12 ದಿನಗಳ ಮಟ್ಟಿಗೆ ಇಂಗ್ಲೆಂಡ್ ತಂಡಕ್ಕೆ ಕೋಚ್‌ ಮಾಡಲಿರುವ ಗಿಲೆಸ್ಪಿ

ನವದೆಹಲಿ, ಫೆ 7, ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಹಾಗೂ ಸಸೆಕ್ಸ್ ತಂಡದ ಹಾಲಿ ಕೋಚ್‌ ಜೇಸನ್‌ ಗಿಲೆಸ್ಪಿ ಅವರು 12 ದಿನಗಳ ಕಾಲ ತಾತ್ಕಾಲಿಕವಾಗಿ ಇಂಗ್ಲೆಂಡ್‌ ಕೋಚಿಂಗ್ ಸಿಬ್ಬಂದಿ ಸೇರ್ಪಡೆಯಾಗಲಿದ್ದಾರೆ. ಇಂಗ್ಲೆಂಡ್‌ ತಂಡದ ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ನಿಮಿತ್ತ ಗಿಲೆಸ್ಪಿ ಅವರನ್ನು ಇಂಗ್ಲೆಂಡ್‌ ಟೆಸ್ಟ್ ತಂಡಕ್ಕೆ 12 ದಿನಗಳ ಕಾಲ ಬೌಲಿಂಗ್‌ ತರಬೇತಿಗಾಗಿ ಕರೆದುಕೊಳ್ಳಲಾಗಿದೆ. ಫೆ. 8 ರಿಂದ ಶಿಬಿರ ಆರಂಭವಾಗಲಿದೆ.

ಗಿಲೆಸ್ಪಿ ಅವರು 400 ಅಂತಾರಾಷ್ಟ್ರೀಯ ವಿಕೆಟ್‌ ಪಡೆದಿದ್ದಾರೆ. ಗಿಲೆಸ್ಪಿ ಜತೆಗೆ ಜೇಸನ್ ಕೆರ್ ಅವರು ಇಂಗ್ಲೆಂಡ್‌ ತಂಡದ ಮುಖ್ಯ ಕೋಚ್‌ ರಿಚರ್ಡ್ಸ್ ಡಾಸನ್        ಅವರೊಂದಿಗೆ ಮೂರು ಟೆಸ್ಟ್ ಪಂದ್ಯಗಳ ನಿಮಿತ್ತ ಪೂರ್ವ ತಯಾರಿಯಲ್ಲಿ ಭಾಗಿಯಾಗಲಿದ್ದಾರೆ."ರಿಚರ್ಡ್ ಡಾಸನ್, ಅವರ ಸಹಾಯಕ ಸಿಬ್ಬಂದಿ ಮತ್ತು ಎಲ್ಲಾ ಆಟಗಾರರೊಂದಿಗೆ ಕೆಲಸ ಮಾಡುವ ಅವಕಾಶದಿಂದ ನಾನು ಉತ್ಸುಕನಾಗಿದ್ದೇನೆ" ಎಂದು ಗಿಲೆಸ್ಪಿ ಹೇಳಿದ್ದಾರೆ. "ವಿಭಿನ್ನ ಜನರಿಂದ ಕೇಳಲು ಮತ್ತು ಕಲಿಯಲು ಇದು ಒಂದು ಉತ್ತಮ ಅವಕಾಶವಾಗಿದೆ ಮತ್ತು ನನ್ನ ಸ್ವಂತ ಕ್ರಿಕೆಟ್ ಅನುಭವಗಳಿಂದ ತಂಡಕ್ಕೆ ಸ್ವಲ್ಪ ಮೌಲ್ಯವನ್ನು ಸೇರಿಸಬಹುದೆಂದು ನಾನು ಭಾವಿಸುತ್ತೇನೆ,'' ಎಂದಿದ್ದಾರೆ.