ಅಥ್ಲೆಟಿಕ್ ಕೂಟ ಸಾಧನೆ ತೋರಿದ ಕ್ರೀಡಾಪಟುಗಳಿಗೆ ಚಿನ್ನದ ಪದಕ

ಲೊಕದರ್ಶನ ವರದಿ

ವಿಜಯಪುರ 07 : ನಗರದ ಬಿ.ಎಲ್.ಡಿ.ಇ ಸಂಗನಬಸವ ಮಹಾಸ್ವಾಮೀಜಿ ಫಾರ್ಮಸಿ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ 6ನೇ ಇಂಟರ್ ಸ್ಕೂಲ್ ಮತ್ತು ಕಾಲೇಜು ಅಥ್ಲೆಟಿಕ್ ಕೂಟ ಇತ್ತೀಚೆಗೆ ಜರುಗಿತು.

ನಗರದ ಖ್ಯಾತ ವೈದ್ಯರು, ಹಾಗೂ ಕ್ರೀಡಾಪಟುಗಳು ಆಗಿದ್ದ ದಿವಂಗತ ಡಾ.ಸಿ.ಆರ್.ಬಿದರಿಯವರ ಪುಣ್ಯಸ್ಮರಣೆಯ ನಿಮಿತ್ಯ ಆಯೋಜಿಸಿದ್ದ ಈ ಕ್ರೀಡಾಕೂಟವನ್ನು ಬಿ.ಎಲ್.ಡಿ.ಇ ನಿದರ್ೆಶಕ ಬಸನಗೌಡ ಎಂ.ಪಾಟೀಲ್ ಉದ್ಘಾಟಿಸಿದರು. ದೈಹಿಕ ಶಿಕ್ಷಣ ನಿದರ್ೆಶಕ ಎಸ್.ಎಸ್.ಕೋರಿ, ಡಾ.ಆರ್.ಸಿ.ಬಿದರಿ, ಡಾ.ಆರ್.ವಿ.ಕುಲಕಣರ್ಿ, ಡಾ.ಎನ್.ವಿ.ಕಲ್ಯಾಣಿ ಮುಖ್ಯ ಅತಿಥಿಯಾಗಿದ್ದರು. ಬಿ.ಎಲ್.ಡಿ.ಇ ವಿವಿಧ 50ಶಾಲೆ-ಕಾಲೇಜುಗಳ 550 ಕ್ರೀಡಾಪಟುಗಳು ಭಾಗವಹಿಸಿದ್ದರು. 

ಸಂಜೆ ನಡೆದ ಬಹುಮಾನ ವಿತರಣೆಯಲ್ಲಿ ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳಾದ ಗೋಪಾಲ ಚವ್ಹಾಣ, ರೂಪಾಶ್ರೀ ಪಾಟೀಲ, ಗೀತಾ ತೋರತ, ಆನಂದ ನಾಯ್ಕ, ಕೀತರ್ಿ ತೋರತ, ಅಕ್ಷಯ ಬಡಿಗೇರ, ಸಂಜಯ ಜುಂಜರವಾಡ ಅವರಿಗೆ ಶ್ರೀಮತಿ ಆಶಾ ಎಂ.ಪಾಟೀಲ್, ಡಾ.ಶೈಲಜಾ ಬಿದರಿ, ರವಿ ಬಿದರಿ, ಐ.ಎಸ್.ಕಾಳಪ್ಪನವರ ಅವರು ಚಿನ್ನದ ಪದಕ ನೀಡಿ ಗೌರವಿಸಿದರು. ಆಡಳಿತಾಧಿಕಾರಿ ಎಸ್.ಎಚ್.ಲಗಳಿ, ಬಿ.ಆರ್.ಪಾಟೀಲ ವೇದಿಕೆಯ ಮೇಲಿದ್ದರು.

ಈ ಸಂದರ್ಭದಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಸೈಕ್ಲಿಂಗ್ ವಿಭಾಗದಲ್ಲಿ ಸಾಧನೆ ತೋರಿದ ಮೇಘಾ ಗುಗಾಡ ಅವರನ್ನೂ ಸನ್ಮಾನಿಸಲಾಯಿತು.