ಏಡ್ಸ್‌ ರೋಗಿಗಳಿಗೆ ಧೈರ್ಯ ತುಂಬೋನ: ಡಾ.ಸವಡಿ

Giving courage to AIDS patients: Dr. Savadi

ಗಂಗಾವತಿ 02:  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಹಾಗೂ ಜಿಲ್ಲಾ ಜಿಲ್ಲಾ ಟಾಸ್ಕ್‌ ಪೋರ್ಸ್‌ ಸಮಿತಿ ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೊಪ್ಪಳ ಮತ್ತು ಉಪವಿಭಾಗ ಆಸ್ಪತ್ರೆ ಗಂಗಾವತಿ ಇವರ ಸಂಯೋಗದಲ್ಲಿ ಆಸ್ಪತ್ರೆ ಆವರಣದಲ್ಲಿ   ವಿಶ್ವ ಏಡ್ಸ್‌ ದಿನಾಚರಣೆಗೆ ಚಾಲನೆ ನೀಡಲಾಯಿತು. 

ನಂತರ ಮಾತನಾಡಿದ ಉಪವಿಭಾಗ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಈಶ್ವರ ಶಿ,ಸವಡಿ  ಏಡ್ಸ್‌ ರೋಗಿಗಳಿಗೆ ಧೈರ್ಯ ತುಂಭೋಣ ಈ ಬಗ್ಗೆ ಜಾಗೃತಿ ಮೂಡಿಸೋಣ ಇಂದು ವಿಶ್ವ ಏಡ್ಸ್‌ ದಿನ. ಹಲವರ ಜೀವ ಬಲಿ ಪಡೆದಿರುವ ಈ ರೋಗದ ವಿರುದ್ಧ ಜಾಗೃತಿ ಮೂಡಿಸಬೇಕಾಗಿರುವುದು ಬಹಳ ಅಗತ್ಯ. ಸೂಕ್ತ ಶಿಕ್ಷಣ ಮತ್ತು ಜಾಗೃತಿಯಿಂದ ಈ ರೋಗದ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ಬಲ ತರಲು ಸಾಧ್ಯ ಏಡ್ಸ್‌  ಹೀಗೆಂದ ತಕ್ಷಣ ಎಲ್ಲರೂ ಬೆಚ್ಚಿಬೀಳುತ್ತಾರೆ. ಸುಮಾರು ನಾಲ್ಕು ದಶಕಗಳಿಂದ ಹೆಚ್‌ಐವಿ/ಏಡ್ಸ್‌ ಪ್ರಪಂಚದಾದ್ಯಂತ ಗಂಭೀರವಾದ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಇಷ್ಟು ವರ್ಷದಲ್ಲಿ ಸಾಕಷ್ಟು ಮಂದಿ ಈ ಕಾಯಿಲೆಗೆ ಬಲಿಯಾಗಿದ್ದಾರೆ.  

ಗಂಗಾವತಿ ತಾಲೂಕಿನಲ್ಲಿರುವ 3 ಸಾವಿರ ಏಡ್ಸ್‌ ರೋಗಿಗಳು ಇದ್ದಾರೆ,ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ  ಈ ತಿಂಗಳಲ್ಲಿ ಐದು ಜನ ಏಡ್ಸ್‌ ಇದ್ದ ಮಹಿಳೆಯರಿಗೆ  ಡಿಲೇವರಿ ಮಾಡಲಾಯಿತು ಹಾಗೂ ಜತೆಗೆ, ಈ ರೋಗ ಮತ್ತು ರೋಗಿಗಳ ಬಗ್ಗೆ ಒಂದಷ್ಟು ತಪ್ಪು ತಿಳುವಳಿಕೆಗಳೂ ಇವೆ. ಇಂತಹ ತಪ್ಪು ತಿಳುವಳಿಕೆಗಳನ್ನು ದೂರ ಮಾಡಿ ಏಡ್ಸ್‌ ರೋಗಿಗಳಿಗೆ ಧೈರ್ಯ ತುಂಬುವ, ಈ ಹೋರಾಟದಲ್ಲಿ ಅವರಿಗೆ ಬಲವಾಗಿ ನಿಲ್ಲುವುದು ಕೂಡಾ ಎಲ್ಲರ ಜವಾಬ್ದಾರಿ. ಆಗ ಮಾತ್ರ ಏಡ್ಸ್‌ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ಬಲ ಬರುವುದರಲ್ಲಿ ಸಂಶಯವೇ ಇಲ್ಲ ಉಪವಿಭಾಗ ಆಸ್ಪತ್ರೆಯಿಂದ ಬ್ಯಾಂಡ್ ಮೇಳ ಕೋಲಾಟ ಕಲಾತಂಡ ಹೆಜ್ಜೆ ಮೇಳದೊಂದಿಗೆ ಬಸವಣ್ಣ ಸರ್ಕಲ್,ಮಲ್ಲಿಕಾರ್ಜುನ ಮಠ ಬಸ್ಟ್ಯಾಂಡ ಶ್ರೀ ಕೃಷ್ಣ ದೇವರಾಯ ಸರ್ಕಲ್ ನಲ್ಲಿ ಜಾಥಾ ಮುಕ್ತಾಯಗೊಳ್ಳುವುದು ಎಂದರು. 

ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ   ಪಾಟೀಲ್ ಮಾತನಾಡಿ ಶಿಕ್ಷಣ ಮತ್ತು ಸೂಕ್ತ ಜಾಗೃತಿಯಿಂದ ಮಾತ್ರ ಏಡ್ಸ್‌ ಬಗೆಗಿನ ಸಂದೇಹ, ತಪ್ಪು ತಿಳುವಳಿಕೆಯನ್ನು ದೂರ ಮಾಡಲು ಸಾಧ್ಯ. ಜತೆಗೆ, ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಪ್ರೀತಿ ತೋರಿ ಈ ಹೋರಾಟದಲ್ಲಿ ಅವರಿಗೆ ಧೈರ್ಯ ತುಂಬುವ, ಮಾನಸಿಕವಾಗಿ ಕುಗ್ಗದಂತೆ ಮಾಡುವ ಕೆಲಸವನ್ನೂ ಎಲ್ಲರೂ ಮಾಡಬೇಕಾಗಿದೆ. ಇಂತಹ ಜಾಗೃತಿಗೆ ಇದು ಸಕಾಲವಾಗಿದೆ. ಇದೇ ಉದ್ದೇಶದಿಂದ ಡಿಸೆಂಬರ್ 1 ರಂದು ವಿಶ್ವ ಏಡ್ಸ್‌ ದಿನವನ್ನು ಆಚರಣೆ ಮಾಡಲಾಗುತ್ತದೆ. ಏಡ್ಸ್ನಿಂದ ಬಳಲುತ್ತಿರುವವರು ಎದುರಿಸುತ್ತಿರುವ ಕಳಂಕ, ತಾರತಮ್ಯದ ಭಾವನೆಯನ್ನು ದೂರ ಮಾಡಿ ಒಗ್ಗಟ್ಟಾಗಿ ಏಡ್ಸ್‌ ಮುಕ್ತ ಸಮಾಜದ ನಿರ್ಮಾಣ ಮಾಡುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ’ಅಸಮಾನತೆಗಳನ್ನು ದೂರವಾಗಿಸಿ, ಏಡ್ಸ್‌ ಅನ್ನು ಕೊನೆಗೊಳಿಸಿ’  ಘೋಷವಾಕ್ಯದಿಂದ ಏಡ್ಸ್‌ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ದಿನದಂದು ಹಂಚಿಕೊಳ್ಳುವ ಸಂದೇಶಗಳು ಇಲ್ಲಿವೆ. ಏಡ್ಸ್ನಿಂದ ಈಗಾಗಲೇ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ, ಶಿಕ್ಷಣ ಮತ್ತು ರೋಗದ ಬಗ್ಗೆ ಸಮರ್ಥ ಜಾಗೃತಿಯಿಂದ ನಾವು ಈ ಕಾಯಿಲೆಯನ್ನು ದೂರ ಮಾಡಬಹುದು ಎಂದು ಸಾರ್ವಜನಿಕರಿಗೆ ಇಂತಹ ಜಾಗೃತಿಗೆ ಇದು ಸಕಾಲ. ಏಡ್ಸನ್ನು ಈ ಪ್ರಪಂಚದಿಂದ ದೂರ ಮಾಡಲು ಒಗ್ಗಟ್ಟಾಗಿ ಪ್ರಯತ್ನಿಸೋಣ. ಏಡ್ಸ್ನಿಂದ  ಪ್ರೀತಿ ನೀಡೋಣ, ಈ ಕಾಯಿಲೆ ವಿರುದ್ಧದ ಹೋರಾಟಕ್ಕೆ ಬಲ ತುಂಬೋಣ ಎಂದು ಸಲಹೆ ನೀಡಿದರು.  

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮೌಲಾಸಾಬ, ನಗರ ಯೋಜನಾ ಪ್ರಾದಧಿಕಾರ ಅಧ್ಯಕ್ಷ ಸೈಯದ್ ಖಾದ್ರಿ,ಗಂಗಾವತಿ ನಗರ ಪೊಲೀಸ್ ಠಾಣೆ ಪಿಐ ಪ್ರಕಾಶ ಮಾಳಿ,ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ತಟ್ಟಿ, ಹೊನ್ನೂರುಸಾಬ,ಚಂದ್ರಶೇಖರ, ಶರಣಪ್ಪ,ಡಾ.ರವೀಂದ್ರನಾಥ, ಡಾ.ನಂದಕುಮಾರ, ತಾಲೂಕು ವೈದ್ಯಾಧಿಕಾರಿಗಳಾದ ಡಾ. ಗೌರಿ ಶಂಕರ್,ಡಾ. ನಾಗರಾಜ್ ಡಾ. ಮಲ್ಲಿಕಾರ್ಜುನ ನರ್ಸಿಂಗ್ ಹೋಮ್,ಡಾ.ಮೇಧಾ ಡಾ.ಮಲ್ಲನಗೌಡ, ಎ ಎಸ್ ಎನ್ ರಾಜು,ಡಾ. ಸತೀಶ್ ರಾಯ್ಕರ್, ಡಾ.ಬಸವರಾಜ ಅಯ್ಯೋದ್ಯ, ಡಾ.ಸುನೀಲ್ ಅರಳಿ, ಸಾದಿಯ,ಡಾ.ಶರಣ ಬಸವ,ಡಾ.ಅಬಿದಾ ಹುಸೇನ್, ವಿಜಯಗೌಡ, ಗುರುರಾಜ ಉಮಚಗಿ, ಆಶಾ ಕಾರ್ಯಕರ್ತೆ ಸೇರಿದಂತೆ ಇತರರು ಇದ್ದರು.