ಕಾರವಾರ, ಡಿ.24: ಗೀರೀಜಾ ಬಾಲಚಂದ್ರ ಆಗೇರ (32 ವರ್ಷ), ಸಾ:ಕಣಗಿಲ್ ತಾ:ಅಂಕೋಲಾ ಇವರು ಚಿಕ್ಕಮ್ಮನ ಮನೆ ಸೂರ್ವೆ ಗ್ರಾಮದಿಂದ ತನ್ನ ಮಗಳು ಶೃದ್ದಾ (15 ವರ್ಷ) ಕರೆದುಕೊಂಡು ಕೇಣಿ ಹಾಸ್ಟೇಲ್‌ಗೆ ವಿದ್ಯಾಭ್ಯಾಸಕ್ಕಾಗಿ ಸೇರಿಸಲು ಹೋಗುವುದಾಗಿ ಹೇಳಿ ಹೋದವಳು, ಹಾಸ್ಟೆಲ್‌ಗೂ ಹೋಗದೇ ಮನೆಗೂ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾಳೆ.
ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಅಂಕೋಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08382-220333 ನ್ನು ಸಂಪರ್ಕಿಸುವಂತೆ ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ಉಪನೀರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.