ಭಾರತಕ್ಕೆ ಚಿನ್ನದ ಕನಸು ಭಗ್ನ: ಬೆಳ್ಳಿಗೆ ತೃಪ್ತರಾದ ಮಂಜ ರಾಣಿ

ಉಲಾನ್ ಉಡೆ (ರಷ್ಯಾ), ಅ 13:   ರಷ್ಯಾದಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ನಲ್ಲಿ ಒಂದೇ-ಒಂದು ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಕೂಡ ಹುಸಿಯಾಯಿತು.  

ಭಾನುವಾರ ನಡೆದಿದ್ದ 48 ಕೆ.ಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಮಂಜು ರಾಣಿ ಅವರು ಸ್ಥಳೀಯ ಬಾಕ್ಸರ್ ಎಕಟೆರಿನ್ ಪಾಲ್ಟ್ಸವಾ ವಿರುದ್ಧ 1-4 ಅಂತರದಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.  

ಶನಿವಾರ ಮಂಜು ರಾಣಿ ಸೆಮಿಫೈನಲ್ ಹಣಾಹಣಿಯಲ್ಲಿ ಥಾಯ್ಲೆಂಡ್ನ ಚಥುಮತ್ ರಕ್ಸತ್ ವಿರುದ್ಧ 4-1 ಅಂತರದಲ್ಲಿ ಗೆದ್ದು ಫೈನಲ್ಗೆ ಲಗ್ಗೆ ಇಟ್ಟಿದ್ದರು.  ಆ ಮೂಲಕ, ಫೈನಲ್ ತಲುಪಿದ್ದ ಭಾರತದ ಏಕೈಕ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದರು.  

ಪ್ರಸ್ತುತ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ಚೊಚ್ಚಲ ಫೈನಲ್ ಪ್ರವೇಶ ಮಾಡಿದ ಭಾರತ ಮೊದಲ ಬಾಕ್ಸರ್ ಎಂಬ ಸಾಧನೆಗೆ  18ರ ಪ್ರಾಯದ ಮಂಜು ರಾಣಿ ಭಾಜನರಾಗಿದ್ದರು. ಆದರೆ, ಅವರ ಕನಸು ನನಸಾಗಲಿಲ್ಲ. 

ಚಾಂಪಿಯನ್ಶಿಪ್ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು. ಆದರೆ, ಅವರು ಸೆಮಿಫೈನಲ್ ಪಂದ್ಯದಲ್ಲಿ ಬುಸೆನಾಜ್ ವಿರುದ್ಧ 1-4 ಅಂತರದಲ್ಲಿ ಸೋಲು ಅನುಭವಿಸಿ ಕಂಚಿಗೆ ಸೀಮಿತರಾದರು. 

ಜತೆಗೆ, ಜಮುನಾ ರಾವ್ ಹಾಗೂ ಲೊವ್ಲಿನಾ ಅವರು ಕೂಡ ಕ್ರಮವಾಗಿ 54 ಮತ್ತು 69 ಕೆ.ಜಿ ವಿಭಾಗದ ಸೆಮಿಫೈನಲ್ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.