ದೇಶದಲ್ಲಿ ಗೋ ಹತ್ಯೆ, ಶಿಶು ಹತ್ಯೆ ಮಾಡುವುದರಿಂದ ಪ್ರಕೃತಿ ವಿಕೋಪ ಸಂಬವಿಸುತ್ತಿವೆ

ಅಥಣಿ 23:   ನದಿ ನೀರಿನಲ್ಲಿ ಸತ್ತ ದನಕರಗಳನ್ನು ಎಸೆಯುವದು, ಮಲ ಮೂತ್ರ ವಿಸರ್ಜನೆ ಮಾಡುವುದರಿಂದ ಗಂಗಾದೇವಿ ಕೋಪಗೊಂಡಿದ್ದಾಳೆ ಹಾಗೂ ದೇಶದಲ್ಲಿ ಗೋ ಹತ್ಯೆ, ಶಿಶು ಹತ್ಯೆ ಮಾಡುವುದರಿಂದ ಪಾಪವು ಹೆಚ್ಚಾಗಿ ಪ್ರಕೃತಿ ವಿಕೋಪಗೊಂಡು ಜಲ ಪ್ರಳಯದಂತ ಅವಗಡಗಳು ಸಂಭವಿಸುತ್ತಿವೆ ಅದಕ್ಕಾಗಿ ನದಿ ನೀರನ್ನು ಹೊಲಸು ಮಾಡದೆ ಸ್ವಚ್ಚವಾಗಿ ಇರಿಸಿಕೊಳ್ಳಬೇಕು ಎಂದು ಬಂಡಿಗಣಿಯ ಚಕ್ರವತರ್ಿ ದಾನೇಶ್ವರ ಶ್ರೀಗಳು ಹೇಳಿದರು.

ಅವರು ಅಥಣಿ ತಾಲೂಕಿನ ಸವದಿಯಲ್ಲಿ ಗಂಗಾದೇವಿಗೆ ಉಡಿತುಂಬುವ ಹಾಗೂ ಪಾರಮಾರ್ಥಿಕ ಸಪ್ತಾಹದ ಸಾನಿಧ್ಯ ವಹಿಸಿ ಮಾತನಾಡಿ ಪ್ರಕೃತಿಯೇ ಗುರು, ಗಗನ ಲಿಂಗ, ಜಗವೇ ಕೂಡಲ ಸಂಗಮ ಎಂದು ಶರಣರು ಹೇಳಿದ ಮಾತನ್ನು ನಾವೆಲ್ಲ ಮರೆತಿದ್ದೇವೆ, ಪ್ರಕೃತಿಯನ್ನು ಹಿಂಸಿಸಿ ಅದರ ಸಹನೆಯನ್ನು ಪರೀಕ್ಷಿಸಿದ್ದೇವೆ, ಈಗ ಆ ಪ್ರಕೃತಿ ಮಾತೆಯ ಸಹನೆಯ ಕಟ್ಟೆ ಒಡೆದಿದ್ದು ಇಂತಹ ಜಲ ಪ್ರಳಯಗಳ ಮೂಲಕ ಕೋಪವನ್ನು ಪ್ರದರ್ಶಿಸುತ್ತಿದ್ದಾಳೆ, ಅವಳ ಕೋಪ ತಡೆಯಲು ನಾವೆಲ್ಲ ಮತ್ತೆ ಪ್ರಕೃತಿ ಮಾತೆ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಚಿಕ್ಕಾಲಗುಂಡಿಯ ಮಹಾಂತ ದೇವರು ಮಾತನಾಡಿ ಭಕ್ತಿಯ ಮೂಲಕ ಭಗವಂತನನ್ನು ಒಲಿಸಿಕೊಳ್ಳುವ ಸರಳ ಮಾರ್ಗವನ್ನು ಶರಣರು ತೋರಿಸಿಕೊಟ್ಟಿದ್ದಾರೆ, ನಾವೆಲ್ಲ ಅದನ್ನು ಅನುಸರಿಸಿದ್ದೇ ಆದಲ್ಲಿ ಭಗವಂತ ನಮ್ಮ ಪ್ರತಿ ಕಾರ್ಯದಲ್ಲೂ ಕಾಣಸಿಗುತ್ತಾನೆ ಎಂದರು.

       ಪ್ರಾರಂಭದಲ್ಲಿ ಗ್ರಾಮದೇವತೆಯಾದ ಮಾರುತೇಶ್ವರ ಹಾಗೂ ಕೃಷ್ಣಾ ನದಿಯ ದಡದಲ್ಲಿ ಗಂಗಾದೇವಿಯ, ಬಸವೇಶ್ವರ, ಭೂದೇವಿ ಹಾಗೂ ಮಹಾಲಕ್ಷ್ಮೀದೇವಿಯ ವಿಶೇಷ ಪೂಜೆ ನೈವೇದ್ಯ ನಡೆಯಿತು. ಸತ್ಯನಾರಾಯಣ, ವರದಶಂಕರ ಪೂಜೆ ಕೂಡ ನಡೆಯಿತು. 

          ಇದೇ ಸಂದರ್ಭದಲ್ಲಿ ಸಹಸ್ರಾರು ಮುತ್ತೈದೆಯರಿಗೆ ಉಡಿ ತುಂಬಿ ಸರ್ವರಿಗೂ ಹುಗ್ಗಿ ಹೋಳಿಗೆ ಪಂಚ ಪಕ್ವಾನ್ನದ ಪ್ರಸಾದ ನೀಡಲಾಯಿತು. ಇದೇ ಸಂದರ್ಭದಲ್ಲಿ ದಾನೇಶ್ವರ ಶ್ರೀಗಳನ್ನು ಸವದಿ ಹಾಗೂ ತುಳಜಾಪೂರ ಸೊಲ್ಲಾಪೂರ ಸದ್ಭಕ್ತರು ಸನ್ಮಾನಿಸಿ ಸತ್ಕರಿಸಿದರು.

ವೇದಿಕೆಯಲ್ಲಿ ಭಾವಲತ್ತಿಯ ವಿಜಯ ವೇದಾಂಗ ಶ್ರೀಗಳು, ರಾಚಗೌಡ ಪಾಟೀಲ, ಬಸವರಾಜ ಪಾಟೀಲ ,ಅನಿಲ ದುಲಾರಿ, ಶ್ರೀಕಾಂತ ವಾಲಿ, ಸಿದ್ರಾಮ ಬಿರಾಜದಾರ, ಅಪ್ಪಣ್ಣ  ಅವಟಿ, ನಭಿಸಾಬ ಮುಲ್ಲಾ ಹಾಗೂ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

             ಕಾರ್ಯಕ್ರಮವನ್ನು ವಾಯ್. ಆರ್. ಯಲ್ಲಟ್ಟಿ ಸ್ವಾಗತಿಸಿದರು. ಎಸ್. ಎಸ್. ಮನ್ನಾಪೂರ ನಿರೂಪಿಸಿ ಮುರಿಗೆಪ್ಪಾ ಮಾಲಗಾರ ವಂದಿಸಿದರು.