ಗವಿಮಠ ಜಾತ್ರೆ: ಡ್ರೋಣ್ ಕ್ಯಾಮರಾದ ಮೂಲಕ ಅಜ್ಜನ ಜಾತ್ರಗೆ ಬನ್ನಿ ಆಹ್ವಾನ

Gavimath Jatre: Invitation to come to Ajjana Jatre through drone camera

ಗವಿಮಠ ಜಾತ್ರೆ: ಡ್ರೋಣ್ ಕ್ಯಾಮರಾದ ಮೂಲಕ ಅಜ್ಜನ ಜಾತ್ರಗೆ ಬನ್ನಿ ಆಹ್ವಾನ 

ಕೊಪ್ಪಳ 20: ಸಂಸ್ಥಾನ ಶ್ರೀ ಗವಿಮಠ ಜಾತ್ರೆಯೂ ಪ್ರತಿ ವರ್ಷ ವಿಭಿನ್ನ, ವಿಶಿಷ್ಟ ರೂಪದಲ್ಲಿ ಅರ್ಥ ಪೂರ್ಣವಾಗಿ ಜರುಗುತ್ತಿದೆ. ಆಧುನಿಕತೆಯ ಸ್ಪರ್ಶದ ಜೊತೆಗೆ ಭಕ್ತರಿಗೆ 2025ರ ಮಹಾಜಾತ್ರೋತ್ಸವದ ಆಹ್ವಾನ ಶ್ರೀಮಠದ ಭಕ್ತರಿಗೆ ನೇರವಾಗಿ ತಲುಪಿಸುವ ಸತ್ಕಾರ್ಯದಲ್ಲಿ ತೊಡಗಿದೆ. ಅದಕ್ಕೆ ಈ ಬಾರಿಯೂ ಜನೇವರಿ 15, 16 ಹಾಗೂ 17ರಂದು ನಡೆಯುವ ಅಜ್ಜನ ಜಾತ್ರೆಗೆ ಭಕ್ತರನ್ನು ಆಹ್ವಾನಿಸುವ ಆ ದೃಶ್ಯವನ್ನು ಡ್ರೋಣ್ ಕ್ಯಾಮರಾದ ಮೂಲಕ ಸೆರೆ ಹಿಡಿದ ಫೋಟೊ ದೊಂದಿಗೆ ಅಜ್ಜನ ಜಾತ್ರಗೆ ಬನ್ನಿ ಎಂದು ಆಹ್ವಾನ ನೀಡಲಾಗಿದೆ. ಈ ಚಿತ್ರದ ವಿಶೇಷತೆ ಎಂದರೇ ಈ ಚಿತ್ರವು ಶ್ರೀ ಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಕಟ್ಟಡದ ಮುಂಭಾಗದ ವಿಶಾಲವಾದ ಆವರಣದಲ್ಲಿ ಸೆರೆ ಹಿಡಿಯಲಾಗಿದೆ. ಮುಸ್ಸಂಜೆಯ ಹೊತ್ತಿನಲ್ಲಿ ಸೆರೆ ಹಿಡಿದ ಈ ಚಿತ್ರವು ನೋಡಲು ಅತ್ಯಂತ ಮನೋಹರವಾಗಿದೆ. ಮುಗ್ದ ಮನಸ್ಸಿನ ಶ್ರೀ ಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯದ  ಸುಮಾರು 1500 ಮಕ್ಕಳು ಮೇಣದಬತ್ತಿ ಹಿಡಿದು ಬೆಳಗುವದರ ಮೂಲಕ “ಅಜ್ಜನಜಾತ್ರೆಗೆ ಬನ್ನಿ”ಎಂದು ಭಕ್ತರಿಗೆ ಆಹ್ವಾನಿಸುವ ಸನ್ನಿವೇಶ ಅನನ್ಯವಾದುದು. ಇದು ಶ್ರೀ ಅಜ್ಜನ ಜಾತ್ರೆಗೆ ಬನ್ನಿ ಎನ್ನುವ ಕನ್ನಡ ವರ್ಣಮಾಲೆ ಅನುಸಾರವಾಗಿ ಎಲ್ಲಾ ಮಕ್ಕಳು ನಿಂತು ಮೇಣದ ಬತ್ತಿಹಿಡಿದ ಸನ್ನಿವೇಶವನ್ನು ಡ್ರೋಣ್ ಕ್ಯಾಮೆರಾದಲ್ಲಿ ಚಿತ್ರ ಸೆರೆ ಹಿಡಿಯಲಾಗಿದೆ. ಇದು ಶ್ರೀಮಠದ ಭಕ್ತರಿಗೆ ಈ ವರ್ಷದ ಜಾತ್ರೆಗೆ ಸಾಂಪ್ರದಾಯಿಕ ಆಹ್ವಾನ ನೀಡಲಾಗಿದೆ.