ಲೋಕದರ್ಶನ ವರದಿ
ಬೆಳಗಾವಿ 07: ಶರಣರ ಆಶಯದಂತೆ ಪ್ರತೀ ವರ್ಷ, ಜನವರಿ 11 ರಿಂದ 14ರ ತನಕ ಕೂಡಲಸಂಗಮದಲ್ಲಿ ನಡೆಯುವ 'ಶರಣಮೇಳ' ಬಸವಾಭಿಮಾನಿಗಳ ಬಸವಭಕ್ತರ ಲಿಂಗಾಯತ ಧಮರ್ೀಯರ ಜಾಗತಿಕ ಸಮಾವೇಶವಾಗಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಜನರನ್ನು ಆಕಷರ್ಿಸುತ್ತಿದೆ. 1988ರಲ್ಲಿ ಶರಣರಿಂದ ಶರಣರಿಗಾಗಿಯೇ ಶರಣರೇ ಹಮ್ಮಿಕೊಂಡ ಈ 'ಶರಣ ಮೇಳ' ಅವ್ಯಾಹತವಾಗಿ ಯಾವುದೇ ಜಾತಿ ಮತ ಪಂಥ ಪ್ರಾಂಥಗಳ ಭೇದವಿಲ್ಲದೆ 'ಸಮಾನತೆ' ಮತ್ತು 'ಸಹೋದರತೆ'ಯೇ ಧ್ಯೇಯವಾಗಿ "ದೇವರೊಬ್ಬರೆ ತಂದೆ, ಮನುಜರೆಲ್ಲರೂ ಒಂದೇ" ಎಂಬ ತತ್ವವನ್ನು ಸಾರುತ್ತಾ ಬರುತ್ತಿದೆ. ಅನ್ನ ದಾಸೋಹವಲ್ಲದೆ, ಜ್ಞಾನ ದಾಸೋಹಕ್ಕೂ ಒತ್ತುಕೊಡುವ "ಶರಣಮೇಳ" - ವಿಶ್ವಗುರು ಬಸವಣ್ಣನವರು ದೇವರಿಂದ ದಿವ್ಯಾನುಗ್ರಹ ಹೊಂದಿ, ನಿರಾಕಾರ ಪರಮಾತ್ಮನಿಗೆ "ಇಷ್ಟಲಿಂಗ"ದ ರೂಪುಕೊಟ್ಟು, ತ್ರಾಟಕ ಯೋಗಕ್ಕೂ, ಸಮಾನತೆ ಸಾರಲೂ ಅನುಕೂಲವಾಗಲೆಂದು ರೂಪಿಸಿದ ದಿನ - ಜನವರಿ 14 - "ಬಸವಕ್ರಾಂತಿ" (ಸಂಕ್ರಮಣ)ದಿನ ಎಂದು ಆಚರಿಸಲಾಗುತ್ತಿದೆ. ಅದರ ನಿಮಿತ್ತ ಶರಣಮೇಳ ನಡೆಯುತ್ತಿದ್ದು, ಎಲ್ಲರೂ ಪಾಲ್ಗೊಂಡು ಪರಿಶುದ್ಧಾತ್ಮರಾಗಲು ಕರೆನೀಡಿದರು. ಶರಣರು ದಯಪಾಲಿಸಿದ ಷಟಸ್ಥಲದ ವಿವರಗಳನ್ನು ಅಲ್ಲಮಪ್ರಭುಗಳ ವಷನದ ಆಧಾರದಲ್ಲಿ ವಿವೇಚಿಸಿ ಮಂತ್ರಮುಗ್ಧಗೊಳಿಸಿದರು.
33 ನೇ ಶರಣಮೇಳ ಪ್ರಚಾರಾರ್ಥ, ಕೂಡಲಸಂಗಮ ಬಸವಧರ್ಮ ಮಹಾ ಜಗದ್ಗುರು ಪೀಠಾಧ್ಯಕ್ಷೆ, ದ್ವಿತೀಯ ಮಹಿಳಾ ಜಗದ್ಗುರುಗಳಾದ ನಿರಂಜನ ಮಹಾಜಗದ್ಗುರು ಮಾತೆ ಗಂಗಾದೇವಿ ತಾಯಿಯವರು ದಿವ್ಯ ಸನ್ನಿಧಾನ ವಹಿಸಿ, ಆಶೀರ್ವಚನವನ್ನು ನೀಡಿದರು. ದಿ.4ರ ಸಂಜೆಯಂದು ಬೆಳಗಾವಿ ನಗರದ ಕಣಬಗರ್ಿರಸ್ತೆಯ 'ವಿಶ್ವಗುರು ಬಸವ ಮಂಟಪದಲ್ಲಿ 'ವಿಶ್ವಧರ್ಮ ಪ್ರವಚನ" ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ಜಿಲ್ಲಾ ಲಿಂಗಾಯತ ಧರ್ಮ ಮಹಾಸಭಾ, ರಾಷ್ಟ್ರೀಯ ಬಸವದಳ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ಗಣಾಚಾಋದಳ, ಬಸವಾಂಕುರ ಮತ್ತು 'ಶರಣಮೇಳ ಉತ್ಸವ ಸಮಿತಿ'ಗಳ ಸಹಯೋಗದಲ್ಲಿ ಆಯೋಜಿಸಲಾಯ್ತು.
ಶರಣ ಶಂಕರ್ ಗುಡಸ್, ಉದ್ಯಮಿಗಳು ಮತ್ತು ರಾಷ್ಟ್ರೀಯ ಬಸವಸೇನಾದ ಬೆಳಗಾವಿ ಜಿಲ್ಲಾಧ್ಯಕ್ಷರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇನ್ನೋರ್ವ ಅತಿಥಿಗಳಾದ ಕಾಯಿಪಲ್ಲೆ ಮಾರುಕಟ್ಟೆಯ ಮುಖ್ಯಸ್ಥರಾದ ಶರಣ ಸಂಜಯ ಭಾವಿಯವರು ಭಾಗವಹಿಸಿದ್ದರು.
ಸದ್ಗುರು ಬಸವರತ್ನಾ ಮಾತಾಜಿ ವೇದಿಕೆಯನ್ನು ಅಲಂಕರಿಸಿದ್ದರು, ಸದ್ಗುರು ಅನಿಮಿಷಾನಂದ ಸ್ವಾಮೀಜಿಯವರು ಸಮ್ಮುಖವಹಿಸಿ ಸಾಮೂಹಿಕ ಪ್ರಾರ್ಥನೆಗೆ ಚಾಲನೆಕೊಟ್ಟು, ಬಸವಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು. ವಿಶ್ವಗುರು ಬಸವ ಮಂಟಪದ ಸಂಚಾಲಕರದ ಸದ್ಗುರು ಪ್ರಭುಲಿಂಗ ಸ್ವಾಮೀಜಿಗಳು ನೇತೃತ್ವ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಶರಣ ಕೆ. ಬಸವರಾಜ, ಅಧ್ಯಕ್ಷರು, ರಾಷ್ಟ್ರೀಯ ಬಸವ ದಳ, ಬೆಳಗಾವಿ ಇವರು ವಹಿಸಿ ಮಾತನಾಡಿದರು. ಸ್ವಾಗತವನ್ನು ಶರಣರಾದ ರಮೇಶ ಭೈರಾಜಿ ಕೋರಿದರು. ಶರಣ ಶರಣಪ್ರಸಾದ್ ಸಂಘಟನೆ ಕುರಿತು ಮಾತನಾಡಿದರು. ಶರಣೆಯರಾದ ಸುನೀತಾ ಚಿನಿವಾರ್ ಮತ್ತು ಮಠದ್ ರವರು ಬಸವಗುರು ಪೂಜೆ ನೆರವೇರಿಸಿದರು. ಬಸವಾಂಕುರ ಮಕ್ಕಳು ಭಾಗವಹಿಸಿ ಉತ್ಸಾಹ ತುಂಬಿದರು. ಶರಣೆ ನೀಲಗಂಗಾ ಪಾಟೀಲ ವಂದಿಸಿದರು. ರಾಷ್ಟ್ರೀಯ ಬಸವದಳದ ಕಾರ್ಯದಶರ್ಿ ಶರಣ ಆನಂದ ಗುಡಸ್ ನಿರೂಪಿಸಿದರು.