ಪುಣೆ, ಮಾರ್ಚ್ 26,ಪುಣೆಯಲ್ಲಿ ಕಳೆದ ಎರಡು ದಿನಗಳಲ್ಲಿ ಕನಿಷ್ಠ 17,749 ಜನರು ವಾಹನ ಚಾಲನೆ ಮತ್ತು ಅಗತ್ಯ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗಲು ಅನುಮತಿ ಕೊಡಬೇಕೆಂದು ಪೊಲೀಸರ ಸಹಾಯಕ್ಕಾಗಿ ದುಂಬಾಲು ಬಿದ್ದಿದ್ದಾರೆ. ವಾಟ್ಸಾಪ್ ಮತ್ತು , ಟ್ವಿಟರ್ ಮತ್ತು ಇಮೇಲ್ ಮೂಲಕ ಪುಣೆ ನಗರ ಪೊಲೀಸರನ್ನು ಸಂಪರ್ಕಿಸಿ ಅನುಮತಿ ಕೊಡಿ ಎಂದು ಮನವಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೇಕಡ 50 ಪ್ರತಿಶತದಷ್ಟು ವಿನಂತಿಗಳು ವೈದ್ಯಕೀಯ ಸಹಾಯದ ಜನರಿಂದ, 20 ಶೇಕಡಾ ಆಸ್ಪತ್ರೆಗಳ ಸಿಬ್ಬಂದಿಗಳಿಂದ ಬಂದಿದೆ ಎನ್ನಲಾಗಿದೆ. ಐದು ಶೇಕಡಾ ವಿನಂತಿಗಳು ಹಾಸ್ಟೆಲ್‌ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಆಹಾರದ ಅವಶ್ಯಕತೆಗಾಗಿ ಹೊರಗೆ ಹೋಗಬೇಕು ಎಂದು ಮನವಿ ಮಾಡಿದ್ದಾರೆ.
ಶೇಕಡಾ ಐದು ವಿನಂತಿಗಳು ಹಿರಿಯ ನಾಗರಿಕರು, ಸಂಗಾತಿಗಳು ಮತ್ತು ಮಕ್ಕಳಿಂದ ದೂರ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಅವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಸಹಾಯದ ಅಗತ್ಯವಿದೆ ಎಂದು ಕೇಳಿದ್ದಾರೆ .ಪೊಲೀಸರು ಟ್ವಿಟ್ಟರ್ನಲ್ಲಿ ಸುಮಾರು 5,ಸಾವಿರ ಸಂದೇಶಗಳನ್ನು ಸ್ವೀಕರಿಸಿದ್ದಾರೆ, ಆದರೆ 233 ವಿನಂತಿಗಳನ್ನು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಇಮೇಲ್ ಮೂಲಕ ಕಳುಹಿಸಿವೆ.ನಾಗರಿಕರಿಗಾಗಿಯೇ ನಾವು ನಾಲ್ಕು ಮೀಸಲಾದ ವಾಟ್ಸಾಪ್ ಸಂಖ್ಯೆಯನ್ನು ನೀಡಲಾಗಿದೆ ಅವರು ತಮ್ಮ ಪ್ರಶ್ನೆಗಳು, ಅನುಮಾನಗಳು, ಕಳವಳ ಆತಂಕ ಎಲ್ಲವನ್ನು ಹಂಚಿಕೊಳ್ಳಬಹುದು ಈ ಸಂಖ್ಯೆಗಳನ್ನು ವಾಟ್ಸಾಪ್ ಗುಂಪುಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ . ಎಂದು ಡಿಸಿಪಿ ಸಿಂಗ್ ಹೇಳಿದರು. ಅಲ್ಲದೆ, ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್ ಮತ್ತು ಪುಣೆ ಪೊಲೀಸ್ ವೆಬ್‌ಸೈಟ್‌ನಲ್ಲಿ ಹೊಸ ಮಾಹಿತಿಗಳನ್ನು ನಿರಂತರವಾಗಿ ಅಪ್ ಡೇಟ್ ಸಹ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.