ಲೋಕದರ್ಶನವರದಿ
ಹುನಗುಂದ08: ಭಾರತ ಧರ್ಮ ಪ್ರಧಾನವಾದ ದೇಶವಾಗಿದೆ. ದೇವಾಲಯಗಳ ಸಾಂಸ್ಕೃತಿಕ ತವರೂರು.ದೈವ ಭಕ್ತಿ ಮತ್ತು ಧರ್ಮ ಶ್ರದ್ದೆ ಈ ದೇಶದ ಜೀವಾಳ ಜಗತ್ತಿನ ಹಲವು ದೇಶಗಳಲ್ಲಿರುವ ದೇವಾಲಯಗಳ ಸಂಖ್ಯೆಗಿಂತ ಭಾರತ ದೇಶ ಇರುವ ದೇವಾಲಯಗಳ ಸಂಖ್ಯೆನೇ ಹಚ್ಚಾಗಿವೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಹೇಳಿದರು.
ಗುರುವಾರ ಪಟ್ಟಣದ ಗುಡ್ಡದಲ್ಲಿ ಪುನರ್ ನಿಮರ್ಿತ ಇತಿಹಾಸ ಪ್ರಸಿದ್ದ ಶ್ರೀ ಮಲ್ಲಿಕಾರ್ಜುನ ದೇವಾಲಯದ ಲೋಕಾರ್ಪಣೆ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದ ಅವರು ಯಾವ ಊರಲ್ಲಿ ದೇವಾಲಯ ಇರೋದಿಲ್ಲವೋ ಮತ್ತು ಯಾರ ಹಣೆಯ ಮೇಲೆ ವಿಭೂತಿ ಇರೋದಿಲ್ಲವೋ ಇವೆರಡಕ್ಕೂ ದಿಕ್ಕಾರ ಎಂದು ವೇದ ಹೇಳುತ್ತದೆ.ಆದರೆ ಹುನಗುಂದ ನಗರ ಊರ ಒಳಗಲ್ಲ ಊರಿಗೆ ಹೊಂದಿಕೊಂಡಿರುವ ಬೆಟ್ಟದ ಮೇಲೆ ಇರುವ ಇತಿಹಾಸ ಪ್ರಸಿದ್ದ ದೇವಾಲಯವನ್ನು ಪುನರ್ ನಿಮರ್ಿಸಿದ್ದು ಒಂದು ಪುರಸ್ಕಾರಕ್ಕೆ ಯೋಗ್ಯವಾದ ನಗರವಾಗಿದೆ.
ದೇವರು ತನ್ನ ಕೆಲಸ ಮಾಡಿಕೊಳ್ಳಲು ಒಬ್ಬೊಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎನ್ನುವುದ್ದಕ್ಕೆ ನಮ್ಮ ಮುಂದೆ ಇರುವ ಸತ್ಯ ನಿದರ್ಶನ ಹಲವಾರು ವರ್ಷಗಳಿಂದ ಜೀಣರ್ೋದ್ದಾರವಾಗದೇ ಇದ್ದ ಈ ದೇವಾಲಯ ಜೀಣರ್ೋದ್ದಾರವನ್ನು ಎಸ್.ಆರ್.ನವಲಿಹಿರೇಮಠ ಅವರಿಂದ ಮಾಡಿಕೊಂಡಿದ್ದು ಅವರ ಧರ್ಮ ಕಾರ್ಯವನ್ನು ಮೆಚ್ಚಿಕೊಂಡು ಈ ಕಾರ್ಯ ಮಾಡಿಕೊಂಡಂತೆ ಕಾಣುತ್ತದೆ ಎಂದರು.
ಉಜ್ಜಯನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿಕೊಂಡು ಮಾತನಾಡಿ ಈ ನಾಡು ಸಮೃದ್ದವಾಗಲಿ ಒಳ್ಳೆಯ ಮಳೆಯಾಗಲಿ, ಬೆಳೆ ಬರಲಿ,ಅತೀವೃಷ್ಠಿ ಅನಾವೃಷ್ಠಿ ದೂರವಾಗಿ ಸಮನ್ವಯ ದೃಷ್ಠಿ ಪ್ರಾಪ್ತಿಯಾಗಲಿ.
ರೈತರು ಬೆಳೆದ ಬೆಳೆಗೆ ಉನ್ನತ ಬೆಲೆ ಸಿಗಲಿ,ವ್ಯಾಪಾರ ವ್ಯವಹಾರ, ಉದ್ಯೋಗ ಅಭಿವೃದ್ದಿಯಾಗಲಿ, ವಧು ವರ ಕಲ್ಯಾಣವಾಗಲಿ, ವಿದ್ಯಾಥರ್ಿಗಳ ಭವಿಷ್ಯ ಉಜ್ವಲವಾಗಲಿ, ನಾವು ಜಾತಿ, ಧರ್ಮ, ಜನಾಂಗದವರು ಎನ್ನವುದ್ದಕ್ಕಿಂತ ಈ ದೇಶದ ಸತ್ಪ್ರಜೆಗಳಾಗಿ ಭಾರತದಲ್ಲಿ ಸಮನ್ವಯತೆ ಸಾರವನ್ನು ಬಿತ್ತುವಂತಾಗಲಿ.ಬಡವನಾಗಲಿ ಶ್ರೀಮಂತನಾಗಲಿ ತಾವು ದುಡಿದ ಸ್ವಲ್ಪ ಹಣವನ್ನು ದೇವರಿಗೆ ಮತ್ತು ಧಾಮರ್ಿಕ ಕಾರ್ಯಕ್ಕಾಗಿ ಖಚರ್ು ಮಾಡುವ ಏಕೈಕ ಧಾರ್ಮಿಕ ಪರಂಪರೆಯುಳ್ಳ ದೇಶವೇ ಭಾರತ ಸ್ವಾಮಿ ವಿವೇಕಾನಂದರು ಹೇಳುವಂತೆ ನಮ್ಮ ದೇಶ ದೇವರು, ಧರ್ಮ, ಆಧ್ಯಾತ್ಮ, ಗುರು ಪರಂಪರೆಯನ್ನು ನಂಬಿದ ಶ್ರೇಷ್ಠ ದೇಶವಾಗಿದೆ ಎನ್ನುತ್ತಾರೆ.
ನಮ್ಮ ದೇಶದಲ್ಲಿ ಮೆಕಾಲೆ ಶಿಕ್ಷಣ ಪದ್ಧತಿ ಹೋಗಿ ಹಳೆಯ ಕಾಲದ ಗುರುಕುಲ ಪದ್ಧತಿ ಶಿಕ್ಷಣ ತರುವುದು ಅವಶ್ಯ ಎಂದರು. ಎಸ್ಆರ್ಎನ್ಇ ಫೌಂಡೇಶನದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ನವಲಿಹಿರೇಮಠ ಮಾತನಾಡಿ ನಾನು ದುಡಿದಂತ ಹಣದಲ್ಲಿ ನನ್ನ ಸೇವೆ ಮಾಡು ಬಾ ಎಂದು ಬೆಟ್ಟದ ಮಲ್ಲಿಕಾಜರ್ುನ ಸ್ವಾಮಿ ಕರೆಸಿಕೊಂಡಿದ್ದರಿಂದ ನಾನು ಈ ಧಾಮರ್ಿಕ ಕಾರ್ಯ ಕೈ ಹಾಕಿದೆ.
ಈ ದೇವಾಲಯ ಜೀಣರ್ೋದ್ದಾರ ಮಾಡಲು ಹುನಗುಂದದ ಸಮಸ್ತ ನಾಗರಿಕರು ನನಗೆ ಕೈ ಜೋಡಿಸಿದ್ದರಿಂದ ಈ ದೊಡ್ಡ ಕಾರ್ಯ ಮಾಡಲು ಸಾಧ್ಯವಾಯಿತು. ನಮ್ಮ ದೇಶವು ಧಾಮರ್ಿಕ ಪರಂಪರೆಯು ನೆಲೆಗಟ್ಟನ್ನು ಹೊಂದಿದ್ದು, ಅನೇಕ ಸಂಸ್ಕೃತಿ, ಸಂಪ್ರದಾಯ ಭಕ್ತಿಗೆ ಅನೇಕ ಮಠಾಧೀಶರ ತ್ಯಾಗ ಗುಣವೇ ಕಾರಣವಾಗಿದೆ ಎಂದರು.
ಧಾರವಾಡದ ರೇವಣಸಿದ್ದೇಶ್ವರ ಮಹಾಮಠದ ಡಾ.ಬಸವರಾಜ ದೇವರು, ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿದರು. ಗುಡೂರ ಜಿ.ಪಂ. ಸದಸ್ಯ ಹಾಗೂ ದೇವಸ್ಥಾನ ಸಮಿತಿ ಅಧ್ಯಕ್ಷ ಶಶಿಕಾಂತ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್ಆರ್ಎನ್ಇ ಫೌಂಡೇಶನದ ಕಾರ್ಯದಶರ್ಿ ವಿಜಯಮಹಾಂತೇಶ ಗದ್ದನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಶೈಲ ಮತ್ತು ಉಜ್ಜಯನಿ ಪೀಠದ ಜಗದ್ಗುರಗಳನ್ನು 1001 ಕುಂಭ ಮೇಳದ ಮೆರವಣೆಗೆಯೊಂದಿಗೆ ಶ್ರೀ ಸಂಗಮೇಶ್ವರ ಪಾದಗಟ್ಟಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅನೇಕ ವಾಧ್ಯ ವೈಭವದೊಂದಿಗೆ ಗುಡ್ಡದ ಮಲ್ಲಿಕಾಜರ್ುನ ದೇವಾಲಯವನ್ನು ತಲುಪಿತು. ತಂಗಡಗಿಯ ಅಪ್ಪಣ್ಣ ಮಹಾಸಂಸ್ಥಾನಮಠದ ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು, ಅಮೀನಗಡ ಗಚ್ಚಿನಮಠದ ಪ್ರಭುಶಂಕರ ರಾಜೇಂದ್ರ ಮಹಾಸ್ವಾಮಿಗಳು, ಸುಕ್ಷೇತ್ರ ಅಂಕಲಿಮಠದ ವೀರಭದ್ರ ಮಹಾಸ್ವಾಮಿಗಳು, ಸಜ್ಜಲಗುಡ್ಡದ ದೊಡ್ಡಬಸವಾರ್ಯ ತಾತನವರು, ಸಿದ್ದನಕೊಳ್ಳದ ಡಾ.ಶಿವುಕಮಾರ ಸ್ವಾಮಿಗಳು, ರೇಖಾ ನವಲಿಹಿರೇಮಠ, ರಾಜುಗೌಡ ಪಾಟೀಲ, ಸೋಮಪ್ಪ ಆಲೂರ, ಬಾಲವ್ವ ಆಲೂರ, ಪುರಸಭೆ ಸದಸ್ಯರಾದ ಪ್ರವೀಣ ಹಳಪೇಟಿ, ಮಹೇಶ ಬೆಳ್ಳಿಹಾಳ, ಸಾಂತಪ್ಪ ಹೊಸಮನಿ, ಮುಖಂಡರಾದ ಶೇಖರಪ್ಪ ಬಾದವಾಡಗಿ, ಮಹಾಂತೇಶ ಹಳ್ಳೂರ, ನೀಲಪ್ಪ ಓಲೇಕಾರ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು. ಕಾರ್ಯಕ್ರಮವನ್ನು ಸಿದ್ದು ಶೀಲವಂತ ನಿರೂಪಿಸಿ ವಂದಿಸಿದರು.