ಔರಂಗಾಬಾದ್, ಅ 17: ಮಹಾರಾಷ್ಟ್ರ ವಿಧಾನಸಭೆಯ ಮರಾಠಾವಾಡದ 46 ವಿಧಾನಸಭಾ ಕ್ಷೇತ್ರಗಳಲ್ಲಿ 676 ಸ್ಪಧರ್ಿಗಳ ಪೈಕಿ ಕೇವಲ 30 ಮಹಿಳಾ ಅಭ್ಯರ್ಥಿಗಳಿದ್ದು ಶೇಕಡ 33 ರಷ್ಟು ಸ್ಥಾನಗಳನ್ನು ಮಹಿಳೆಯರಿಗೇ ನೀಡುವ ವಿವಿಧ ಪ್ರಮುಖ ಪಕ್ಷಗಳ ಭರವಸೆ ಈಡೇರಿಲ್ಲ. ಯುಎನ್ಐ ಸುದ್ದಿಸಂಸ್ಥೆ ಚುನಾವಣಾ ಅಧಿಕಾರಿಗಳಿಂದ ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಎಂಟು ಜಿಲ್ಲೆಗಳ 46 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಪ್ರಮುಖ ಪಕ್ಷಗಳ ಎಂಟು ಮಹಿಳಾ ಅಭ್ಯರ್ಥಿಗಳೂ ಸೇರಿದಂತೆ ಒಟ್ಟು 30 ಮಹಿಳೆಯರು ಸ್ಪರ್ಧಿಸಿದ್ದಾರೆ. ಔರಂಗಾಬಾದ್, ಜಲ್ನಾ ಮತ್ತು ಬೀಡ್ ಜಿಲ್ಲೆಗಳಲ್ಲಿ ತಲಾ ಆರು, ನಂದೀಡ್ ನಲ್ಲಿ 5, ಪರ್ಭನಿಯಲ್ಲಿ 4, ಲಾತೂರ್ ನಲ್ಲಿ 2, ಒಸ್ಮನಾಬಾದ್ ನಲ್ಲಿ ಓರ್ವ ಮಹಿಳಾ ಅಭ್ಯರ್ಥಿಗಳಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ವಿಫಲವಾಗಿದ್ದು ಶೇಕಡ 33 ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಲ್ಲಿ ವಿಫಲವಾಗಿವೆ.