ವಿಶಾಖಪಟ್ಟಣಂ, ಮೇ 14,ಇತ್ತೀಚೆಗೆ ಸಂಭವಿಸಿದ ಅನಿಲ ಸೋರಿಕೆಯ ಪರಿಣಾಮಗಳ ಸಮೀಕ್ಷೆ ನಡೆಸಿ ಪಾರದರ್ಶಕ ಫಲಿತಾಂಶ ನೀಡುವ ಸಲುವಾಗಿ ಎಲ್‌ಜಿ ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಶೀಘ್ರದಲ್ಲೇ ವಿಶೇಷ ಸಂಸ್ಥೆ ಸ್ಥಾಪಿಸುವುದಾಗಿ ಪ್ರಕಟಿಸಿದೆ.ಕಳೆದ ಗುರುವಾರ ಮುಂಜಾನೆ ಗೋಪಾಲಪಟ್ಟಣಂ ಸಮೀಪದ ಎಲ್ಜಿ ಪಾಲಿಮರ್ ಕಾರ್ಖಾನೆಯಿಂದ ಉಂಟಾದ ಅಪಾಯಕಾರಿ ಅನಿಲ ಸೋರಿಕೆಯು 12 ಜೀವಗಳನ್ನು ಬಲಿ ತೆಗೆದುಕೊಂಡಿತು ಮತ್ತು ಹಾನಿಕಾರಕ ಹೊಗೆಯಿಂದ ನೂರಾರು ಜನರು ಬಾಧೆಗೊಳಗಾಗಿದ್ದರು.
ಎಲ್ಲಾ ಅಪಾಯಕಾರಿ ಅಂಶಗಳನ್ನು ತಡೆಗಟ್ಟಲು ಮತ್ತು ತೊಡೆದುಹಾಕಲು ಸ್ಟೈರೀನ್ ಮೊನೊಮರ್ (ಎಸ್‌ಎಂ) ದಾಸ್ತಾನುಗಳನ್ನು ಅನಿಲ ಸ್ಥಾವರದೊಳಗೆ ಮತ್ತು ದಕ್ಷಿಣ ಕೊರಿಯಾಕ್ಕೆ ಹಡಗುಗಳ ಮೂಲಕ ಬಂದರಿನಲ್ಲಿರುವ ಸ್ಟೈರೀನ್ ಟ್ಯಾಂಕ್‌ಗಳಲ್ಲಿ ಸಾಗಿಸಲು ಪ್ರಾರಂಭಿಸಿದ್ದೇವೆ ಎಂದು ಹೇಳಿದೆ.ದಕ್ಷಿಣ ಕೊರಿಯಾದ ದೈತ್ಯ ಎಲ್ಜಿ ತನ್ನ ಸಿಯೋಲ್ ಕೇಂದ್ರ ಕಚೇರಿಯ ತಾಂತ್ರಿಕ ತಜ್ಞರ ತಂಡವನ್ನು ಎಲ್ಜಿ ಪಾಲಿಮರ್ಸ್ ಇಂಡಿಯಾ ಪ್ಲಾಂಟ್‌ಗೆ ಕಳುಹಿಸಿದ್ದು, ಉತ್ಪಾದನೆ, ಪರಿಸರ ಮತ್ತು ಸುರಕ್ಷತಾ ತಜ್ಞರ ತಂಡವು ಪ್ರಸ್ತುತ ಘಟನೆಯ ಕಾರಣದ ಬಗ್ಗೆ ತನಿಖೆ ನಡೆಸುತ್ತಿದೆ ಮತ್ತು ಈಗಾಗಲೇ ಜವಾಬ್ದಾರಿಯುತ ಪುನರ್ವಸತಿಗೆ ಬೆಂಬಲ ನೀಡುತ್ತಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಘಟನೆಯ ಕಾರಣವನ್ನು ವಿಶ್ಲೇಷಿಸಲು, ಮರುಕಳಿಕೆಯನ್ನು ತಡೆಗಟ್ಟಲು ಮತ್ತು ಹಾನಿ ಚೇತರಿಕೆಗೆ ತ್ವರಿತಗತಿಯ ಬೆಂಬಲ ನೀಡಲು ತಂಡವು ಸಂಬಂಧಿತ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಎಲ್ಜಿ ಪಾಲಿಮರ್ಸ್ ತಿಳಿಸಿದೆ.