ಗೋವಾ ಕಡಲ ಸಮಾವೇಶ: ಅಜಿತ್ ಧೋವಲ್ ಚಾಲನೆ

 ಪಣಜಿ, ಅ 04:  ಎರಡನೇ ಗೋವಾ ಕಡಲ ಅಧಿವೇಶನಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಶುಕ್ರವಾರ ಚಾಲನೆ ನೀಡಿದರು. ಕಡಲ ನೆರೆಹೊರೆಯವರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಬೆಳೆಸುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಯು ನಗರದ ಸಮೀಪದ ವೆರೆಮ್ನ ನೇವಲ್ ವಾರ್ ಕಾಲೇಜಿನ ಆಶ್ರಯದಲ್ಲಿ - 'ಗೋವಾ ಮ್ಯಾರಿಟೈಮ್ ಕಾನ್ಕ್ಲೇವ್ 2019' ಅನ್ನು ಆಯೋಜಿಸುತ್ತಿದೆ. ಎರಡು ದಿನಗಳ ಕಾಲ ಈ ಸಮಾವೇಶ ನಡೆಯಲಿದೆ.  ಮೊದಲ ಸಮಾವೇಶ 2017ರಲ್ಲಿ ಗೋವಾದಲ್ಲಿಯೇ ನಡೆದಿತ್ತು.