ಲೋಕದರ್ಶನ ವರದಿ: ಚೀನಿವಾರ ಪೇಟೆಯಲ್ಲಿ ಬಂಗಾರದ ಬೆಲೆ ಅಲ್ಪ ಕುಸಿತ ಕಂಡಿದೆ. ಹತ್ತು ಗ್ರಾಂ ಬಂಗಾರದ ಬೆಲೆಯು 31,400 ರೂ ನಿಗದಿಯಾಗಿತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿಗೆ ನಿರುತ್ಸಾಹ ಕಂಡು ಬಂದ ಕಾರಣ ಹಾಗೂ ಸ್ಥಳೀಯ ಆಭರಣಕಾರರು ಖರೀದಿಗೆ ಹಿಂಜರಿದಿದ್ದರಿಂದ ಈ ಇಳಿಕೆ ಕಂಡು ಬಂದಿದೆ ಎನ್ನಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಒಂದು ಸೆಂಟ್ ಬಂಗಾರಕ್ಕೆ .37 ಡಾಲರ್ನಷ್ಟು ಇಳಿಕೆಯಾಗಿದೆ. ಇನ್ನು ಬೆಳ್ಳಿ ದರದಲ್ಲೂ 250 ರೂ. ಕುಸಿತ ಕಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ ಬೆಳ್ಳಿಗೆ 39.040 ರೂ. ಇದೆ.