ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಧೈರ್ಯ ತುಂಬುವ ಕಾರ್ಯ ಅಗತ್ಯವಾಗಿದೆ
ಧಾರವಾಡ 09: ಕರ್ನಾಟಕ ವಿದ್ಯಾವರ್ಧಕ ಸಂಘವು, ಗೌರಮ್ಮ ಚೆನ್ನಪ್ಪ ಹಲಗತ್ತಿದತ್ತಿ ಅಂಗವಾಗಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2025ರ ಆಯೋಜಿಸಿದ್ದ ‘ಶ್ರಮಿಕ ಮಹಿಳೆ” ಪ್ರಶಸ್ತಿ ಪ್ರದಾನ ಹಾಗೂ ಉಪನ್ಯಾಸಕಾರ‌್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿಅವರು ಮಾತನಾಡುತ್ತಿದ್ದರು. ನಮ್ಮಎಲ್ಲಾ ಸಾಧನೆಗೆತಾಯಿಯೇ ಪ್ರೇರಕ ಶಕ್ತಿ. ನಮಗೆ ಅವಳು ಶಕ್ತಿ ತುಂಬುವಚೈತನ್ಯ ಸ್ವರೂಪಳು ಎಂದುಧಾರವಾಡದಅಪರಜಿಲ್ಲಾಧಿಕಾರೀಗೀತಾ ಸಿ.ಡಿ ಅಭಿಪ್ರಾಯಪಟ್ಟರು.
ಮಹಿಳೆಯರು ಎಂದಿಗೂ ಅಬಲೆಯರಲ್ಲ. ಅವಳು ಸಬಲೆಯಾಗಿದ್ದರಿಂದಲೇಕುಟುಂಬದ ಒಳಗೂಮತ್ತುಹೊರಗೂ ಶ್ರಮದಾಯಕ ಕಾರ್ಯ ಮಾಡಿ ತನ್ನ ಕುಟುಂಬವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾಳೆ. ಕುಟುಂಬದ ಒಳಿತಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡುವ ತ್ಯಾಗಮಯಿ ಮಹಿಳೆಯಾಗಿದ್ದಾಳೆ. ಅಂತಹ ಮಹಿಳೆ ಸಿದ್ಧಪಡಿಸುವ ಗೃಹ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಅವರಿಗೆ ಮತ್ತಷ್ಟು ಶಕ್ತಿ ತುಂಬಿದಂತಾಗುತ್ತದೆ ಎಂದು ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಜ್ಯೋತಿ‘ಸ್ವಅರಿವು ಇಂದಿನ ಅಗತ್ಯತೆ’ ವಿಷಯಕುರಿತುಉಪನ್ಯಾಸ ನೀಡಿ,ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಧೈರ್ಯತುಂಬುವಕಾರ್ಯಇಂದಿನ ತುರ್ತುಅಗತ್ಯವಾಗಿದೆ.ಅಂದಾಗ ಹೆಣ್ಣು ಮಕ್ಕಳು ಭವಿಷ್ಯದಲ್ಲಿಎದುರಾಗುವ ಸಮಸ್ಯೆಗಳನ್ನು ನಿರರ್ಗಳವಾಗಿ ಎದುರಿಸಬಹುದು.ಈ ಕಾರ್ಯ ಶಿಕ್ಷಣದಿಂದ ಮಾತ್ರ ಸಾಧ್ಯ.ಇಂದಿನ ಪರಿಸ್ಥಿತಿಯಲ್ಲಿ ಆಡಂಬರದ ಮದುವೆಗೆದುಂದು ವೆಚ್ಚ ಮಾಡುವಬದಲು ಅವಳಿಗೆ ಶಿಕ್ಷಣ ನೀಡಿದರೆ, ಆ ಶಿಕ್ಷಣದಿಂದಲೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು.ಮಹಿಳೆಯರು ತಮ್ಮ ಭಾವನೆ ಹಾಗೂ ನಡವಳಿಕೆ ತಮ್ಮ ಮೇಲೆ ಹಾಗೂ ಸಮಾಜದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬಲ್ಲಿ ಅಗತ್ಯವಾಗಿ ಸ್ವಅರಿವು ಸಹಾಯವಾಗಬಲ್ಲದೆಂದು ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದಉಪಾಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಶಸ್ತಿಗಳು ಸಿಗುವುದು ದೊಡ್ಡ ವಿಷಯವಲ್ಲ,ಆದರೆ ಶ್ರಮಿಕ ಮಹಿಳೆ ಗುರುತಿಸಿ ಪ್ರಶಸ್ತಿ ನೀಡುವುದುಅಭಿನಂದನೀಯ.ತಾಯಿಯನ್ನು ನಿರ್ಲಕ್ಷಿಸುವ ಇಂದಿನ ದಿನಮಾನದಲ್ಲಿ ಹಲಗತ್ತಿ ಸಹೋದರರು ಶ್ರಮಿಕ ಮಹಿಳೆ ಪ್ರಶಸ್ತಿ ನೀಡಿಗೌರವಿಸುವುದಕ್ಕೊಂದು ಬೆಲೆ ಇದೆಎಂದರು.
ಹಾವೇರಿಯ ಸಾಮಾಜಿಕ ಹೋರಾಟಗಾರ್ತಿನಿಂಗಮ್ಮಸವಣೂರಅವರಿಗೆ‘ಶ್ರಮಿಕ ಮಹಿಳೆ-2025’ ಪ್ರಶಸ್ತಿಯನ್ನು ಪ್ರದಾನ ಮಾಡಿಗೌರವಿಸಲಾಯಿತು.ಪ್ರಶಸ್ತಿ ಸ್ವೀಕರಿಸಿದ ನಿಂಗಮ್ಮಅನ್ಯಾಯದ ವಿರುದ್ಧದ ನನ್ನ ಹೋರಾಟಕ್ಕೆಸಂದ ಫಲವಾಗಿದ್ದು ನನ್ನ ಹೊಣೆಗಾರಿಕೆಯನ್ನುಇನ್ನೂ ಹೆಚ್ಚಿಸಿದೆ ಎಂದರು.
ಆರಂಭದಲ್ಲಿಕು.ಖುಷಿ ದೇವೇಂದ್ರ ಢವಳಿ ಹಾಗೂ ಸಂಗಡಿಗರಿಂದ ಸುಗಮ ಸಂಗೀತಜರುಗಿತು. ಹಾರೋ್ಮನಿಯಂ ವಿನೋದ ಪಾಟೀಲ ಹಾಗೂ ತಬಲಾ ಸಾಥ್‌ಡಾ. ಅನೀಲ ಮೇತ್ರಿ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ವಿಶ್ರಾಂತಉಪನಿರ್ದೇಶಕ ಆರ್.ಸಿ. ಹಲಗತ್ತಿ ದತ್ತಿದಾನಿಗಳ ಪರವಾಗಿ ಮಾತನಾಡಿ, ತಾಯಿಯ ಶ್ರಮದಾಯಿಕಜೀವನ ಸ್ಮರಿಸಿದರು. ಹೇಮಲತಾ ನೇಕಾರ, ಮೈತ್ರಿ ನೇಕಾರ, ಖುಷಿ ನೇಕಾರ ಪ್ರಾರ್ಥಿಸಿದರು.ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು.ಶಂಕರ ಹಲಗತ್ತಿ ಪರಿಚಯಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಶೈಲಜಾಅಮರಶೆಟ್ಟಿ ನಿರೂಪಿಸಿದರು.ಶಂಕರ ಕುಂಬಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶತುರಮರಿ, ವೀರಣ್ಣಒಡ್ಡೀನ, ಡಾ.ಶ್ರೀಶೈಲ ಹುದ್ದಾರ, ಗುರು ಹಿರೇಮಠ, ಡಾ.ಮಹೇಶ ಧ. ಹೊರಕೇರಿ, ಡಾ.ಜಿನದತ್ತ ಹಡಗಲಿ,ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಡಾ. ಸದಾಶಿವ ಮರ್ಜಿ, ಡಾ.ಸಿದ್ಧನಗೌಡ ಪಾಟೀಲ, ನಿಂಗಣ್ಣಕುಂಟಿ, ಶ್ರೀನಿವಾಸ ವಾಡಪ್ಪಿ, ವೀರಣ್ಣ ಪತ್ತಾರ, ಎಸ್.ಜಿ. ಪಾಟೀಲ, ಬಿ.ಎಸ್. ಶಿರೋಳ, ಬಿ.ಕೆ. ಹೊಂಗಲ, ಎಂ.ಎಂ. ಚಿಕ್ಕಮಠ, ಪಾರ್ವತಿ ಹಾಲಭಾವಿ ಸೇರಿದಂತೆ ಹಲಗತ್ತಿ ಪರಿವಾರದವರು ಉಪಸ್ಥಿತರಿದ್ದರು.