ಗೋಕರ್ಣ: ಪಟ್ಟೆವಿನಾಯಕ ದೇವರ ಕಾತರ್ಿಕದೀಪೋತ್ಸವ

ಲೋಕದರ್ಶನ ವರದಿ

ಗೋಕರ್ಣ,28: ಇಲ್ಲಿನ ಕೋಟಿತೀರ್ಥಕಟ್ಟೆಯಲ್ಲಿರುವ ಪಟ್ಟೆವಿನಾಯಕ ದೇವರ ಕಾತರ್ಿಕದೀಪೋತ್ಸವ ಮಂಗಳವಾರ ಸಂಜೆ ವಿಜೃಂಭಣೆಯಿಂದ ನಡೆಯಿತು. ಮುಂಜಾನೆ ದೇವಾಲಯದಲ್ಲಿ ವಿವಿಧ ಧಾಮರ್ಿಕ ಕಾರ್ಯಕ್ರಮ ವಿಶೇಷ ಪೂಜೆ ನಡೆಯಿತು. ನಂತರ ದೇವಾಲಯ ಉತ್ಸವ ಕೋಟಿತೀರ್ಥಮಾರ್ಗವಾಗಿ ಮಹಾಬಲೇಶ್ವರ ಮಂದಿರಕ್ಕೆ ತೆರಳಿ  ಸಂಜೆ ದೇವಾಲಯಕ್ಕೆ ಮರಳಿತು. ನಂತರ ದೀಪೋತ್ಸವ 

ನಡೆಯಿತು.

        ದೇವರಿಗೆ ಅಷ್ಟಾವಧಾನ ಸೇವೆ ಮಹಾ ಮಂಗಳಾರತಿಯೊಂದಿಗೆ ಉತ್ಸವ ಕೊನೆಗೊಂಡಿತು. ದೇವಾಲಯದ  ಪೂಜಾ ಕೈಂಕರ್ಯ ಮತ್ತು ಉತ್ಸವವನ್ನು ಕೊಡಗಿ ಶಾಸ್ತ್ರಿ ಕುಟುಂಬದವರು  ನೆರವೇರಿಸಿದರು. ಇದರ ಪ್ರಯುಕ್ತ ಸಂಪೊರ್ಣ ಕೋಟಿತೀರ್ಥ ಕಟ್ಟೆಯನ್ನು ಹಣತೆಯಿಂದ ಬೆಳಗಲಾಯಿತು. ಇದರ ಜೊತೆ ಮಾರ್ಗದುದ್ದಕ್ಕೂ ವಿದ್ಯತ್ತ ದೀಪದ ವಿಶಾಷಾಲಂಕಾರ, ಸಿಡಿಮದ್ದು ಪ್ರದರ್ಶನ ಭಕ್ತರನ್ನು ಆಕಷರ್ಿಸಿತು. ರಾತ್ರಿ ನಡೆದ ಚಿತ್ರಾಕ್ಷಿಕಲ್ಯಾಣ ಯಕ್ಷಗಾನ ಪ್ರದರ್ಶನ ಭಕ್ತರ ಮನಸೂರೆಗೊಂಡಿತು.