ಜೀವನದ ಯಶಸ್ಸಿಗೆ ಗುರಿ ಮುಖ್ಯ: ಪೂರ್ಣಿ ಮಾ ಪಟ್ಟಣಶೆಟ್ಟಿಮಾ ಪಟ್ಟಣಶೆಟ್ಟಿ

ಬೆಳಗಾವಿ, 13: ಯಶಸ್ಸು ಪ್ರತಿಯೊಬ್ಬರ ಜೀವನಕ್ಕೆ ಅವಶ್ಯವಾಗಿದೆ, ಅದನ್ನು ಸಾಧಿಸಲು ವಿದ್ಯಾಥರ್ಿಗಳ ನಿರ್ವಹಣೆ, ಆತಂರಿಕ ಪ್ರೇರಣೆ, ಗುರಿ ಇಟ್ಟುಕೊಳ್ಳಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ದಿನನಿತ್ಯ ಓದಿನಲ್ಲಿ ಹಾಗೂ ಇನ್ನಿತರ ಚಟುವಟಿಕೆಯಲ್ಲಿ ಪಾಲ್ಗೋಳಬೇಕೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಪೂರ್ಣಿ ಮಾ ಪಟ್ಟಣಶೆಟ್ಟಿ ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು. 

ಇಲ್ಲಿನ ರಾಣಿಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ರವಿವಾರ 13 ರಂದು ಸಂಗೊಳ್ಳಿ ರಾಯಣ್ಣ ಘಟಕ  ಮಹಾವಿದ್ಯಾಲಯದದಿಂದ ಆಯೋಜಿಸಲಾಗಿದ್ದ,  ವಾಣಿಜ್ಯ ವಿಭಾಗದ ಸಂಘ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,

ಜೀವನದಲ್ಲಿ ಯಶಸ್ಸನ್ನು ಪಡೆಯಲು ವಿದ್ಯಾರ್ಥಿಗಳು ಪ್ರತಿಯೊಂದು ಕೆಲಸ ಕಾರ್ಯಗಳನ್ನು ಕಷ್ಟಪಟ್ಟು ಮಾಡದೇ ಇಷ್ಟಪಟ್ಟು ನಿರ್ವಹಿಸುವುದು ಮತ್ತು ಕಠಿಣ ಪರಿಶ್ರಮದ ಬದಲು ಬುದ್ಧಿವಂತಿಕೆಯನ್ನು ಉಪಯೋಗಿಸುವುದರಿಂದ ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಗುರಿ ತಲುಪಲು ಸಾಧ್ಯ ಎಂದು ಹೇಳುತ್ತಾ ದೈಹಿಕ ಧಾಡ್ರ್ಯದ ಜೊತೆಗೆ ಮಾನಸಿಕ ದೃಢತೆಯನ್ನು ಹೊಂದಿ ಯಶಸ್ಸಿನ ದಾರಿಯನ್ನು ಸುಗಮಗೊಳಿಕೊಳ್ಳಬಹುದು ಎಂದು ಹೇಳಿದರು. 

ಕನರ್ಾಟಕ ಇನ್ಸ್ಟಿಟ್ಯೂಟ ಆಫ್ ಕೋ. ಆಪರೇಟಿವ್ ಮ್ಯಾನೆಜಮೆಂಟ ಸಂಸ್ಥೆಯ ಪ್ರಾಂಶುಪಾಲ ಶಿವಕುಮಾರ ಮಾತನಾಡಿ, ಸಂತೋಷವೆಂಬುದು ಬಂಗಾರ, ಬೆಳ್ಳಿಯಿಂದ ಮಾಡಿದ ಆಭರಣಗಳಿಂದ ದೊರೆಯುವುದಿಲ್ಲ ಹೊರತಾಗಿ ಇದು ಮಾನವನ ಅಂತರಾತ್ಮಾದಲ್ಲಿ ವಾಸವಾಗಿರುತ್ತದೆ. ಆದ್ದರಿಂದ ಆಂತರಿಕ ಸೌಂದರ್ಯಕ್ಕೆ ಒತ್ತು ಕೊಡಬೇಕು ಎಂದರು.ಬದಲಾಗುತ್ತಿರುವ ಜಗತ್ತಿನಲ್ಲಿ ಸಾಕಷ್ಟು ತೊಂದರೆಗಳಿದ್ದು ಅವುಗಳಿಗೆ ಉತ್ತರ ಹುಡುಕುತ್ತಾ ನಮ್ಮನ್ನು ನಾವು ಆಧುನೀಕರಿಸಿಕೊಳ್ಳಬೇಕು ಎಂದರು.

  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ಸಿ.ಎಂ.ತ್ಯಾಗರಾಜ ರವರು ಮಾತನಾಡುತ್ತಾ ವಿದ್ಯಾರ್ಥಿಗಳ ದೃಷ್ಟಿಕೋನ, ಶ್ರದ್ಧೆ, ಸಕಾರಾತ್ಮಕ ಮನೋಭಾವನೆ, ವೇಳೆಯ ನಿರ್ವಹಣೆ ಬಗ್ಗೆ ಗಮನ ಕೊಡಬೇಕಾದದ್ದು ಅವಶ್ಯವಿದೆ ಮತ್ತು ವ್ಯವಸ್ಥಾಪಕರ ಕಣ್ಣಿನಲ್ಲಿ ನಿಂಬೆಹಣ್ಣಿನ ದೃಷ್ಟಿಕೋನದ ಉದಾಹರಣೆಯೊಂದಿಗೆ ವಿದ್ಯಾಥರ್ಿಗಳು ತಮ್ಮ ಗುರಿ ಮುಟ್ಟಲು ತಕ್ಕ ಕೌಶಲ್ಯಗಳನ್ನು ಹೊಂದಬೇಕೆಂದು ಸಲಹೆ ನೀಡಿದರು.

ಅಧ್ಯಕ್ಷತೆಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಿ.ಎಸ್.ನಾವಿಯವರು ಮಾತನಾಡುತ್ತಾ ವಾಣಿಜ್ಯ ವಿಭಾಗದ ಶೈಕ್ಷಣಿಕ ವರ್ಷದ ವಿವಿಧ ಕಾರ್ಯಕ್ರಮಗಳ ರೂಪರೇಷೆಗಳನ್ನು ಹೇಳುತ್ತಾ ಸಾಧನೆಗೆ ಉತ್ಸಾಹ(ಕಚಿಠಟಿ), ಹಸಿವು (ಊಣಟಿರಜಡಿ) ಮತ್ತು ಶಿಸ್ತು (ಆಛಿಠಿಟಟಿಜ) ಗಳಿಂದ ಕಊಆಹೊಂದುವುದು ಅವಶ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳ ಅನುಕೂಲಕ್ಕಾಗಿ ವಿವಿಧ ವಿಷಯಗಳ ಸ್ಟಡಿ ಮಟಿರಿಯಲಗಳನ್ನು ಬೀಡುಗಡೆ ಮಾಡಲಾಯಿತು.

ಶಿವಾನಂದ ಮತ್ತು ತಂಡದವರು ಪ್ರಾರ್ಥಿ ಸಿದರು ಪ್ರೀತಿ ಚಿಂಚಲಿ ಸ್ವಾಗತಿಸಿದರು ಪ್ರೊ. ಅಶ್ವಿನಿ ಜಾಮುನಿ ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು ಯಾಸ್ಮೀನ ಬೇಗಂ ನದಾಫ್, ನಾಝಿಯಾ ಪಟವೇಗರ ಮತ್ತು ರೇಣುಕಾ ಮಾಂಡು, ಹಾಗೂ ವಿದ್ಯಾಥರ್ಿ ಪ್ರತಿನಿಧಿಗಳಾದ ವಿನಯ ಈರಣ್ಣವರ, ಉಮರ ಫಾರುಕ್ ಹೆಬ್ಬಳ್ಳಿ ಮತ್ತು ಇನ್ನಿತರ ಶಿಕ್ಷಕ & ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪೂಣರ್ಿಮಾ ಕಮ್ಮಾರ ವಂದಿಸಿದರು ಪ್ರಿಯಾಂಕ ಕುಬಡ್ಡಿ ನಿರೂಪಿಸಿದರು.