ಲೋಕದರ್ಶನ ವರದಿ
ಯಲ್ಲಾಪುರ: ರೈತರಿಗೆ ಉಪಯುಕ್ತ ಸಂಗತಿಗಳ ವಿಚಾರ-ವಿನಿಮಯದ ಉದ್ದೇಶದಿಂದ ಕೃಷಿ ಇಲಾಖೆ ಹಮ್ಮಿಕೊಂಡ ಕಿಸಾನ್ ಗೋಷ್ಠಿಯ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು ಎಂದು ಟಿ.ಎಂ.ಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ಅವರು ಪಟ್ಟಣ ಟಿ.ಎಂ.ಎಸ್ ಸಭಾಭವನದಲ್ಲಿ ಜಿಲ್ಲಾ ಪಂಚಾಯತ ಹಾಗೂ ಕೃಷಿ ಇಲಾಖೆಗಳು ಸಂಯುಕ್ತವಾಗಿ ಆತ್ಮ ಯೋಜನೆಯಡಿ ಹಮ್ಮಿಕೊಂಡ ಕಿಸಾನ್ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಕರ್ಾರದ ಆಶಯಗಳು ಸಾರ್ಥಕವಾಗಲು ರೈತ ಸಮುದಾಯ ಕೃಷಿ ಇಲಾಖೆಯೊಂದಿಗೆ ಸಂಬಂಧ ಹಾಗೂ ಸಂಪರ್ಕಗಳನ್ನು ಹೊಂದಿರುವುದು ಅವಶ್ಯಕ. ಭವಿಷ್ಯದ ದೃಷ್ಟಿಯಿಂದ ಬರಡಾದ ಕೆರೆಗಳಲ್ಲಿ ನೀರು ಸಂಗ್ರಹಿಸಲು ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ.
ನೆಲ,ಜಲ ಸಂರಕ್ಷಣೆ ಕುರಿತು ನಾವೆಲ್ಲರೂ ಗಂಭೀರ ಕಾಳಜಿ ವಹಿಸದಿದ್ದರೆ ಅಪಾಯ ನಿಶ್ಚಿತ ಎಂದರು.
ತಾಲೂಕಾ ರೈತ ಸಂಘದ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಮಾತನಾಡಿ,ರೈತರು ಕೃಷಿಯಲ್ಲಿ ಸರಿಯಾದ ನಿಧರ್ಾರವನ್ನು ತೆಗೆದುಕೊಂಡು ಬೆಳೆ ಉಪಬೆಳೆ ಬೆಳೆದು ಜೀವನಮಟ್ಟ ಸುಧಾರಿಸಿಕೊಳ್ಳುವತ್ತ ಯೋಚಿಸಬೇಕು ಎಂದರು. ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ ಮಾತನಾಡಿ, ರೈತರಿಗೆ ಸರಕಾರದ ಪ್ರೋತ್ಸಾಹಧನವೇ ಮುಖ್ಯವಲ್ಲ. ಪ್ರೋತ್ಸಾಹ ಮುಖ್ಯ.ದೇಶಕ್ಕೆ ರಕ್ಷಣೆ ನೀಡುವ ಸೈನಿಕರು ಎಷ್ಟು ಮುಖ್ಯವೋ ಅಷ್ಟೆ ದೇಶಕ್ಕೆ ಅನ್ನ ನೀಡುವ ಅನ್ನದಾತ ರೈತರ ಬಗ್ಗೆ ಕಾಳಜಿ ಅಗತ್ಯ. ರೈತವರ್ಗ ಮತ್ತು ಕೃಷಿ ಬಗ್ಗೆ ಸರಕಾರದ ನಿರ್ಲಕ್ಷ ಸಲ್ಲಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ತಾ.ಪಂ ಉಪಾಧ್ಯಕ್ಷೆ ಸುಜಾತಾ ಸಿದ್ದಿ ಸಾಂದಭರ್ೀಕ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಪರಿಸರ ತಜ್ಞ ಶಿವಾನಂದ ಕಳವೆ "ಜಲ ಸಂವರ್ಧನೆ ಮತ್ತು ಜಲ ಸಂರಕ್ಷಣೆ" ಕುರಿತು, ಸಿದ್ದಾಪುರದ ತೋಟಗಾರಿಕಾ ಅಧಿಕಾರಿ ಮಹಾಬಲೇಶ್ವರ ಬಿ,ಎಸ್ "ಸಮಗ್ರ ತೋಟಗಾರಿಕೆ" ಕುರಿತು, ಜಿಲ್ಲಾ ಪ್ರಾಂತೀಯ ಸಾವಯವ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ "ಸಾವಯವ ಕೃಷಿ ಉತ್ಪನ್ನಗಳ ದೃಢೀಕರಣ ಮತ್ತು ಮಾರುಕಟ್ಟೆ" ಕುರಿತು, ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪ್ರಸಾದ
ರಾಮ ಹೆಗಡೆ "ತಳಿ ಸಂರಕ್ಷಣೆ" ಕುರಿತಂತೆ ಉಪನ್ಯಾಸ ನೀಡಿದರು. ಆತ್ಮಾ ಯೋಜನೆ ಜಿಲ್ಲಾ ಸಂಯೋಜಕ ಶಿವನಗೌಡ ಬಿರಾದಾರ, ಸಹಾಯಕ ಕೃಷಿ ನಿದರ್ೇಶಕ ವಿ.ಜಿ.ಹೆಗಡೆ ಉಪಸ್ಥಿತರಿದ್ದರು.
ಪ್ರೇಮಾ ಜೋಶಿ ಪ್ರಾಥರ್ಿಸಿದರು. ಆತ್ಮಾ ಯೋಜನೆಯ ತಾಲೂಕಾ ನಿದರ್ೇಶಕ ಎಂ.ಜಿ.
ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎಂ.ಆರ್.ಭಟ್ಟ ಬೆಳಶೇರ್ ವಂದಿಸಿದರು.