ಲೋಕದರ್ಶನ
ವರದಿ
ಕಾರವಾರ 24:
ರಾಜ್ಯದ ಏಕೈಕ ಅಣುವಿದ್ಯುತ್ ಸ್ಥಾವರವಾಗಿರುವ
ಕೈಗಾ ಅಣುಸ್ಥಾವರದ ಘಟಕ-1 ರಲ್ಲಿ ಸತತವಾಗಿ 894 ದಿನ ವಿದ್ಯುತ್ ಉತ್ಪಾದಿಸಿದೆ.
ವಿಜ್ಞಾನಿಗಳು ಅಂದು ಕೊಂಡಂತೆ ಕೈಗಾ
ಅಣು ಸ್ಥಾವರ ಸಾಧನೆ ಮೈಲಿಗಲ್ಲು ಬರೆದಿದೆ. ಅಕ್ಟೋಬರ್
24 ಬುಧುವಾರ ಬೆಳಿಗ್ಗೆ 9 ಗಂಟೆ 19 ನಿಮಿಷಕ್ಕೆ ಕೈಗಾ ಘಟಕ-1 894 ದಿನ
ಸತತ ವಿದ್ಯುತ್ ಉತ್ಪಾದಿಸಿ ವಿಶ್ವದಾಖಲೆ
ಬರೆಯಲಿದೆ. ಯುನೈಟೆಡ್ ಕಿಂಗ್ಡಂನ ಏಷ್ಯಮ್ ಅಣುಸ್ಥಾವರ 894 ದಿನ ಕಾಲ ಸತತ
ವಿದ್ಯುತ್ ಉತ್ಪಾದನೆ ಮಾಡಿದ ದಾಖಲೆಯನ್ನು ಭಾರತ ಸರಿಗಟ್ಟಿತು. ಅಲ್ಲದೇ
895 ದಿನದಲ್ಲಿ ವಿದ್ಯುತ್ ಉತ್ಪಾದನೆ ಮುಂದುವರಿಸಿದೆ. ಗುರುವಾರ ಬೆಳಿಗ್ಗೆ 9 ಗಂಟೆ 895 ದಿನ ಪೂರೈಸಿ 896ನೇ
ದಿನಕ್ಕೆ ಕಾಲಿಡಲಿದೆ. ವಿಶ್ವದಲ್ಲಿ
ಸತತವಾಗಿ 894 ದಿನ
ಅಣುವಿದ್ಯುತ್ ಉತ್ಪಾದಿಸಿ, 895ನೇ ದಿನದಲ್ಲಿ ವಿದ್ಯುತ್
ಉತ್ಪಾದನೆ ಮುಂದುವರಿಸಿದ ಘಟಕವಾಗಲಿರುವ ಕೈಗಾ
ಘಟಕ-1 ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿ
ಭಾರತ ನಿಲ್ಲುವಂತೆ ಮಾಡಿಲಿದೆ. ಈ ಕ್ಷಣದ ಸಂಭ್ರಮಾಚರಣೆ
ಗುರುವಾರ 9 ಗಂಟೆ 19 ನಿಮಿಷ ದಾಟಿದ ನಂತರ ನಡೆಯಲಿದೆ ಹಾಗೂ
ವಿಶ್ವದಲ್ಲಿ ಭಾರತರ ಅಣು ರಿಯಾಕ್ಟರ್ ಸಾಧನೆ
ಸಹ ಘೋಷಣೆಯಾಗಲಿದೆ ಎಂದು ಕೈಗಾ ಅಣುಸ್ಥಾವರದ
ಘಟಕ 1-2ರ ನಿದರ್ೇಶಕ ಜೆ.ಆರ್.ದೇಶಪಾಂಡೆ ಉದಯವಾಣಿಗೆ
ಪ್ರತಿಕ್ರಿಯಿಸಿದ್ದಾರೆ.
ಅಣುವಿದ್ಯುತ್ ಉತ್ಪಾದನೆಯನ್ನು ಕೈಗಾ ಘಟಕ-1ರಲ್ಲಿ
ಇದೇ ವರ್ಷದ ನವ್ಹೆಂಬರ್ 24ರ
ವರೆಗೆ ಮುಂದುವರಿಸಲು
ಎಇಆರ್ಬಿ ಅಣುವಿದ್ಯುತ್ ಶಕ್ತಿ ನಿಯಂತ್ರಣ
ನಿಗಮ ಮತ್ತು
ಭಾರತದ ಅಣುಸ್ಥಾವರ
ವೀಕ್ಷಣಾ ಕೇಂದ್ರಗಳು ಅನುಮತಿಸಿವೆ. ನಾವು ರಿಯಾಕ್ಟರ್ ಒಂದರಿಂದ ಅಣು
ವಿದ್ಯುತ್ ಉತ್ಪಾದನೆಯಲ್ಲಿ ವಿಶ್ವದಲ್ಲಿ
ಮೊದಲ ಸ್ಥಾನಕ್ಕೆ ಏರಬೇಕಾದರೆ 940 ದಿನಗಳನ್ನು ದಾಟಬೇಕಿದೆ. ಇದಕ್ಕಾಗಿ ನಾವು ಡಿಸೆಂಬರ್ ಮೊದಲ
ವಾರದತನಕ ಕಾಯಬೇಕು. ಈಗ ನವ್ಹೆಂಬರ್ 24ರ
ವರೆಗೆ ವಿದ್ಯುತ್ ಉತ್ಪಾದನೆಗೆ ಅನುಮತಿ ದೊರೆತಿದೆ. ಹಾಗೆ ಉತ್ಪಾದನೆ ನಡೆದ
ದಿನಗಳಲ್ಲಿ ಎಇಆರ್ಬಿ ಹಾಗೂ ಅಣು ವಿದ್ಯುತ್
ಉತ್ಪಾದನೆಯನ್ನು ಗಮನಿಸುವ ವಿಶ್ವದ ವಿಜ್ಞಾನಿಗಳು ಸ್ಥಾವರಕ್ಕೆ ಭೇಟಿ ನೀಡಿ, ವಿದ್ಯುತ್
ಉತ್ಪಾದನೆ ಮುಂದುವರಿಸುವ ಬಗ್ಗೆ ರಿಯಾಕ್ಟರ್ ಕಾರ್ಯಕ್ಷಮತೆ ಪರಿಶೀಲಿಸಿ ಅನುಮತಿ ನೀಡಲಿದ್ದಾರೆ. ಇದೆಲ್ಲವೂ ಸಸೂತ್ರವಾಗಿ ನಡೆದಲ್ಲಿ ನಾವು 940 ದಿನಗಳನ್ನು ದಾಟಿ ಅಣು ವಿದ್ಯುತ್
ಉತ್ಪಾದನೆ ಮುಂದುವರಿಸಿ ವಿಶ್ವದಲ್ಲೇ ನಂಬರ್ 1 ಪಟ್ಟಕ್ಕೆ ಏರಬಹುದು ಎಂಬ ವಿಶ್ವಾಸವನ್ನು ಕೈಗಾದ
ವಿಜ್ಞಾನಿ ಜೆ.ಆರ್.ದೇಶಪಾಂಡೆ
ವ್ಯಕ್ತಪಡಿಸಿದರು.
ಹೆವಿ
ವಾಟರ್ ರಿಯಾಕ್ಟರ್ಗಳ ಪೈಕಿ ಭಾರತಕ್ಕೆ ಮೊದಲ
ಸ್ಥಾನ:
ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ
ಸ್ಥಾಪನೆಯಾದ ರಿಯಾಕ್ಟರ್ ಹೆವಿ
ವಾಟರ್ ರಿಯಾಕ್ಟರ್ (ಪಿಎಚ್ಡಬ್ಲುಆರ್)ತಂತ್ರಜ್ಞಾನದ್ದು. ಈ ಮಾದರಿಯ ರಿಯಾಕ್ಟರ್ಗಳ
ಪೈಕಿ ಸತತವಾಗಿ 894 ದಿನ ವಿದ್ಯುತ್ ಉತ್ಪಾದಿಸಿದ
ಸಾಲಿನಲ್ಲಿ ಭಾರತಕ್ಕೆ ಮೊದಲ ಸ್ಥಾನ ಪ್ರಾಪ್ತವಾಗಿದೆ
ಎಂದು ಅಣುಸ್ಥಾವರದ ಹಿರಿಯ ವಿಜ್ಞಾನಿ ಜೆ.ಆರ್.ದೇಶಪಾಂಡೆ
ಹೇಳಿದರು.
ಈ ಮಾದರಿಯ ಅಣು
ರಿಯಾಕ್ಟರ್ಗಳಲ್ಲಿ ಸತತವಾಗಿ 894 ದಿನಗಳ ಕಾಲ ಅಣು ವಿದ್ಯುತ್
ಉತ್ಪಾದನೆಯನ್ನು ಪ್ರಪಂಚದ ಯಾವುದೇ ದೇಶ ಮಾಡಿಲ್ಲ. ಭಾರತ
ಈ ತಂತ್ರಜ್ಞಾನದ ದಿಶೆಯಲ್ಲಿ ಅಣು ವಿದ್ಯುತ್ ಉತ್ಪಾದನೆಯಲ್ಲಿ
ಕೈಗಾ ಘಟಕ-1 ರಿಯಾಕ್ಟರ್ ದಾಖಲೆ ಬರೆದಿದೆ. ಬುಧುವಾರ ಬೆಳಿಗ್ಗೆ 9 ಗಂಟೆಗೆ ಭಾರತ ಅಣುವಿದ್ಯುತ್ ಉತ್ಪಾದನೆಯಲ್ಲಿ
ಹೊಸ ಮೈಲಿಗಲ್ಲುನ್ನು ವಿಶ್ವದ ಮಟ್ಟದಲ್ಲಿ ಬರೆದಿದೆ ಎಂದು ಖಚಿತಪಡಿಸಿದರು.