್ಯಾಥರ್ಿಗಳು ಶಿಕ್ಷಣ ಪೂರೈಸಿದ್ದು ಸಮಾಜದ ವಿವಿಧ ಉನ್ನತ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಒಂದೆಡೆ ಸೇರಲಿದ್ದಾರೆ. 

 ಮದ್ಯಾಹ್ನ 3.30ಕ್ಕೆ ಉಪನ್ಯಾಸಕ ದತ್ತಾತ್ರಯ ಗಾಂವ್ಕರ್ ಅವರಿಂದ ವಿಶೇಷ ಉಪನ್ಯಾಸ ನಡೆಯಲಿದೆ.  ಸಂಜೆ 6.00ಗಂಟೆಯಿಂದ ಶಾಲಾ ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಮ ಹಾಗೂ  ವಾಸುಖಿ ಹೆಗಡೆ ಮಳಗೆಮನೆ ಇವರ ನಿದರ್ೆಶನದಲ್ಲಿ ಮಕ್ಕಳ ನಾಟಕ  ಪ್ರದರ್ಶನಗೊಳ್ಳಲಿದೆ. ನಂತರ ಪ್ರತಿಭಾ ಹೆಗಡೆಯವರ ಲಘುಸಂಗೀತ ನಂತರ ಶಾಲೆಯ ಹಳೆಯ ವಿದ್ಯಾಥರ್ಿಯಾದ ಪಂಡಿತ ಶ್ರೀಪಾದ ಹೆಗಡೆ ಕಂಪ್ಲಿ ಯವರಿಂದ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ  ನಡೆಯಲಿದೆ. ಈಎಲ್ಲ ಕಾರ್ಯಕ್ರಮಗಳು ಶಾಲೆಯ ಎಸ್.ಡಿ.ಎಮ್.ಸಿ ಹಾಗೂ ಹಳೆಯ ವಿದ್ಯಾಥರ್ಿಗಳ ಸಹಾಯ ಸಹಕಾರ ಹಾಗೂ ಶಾಲಾ ಶಿಕ್ಷಕರ , ಸುವರ್ಣ ಮಹೋತ್ಸವ ಸಮಿತಿಯವರ ಸಹಭಾಗಿತ್ವದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ವಿನಂತಿಸಿದ್ದಾರೆ