ಲೋಕದರ್ಶನ ವರದಿ
ಕುಕನೂರು 16: ಈ ಜಗತ್ತಿನಲ್ಲಿ ದೇವರನ್ನ ಒಲಿಸಿಕೊಳ್ಳುವ ಸರಳ ವಿದಾನವೆಂದರೆ ಭಕ್ತಿ, ಭಕ್ತಿಯಿಂದ ದೇವರ ಕೃಪೆ ಹೊಂದಲು ಸಾಧ್ಯ ಎಂದು ಕುಕನೂರ ಅನ್ನದಾನೀಶ್ವರ ಮಠದ ಪೂಜ್ಯ ಮಹಾದೇವ ದೇವರು ಹೇಳಿದರು.
ಅವರು ಕುಕನೂರ ಪಟ್ಟಣದಲ್ಲಿ ಆಂಜನೇಯನ ಸಮಸ್ತ ಸದ್ಬಕ್ತರಿಂದ ಶನಿವಾರದಂದು ನಡೆದ ಅದ್ದೂರಿ ಹನುಮ ಜಯಂತಿ ಕಾರ್ಯಕ್ರಮ ಅಂಗವಾಗಿ ವೃದ್ದಾಶ್ರಮದಲ್ಲಿರುವ ವೃದ್ದರಿಗೆ ಮತ್ತು ಅನ್ನದಾನೀಶ್ವರ ಮಠದ ವಿಧ್ಯಾಥರ್ಿಗಳಿಗೆ ಸ್ವಿಟರ್ ವಿತರಣೆ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡುತ್ತಾ ಇಂದಿನ ಯುವಕರಲ್ಲಿ ದೇವರಲ್ಲಿ ನಂಬಿಕೆ ಮಾಯವಾಗಿ ದುಶ್ಚಟಗಳಿಗೆ ಬಲಿಯಾಗುತ್ತೀರುವ ಸಂದರ್ಭದಲ್ಲಿ ಕುಕನೂರ ಪಟ್ಟಣದ ಯುವಕರು ಹನುಮ ಜಯಂತಿ ನೆನಪಿನಲ್ಲಿ ವೃದ್ದರಿಗೆ ಮತ್ತು ವಿದ್ಯಾಥರ್ಿಗಳಿಗೆ ಸ್ವಿಟರ್ ವಿತರಣೆ ಮಾಡುವ ಮೂಲಕ ಮಾದರಿ ಯುವಕರಾಗಿದ್ದಾರೆ, ಜಯಂತಿಗಳು ಅರ್ಥಪೂರ್ಣ ಆಚರಣೆ ಯಾಗಬೇಕು ಎಂದು ಎಲ್ಲಾರು ಹೇಳುತ್ತಾರೆ ಆದರೆ ಈ ಯುವಕರು ಅದನ್ನು ಮಾಡಿ ತೋರಿಸುವ ಮೂಲಕ ಧರ್ಮವಂತರಾಗಿದ್ದಾರೆ ಮತ್ತು ಯುವಕರು ತಮ್ಮ ಅಮೂಲ್ಯವಾದ ಈ ಬದುಕನ್ನ ದುಶ್ಚಟ ಮುಕ್ತ ಬದುಕನ್ನಾಗಿ ಮಾಡಿಕೊಂಡು ಹನುಮಂತ ದೇವರಂತೆ ಭಕ್ತಿವಂತರಾಗಬೇಕು ಎದರು.
ಸ್ವಿಟರ್ ವಿತರಣೆ ಮಾಡಿ ಮಾತನಾಡಿದ ಯುವ ಮುಖಂಡ ಅನಿಲ್ ಆಚಾರ್ ದೇವರನ್ನ ಹುಡುಕಿ ಪೂಜಿಸುವುದಕ್ಕಿಂತ ಬಡವರಲ್ಲಿ ನೊಂದವರಲ್ಲಿ ದೇವರನ್ನ ಕಾಣಬೇಕು ಅಂದಾಗ ದೇವರ ಕೃಪೆ ಸಿಗಲು ಸಾಧ್ಯ, ಯುವಕರು ಆದರ್ಶಮಯ ಬದುಕು ಸಾಗಿಸಬೇಕು ಅವರಿಂದ ಸಮಾಜಕ್ಕೆ ಸಾಕಾಷ್ಟು ಉತ್ತಮ ಕಾರ್ಯಕ್ರಮಗಳು ದೊರೆಯಬೇಕು, ಕಲೆ ಸಾಹಿತ್ಯ ದಾಮರ್ಿಕ ಕಾರ್ಯಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು ಈ ದೇಶದ ಸಂಸ್ಕೃತಿ ಉಳಿಸಿ ಬೇಳೆಸುವ ಕಾರ್ಯ ಆಗಬೇಕು ಅಂದಾಗ ಅವರಿಗೆ ಜನ್ಮ ನೀಡಿದ ತಂದೆ ತಾಯಿಗಳ ಬದುಕು ಸಾರ್ಥಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗುರುಕುಲ ವಿಧ್ಯಾಶ್ರಮದ ವೃದ್ದರಿಗೆ ಮತ್ತು ಅನ್ನದಾನೀಶ್ವರ ಮಠದಲ್ಲಿರುವ ಬೋಡರ್ಿಂಗ ವಿಧ್ಯಾಥರ್ಿಗಳಿಗೆ ಸ್ವಿಟರ್ ವಿತರಣೆ ಮಾಡಲಾಯಿತು.
ನಂತರ ಮಾತನಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕಾಶೀಮ್ ಸಾಭ್ ಸಂಗಟಿ ದೇವರು ಕೊಟ್ಟ ಬದುಕನ್ನ ಕೇವಲ ಹಣಗಳಿಸಕ್ಕೆ ಮಾತ್ರ ಮೀಸಲು ಇಡಬಾರದು ದಾನ ಧರ್ಮಗಳ ಮೂಲಕ ಪುಣ್ಯವಂತರಾಗಿ ಬಾಳಿ ಬದುಕಬೇಕು, ಇದ್ದಾಗ ಬಡವರಿಗೆ ನೊಂದವರಿಗೆ ದಾನ ಧರ್ಮ ಮಾಡಿ ಪುಣ್ಯ ಸಂಪಾದನೆ ಮಾಡಬೇಕು ಅದೇ ಜೀವನದ ಮುಕ್ತಿಗೆ ದಾರಿಯಾಗಿದೆ ಇಂತಹ ಕಾರ್ಯವನ್ನ ನಮ್ಮ ಕುಕನೂರ ಪಟ್ಟಣದ ಯುವಕರು ಮಾಡುತ್ತೀರುವುದು ಶ್ಲಾಘನೀಯ ಕಾರ್ಯ ಎಂದರು.
ಈ ಸಂಧರ್ಭದಲ್ಲಿ ಸಿದ್ದು ಉಳ್ಳಾಗಡ್ಡಿ, ಬಸವರಾಜ ಹಾಲಕೆರೆ, ರಾಜು ದ್ಯಾಂಪುರ, ಮಂಜುನಾಥ ರೆಡ್ಡಿ, ಗವಿಸಿದ್ದಪ್ಪ ಎ ಎಸ್ ಐ, ಚಂದ್ರು ಕಳ್ಳಿಮಠ, ಪ್ರಕಾಶ ಬೋರಣ್ಣನವರ, ವಿರೇಶ ಸಬರದ, ಮಂಜುನಾಥ ಬಿಕ್ಷಾವತಿಮಠ, ಬಸವರಾಜ ಉಮಚಗಿ, ಮಂಜುನಾಥ ಚನ್ನಪ್ಪನಹಳ್ಳಿ, ಸುಬಾಷ್, ಪವನ, ವಿರೇಶ ಸಬರದ, ಅಶೋಕ, ಶಿವನಂದ, ಶಿವುಕುಮಾರ, ಮದುಚಂದ್ರ, ಪ್ರಕಾಶ, ಬಿ ಚಂಡೂರ, ಪ್ರದೀಪ, ಬಿ ಹಾಲಕೆರೆ ಮತ್ತು ಇತರರು ಇದ್ದರು.