ಕೋಲ್ಕತಾ, ಏ 9, ಕೊರೋನಾ ವೈರಸ್ ಸೋಂಕು ವ್ಯಾಪಿಸಿರುವ ಹಿನ್ನೆಲೆಯಲ್ಲಿ ಹರಳು ಮತ್ತು ಚಿನ್ನಾಭರಣ ವಲಯ ಸಂಪೂರ್ಣ ಸ್ಥಗಿತಗೊಂಡಿದೆ. ದೇಶದ ಜಿಡಿಪಿಗೆ ಈ ವಲಯಕ್ಕೆ ಶೇ. 7ರಷ್ಟು ಕೊಡಗೆ ನೀಡುತ್ತಿದ್ದು, 5 ಮಿಲಿಯನ್ ಗೂ ಹೆಚ್ಚು ಜನರಿಗೆ ಉದ್ಯೋಗ ನಿಡುತ್ತಿದೆ. ಈ ವಲಯ ಪ್ರಮುಖವಾಗಿ ವಿವಾಹದ ಕಾಲದಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುತ್ತಿತ್ತು. ಆದರೆ, ಈ ಬಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ವಿವಾಹಗಳು ಮುಂದೂಡಲ್ಪಟ್ಟಿರುವುದರಿಂದ ವಿವಾಹದ ಖರೀದಿ ಕೂಡ ಸ್ಥಗಿತಗೊಂಡಿದೆ. ಭಾರತದಲ್ಲಿ ಸರಾಸರಿ 850 ಟನ್ ಚಿನ್ನ ಮತ್ತು ವಜ್ರದ ಬೇಡಿಕೆಯಿರುತ್ತಿತ್ತು. 2020ರಲ್ಲಿ ಕೂಡ 700ರಿಂದ 800 ಟನ್ ಚಿನ್ನ ಹಾಗೂ ವಜ್ರದ ಬೇಡಿಕೆಯಿತ್ತು. ಆದರೆ, ಈಗ ಈ ಖರೀದಿಯ ಮೇಲೆ ಶೇ. 30ರಷ್ಟು ಕಡಿಮೆಯಾಗಲಿದ್ದು, ಕಳೆದ ವರ್ಷಕ್ಕಿಂತ 690 ಟನ್ ಕಡಿತವಾಗಲಿದೆ ಎಂದು ಐಸಿಸಿ ತಿಳಿಸಿದೆ. ಸರ್ಕಾರ ಈ ವಲಯದ ಜನರಿಗೆ ಕೂಡ ಮುಂದಿನ 6 ತಿಂಗಳ ಅವಧಿಗೆ ಸಾಕಷ್ಟು ನೆರವು ಒದಗಿಸಬೇಕು ಎಂದು ಐಸಿಸಿ ಮನವಿ ಮಾಡಿದೆ.