ಮೃತ ಬಾಲಕನ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ಮತ್ತು ಆಶ್ರಯ ಮನೆ ನೀಡಿ - ಕೃಷ್ಣಾ ಹಡಪದ ಸರಕಾರಕ್ಕೆ ಒತ್ತಾಯ

Give Rs 25 lakh compensation and a shelter home to the family of the dead boy - Krishna Hadapa urges

ಮೃತ ಬಾಲಕನ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ಮತ್ತು ಆಶ್ರಯ ಮನೆ ನೀಡಿ - ಕೃಷ್ಣಾ ಹಡಪದ ಸರಕಾರಕ್ಕೆ ಒತ್ತಾಯ

ಗದಗ 22 : ಗದಗ ಗಂಗಿಮಡಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದ ಸವಿತಾ ಸಮಾಜ ಕುಟುಂಬದ ಶಿವಾಜಿ ಮಹೇಶ ವಡ್ಡೆಪಲ್ಲಿ ಎಂಬ ಬಾಲಕ ಅದೆ ಶಾಲೆಯಿಂದ ದಿ.29-11-2024 ರಂದು ಗದಗ ಗಂಗಿಮಡಿ ಮಾರ್ಗವಾಗಿ ಬಿಂಕದಕಟ್ಟಿ ರೈಲ್ವೆ ಸ್ಟೇಷನ್ನಿಗೆ ಹೋಗುವ ಒಳರಸ್ತೆಯಲ್ಲಿರುವ ಹಿರೇಮಠದವರ ಕೃಷಿ ಹೊಂಡದಲ್ಲಿ ಬಿದ್ದು ಮರಣ ಹೊಂದಿದ ದಿ. ಶಿವಾಜಿ ಮಹೇಶ ವಡ್ಡೆಪಲ್ಲಿ ಎಂಭ 14 ವರ್ಷದ ಬಾಲಕನ ಕುಟುಂಭಕ್ಕೆ ಸರಕಾರವು ಕಲ್ಯಾಣ ನೀದಿಯಿಂದ ಮತ್ತು ಮುಖ್ಯಮಂತ್ರಿಗಳ ಪರಿಹಾರ ನೀದಿಯಿಂದ ಗದಗ ಜಿಲ್ಲಾ ಉಸ್ತುವಾರಿ ಸಚೀವರಿಂದ ಮತ್ತು ಗದಗ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಒಟ್ಟು 25 ಲಕ್ಷ ರೂ ಪರಿಹಾರ ಮತ್ತು ಒಂದು ಆಶ್ರಯ ಮನೆ ನೀಡಬೆಕೇಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಹಡಪದ ಅವರು ಸರಕಾರವನ್ನು ಒತ್ತಾಯಿಸಿದರು      ಅವರು ಮೃತಪಟ್ಟ ಶಿವಾಜಿ ಮಹೇಶ ವಡ್ಡೆಪಲ್ಲೆ ಬಾಲಕನ ಕುಟುಂಬದ ಸ್ವಗ್ರಹಕ್ಕೆ ದಿ.21/12/2024 ರ ಸಂಜೆ 6.ಘಂಟೆಗೆ ಓಣಿಯ ಹಿರಿಯರು ಸಮಾಜ ಬಾಂಧವರು ಸೇರಿ ಬೇಟಿ ನೀಡಿ ಸಮಾಜದ ಗೌರವ ವಂದನೆ ಸಲ್ಲಿಸಿ ಮಾನವಿತೆಯಿಂದ ಎಲ್ಲರು ಸೇರಿ ಸಂಗ್ರಹಿಸಿದ ಒಟ್ಟು ರೂ.1.ಲಕ್ಷ ರೂ ಪರಿಹಾರ ಮೋತ್ತವನ್ನು ಗಂಗಿಮಡಿ ಓಣಿಯ ಹಿರಿಯರು ಹಾಗೂ ಸವಿತಾ ಸಮಾಜದ ಪ್ರಮುಕರ ಉಪಸ್ತಿತಿಯಲ್ಲಿ ಮೃತ ಬಾಲಕನ ತಾಯಿ ಶ್ರೀಮತಿ ಉಮಾ ಮಹೇಶ ವಡ್ಡೆಪಲ್ಲಿ ಅವರಿಗೆ ಹಸ್ತಾಂತರಿಸಿ ಶಾಂತ್ವನ ಹೇಳಿ ದರ್ಯ ತುಂಬಿ ಮಾತನಾಡಿ ಸಹಾಯ ಧನ ನೀಡಿದ ಯಲ್ಲರಿಗೂ ಕೃಷ್ಣಾ ಎಚ್ ಹಡಪದ ಅವರು ಸಮಾಜ ಪರವಾಗಿ ಕೃತಜ್ಞತೆಗಳು ಸಲ್ಲಿಸಿದರು       ಸಾಮಾಜಿಕ ಕಾರ್ಯಕರ್ತರಾದ ಗಂಗಿಮಡಿ ಕುಮಾರ ಮಾರನಬಸರಿ ಅವರು ಮಾತನಾಡಿ ಬಡವರ ಬಗ್ಗೆ ಅತಿ ಕಾಳಜಿ ಈರುವಂತಹ ಶಾಲೆಯ ಮುಖ್ಯ ಶೀಕ್ಷಕಿಯವರಾದ ಶ್ರೀಮತಿ ಆರಿ​‍್ಬ ಸಂಕಣ್ಣವರ ತಮ್ಮ ಪರಿಸ್ತಿತಿಯನ್ನು ಕುದ್ದಾಗಿ ನೊಡಿ ತಮ್ಮ ಜೀವನಕ್ಕೆ ಶಾಸ್ವತ ಆದಾರವಾಗಲಿ ಎಂದು ಅವರು ಮಾನವೀಯ ಸ್ಪಂದನೆಯಿಂದಾಗಿ ತಮಗೆ ಅಡುಗೆ ಸಹಾಯಕಿ ಕೆಲಸವನ್ನು ಕೊಡಿಸಲು ಹಾಗೂ ಸರಕಾರದ ವಿವಿಧ ಸಹಾಯ ಸೌಲಭ್ಯಗಳು ದೊರಕಿಸಿ ಕೊಡಲು ಪಣ ತೊಟ್ಟಿದ್ದಾರೆ ಹಾಗಾಗಿ ಕೆಲವೆ ದೀನಗಳಲ್ಲಿ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಭ ಭರವಸೆ ನಮಗಿದೆ ಮತ್ತು ಅಗತ್ಯ ಸಹಕಾರಕ್ಕೆ ನಾವು ಸದಾ ಸಿದ್ದ ಎಂದು ಹೆಳಿದರು       ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಠ್ಠಲ ಸಪಾರಿ ಅವರು ಮಾತನಾಡಿ 16 ವರ್ಷದ ಮಗಳನ್ನು ಮತ್ತು ಅನಾರೋಗದಿಂದ ಬಳಲುತ್ತಿರುವ ಗಂಡನನ್ನು ಸಾಕುವ ಜವಾಬ್ದಾರಿ ಹೊತ್ತಿರುವ ಮಗನ ಕಳೆದುಕೊಂಡ ಸಂತ್ರಸ್ತ  ಮಹಿಳೆಯಾದ ಶ್ರೀಮತಿ ಉಮಾ ಮಹೇಶ ವಡ್ಡೆಪಲ್ಲಿ ಅವರಿಗೆ ಶಾಲೆಯಲ್ಲೇ ಅಡುಗೆ ಸಹಾಯಕಿ ಕೆಲಸವನ್ನು ಮಂಜೂರು ಮಾಡಿಸಿಕೊಡಲು ಮುಖ್ಯ ಶಿಕ್ಷಕಿಯವರಾದ ಆರಿ​‍್ಬ ಸಂಕಣ್ಣವರು ಸ್ವತಹಾ ತಾವೆ ದೊಡ್ಡಮನಸ್ಸು ಮಾಡಿ ಒಪ್ಪಿದ್ದಾರೆ ಹಾಗಾಗಿ ಎಸ್ ಡಿ ಎಮ್ ಸಿ ಸಭೆಯಲ್ಲಿ  ಸರ್ವಾನುಮತದಿಂದ ನಾವುಗಳು ಸಹ ಒಪ್ಪಿ ಟರಾವು ಪಾಸು ಮಾಡಿ ಉಳಿದ ಮೆಲಾಧಿಕಾರಿಗಳಿಗೆ ತಿಳಿ ಹೇಳಿ ಮನವಿ ಮೂಲಕ ಒತ್ತಾಯ ಮಾಡಿ ಅವರಿಂದ ತ್ವರಿತವಾಗಿ ಆದೇಶ ಮಾಡಿಸಿ ಅತಿ ಕಡಿಮೆ ದಿನಗಳಲ್ಲೇ ಮಂಜುರು ಮಾಡಿಸಿ ತಮ್ಮ ಮುಂದಿನ ನೆಮ್ಮದಿಯ ಜೀವನಕ್ಕೆ ಅನಕೂಲ ಮಾಡಿಸಿಕೊಡುವುದಾಗಿ ಹೇಳಿದರು       ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾ ಕಜಾಂಚಿಗಳಾದ ಅರೂಣ ರಾಂಪೂರ ಯಲ್ಲರನ್ನು ಸ್ವಾಗತಿಸಿದರು      ಈ ಸಂದರ್ಭದಲ್ಲಿ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೊಟೇಕಲ್ಲ ಮಾಜಿ ಅಧ್ಯಕ್ಷರಾದ ಹೇಮಂತ ವಡ್ಡೆಪಲ್ಲಿ ಹಿರಿಯರಾದ ಹನಮಂತಪ್ಪ ರಾಂಪೂರ ಪರಶುರಾಮ ರಾಂಪೂರ ರಮೇಶ ರಾಂಪೂರ ಸುರೇಶ ಬುದೂರ ಶ್ರೀನಿವಾಸ ಕೊಟೇಕಲ್ಲ ರಾಮು ವಡ್ಡೆಪಲ್ಲಿ ಯುವ ನಾಯಕರಾದ ಕಾರ್ತಿಕ ಆಗಲಾವೆ ಶ್ರೀಧರ ಕಡಬೂರ ಹಾಗೂ ಸಂತ್ರಸ್ತ  ಮಹಿಳೆಯ ಗಂಡ. ಮಗಳು. ಮತ್ತು ಅಣ್ಣನಾದ ಗುಂಡುರಾವ್ ಹಡಪದ ಹಾಗೂ ಸಮಾಜದ ಇತರರು ಉಪಸ್ತಿತರಿದ್ದರುಬಾಕ್ಷ ಹೇಳಿಕೆ. ಕೃಷಿ ಹೊಂಡದಲ್ಲಿ ಬಿದ್ದು ಮಕ್ಕಳು ಸಾವೀಗೀಡಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ ಇದನ್ನು ತಪ್ಪಿಸಲು ಸುರಕ್ಷತಾ ದೃಷ್ಟಿಯಿಂದ ಕ್ಷೇತ್ರ ಮಟ್ಟದಲ್ಲಿ ರೈತರಿಗೆ ತಿಳುವಳಿಕೆ ನೀಡುವ ಕೆಲಸ ನಡೆಯಬೆಕಾಗಿದೆ     ಎಲ್ಲಾ ರೈತರಿಗೆ ಸರಕಾರವು ಸಹಾಯಧನ ನಿಡುವ ಮುಲಕ ಕೃಷಿ ಹೊಂಡಗಳ ಸುತ್ತಲೂ ಬೇಲಿ ಹಾಗೂ ನೆರಳು ಪರದೆ ಘಟಕ ಅಳವಡಿಸುವುದು ಅಗತ್ಯವಾಗಿದೆ ಅಲ್ಲದೆ ಕೃಷಿ ಹೊಂಡಗಳ ಹತ್ತಿರ ಅಪಾಯ ಈಜಬಾರದು ಎಂದು ಸೂಚನಾ ಫಲಕಗಳನ್ನು ಹಾಗೂ ಕೃಷಿ ಹೊಂಡಗಳಲ್ಲಿ ಹಗ್ಗದೊಂದಿಗೆ ಟೈರ್ ಹಾಗೂ ಟ್ಯೂಬ್ ಇಳಿ ಬಿಡಲು ಕ್ರಮ ಕೈಗೊಳ್ಳುವಂತೆ ಸೂಚನೆಯ ಆದೇಶ ನೀಡಬೇಕು    ಒಟ್ಟಿನಲ್ಲಿ ಈ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವ ಮೂಲಕ. ಕೃಷಿ ಹೊಂಡಗಳ ಸುತ್ತ ಸೂಕ್ತ ಸುರಕ್ಷಿತಾ ಕ್ರಮಗಳನ್ನು ಕೈಗೊಳ್ಳಲು ಸರಕಾರವು ಮುಂದಾಗಬೇಕು    ಒಂದು ವೇಳೆ ಸರಕಾರ ಸೂಚಿಸಿದ ಕ್ರಮಗಳನ್ನು ಕೈಗೊಳ್ಳದ ಜಮೀನು ಮಾಲೀಕರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೆಕೇಂದು ಆಗ್ರಹಿಸಿದರು. ಇಲ್ಲಾಂದ್ರೆ ಮತ್ತಷ್ಟು ಅಪಾಯಗಳು ಕಟ್ಟಿಟ್ಟ ಬುತ್ತಿ ಎಂದುಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಎಚ್ ಹಡಪದ ಆತಂತ ವ್ಯಕ್ತ ಪಡಿಸಿದ್ದಾರೆ.