ಉಗರಗೋಳ ಗ್ರಾಮದಲ್ಲಿ ಕಸ ವಿಲೇವಾರಿ ವಾಹನ
Garbage disposal vehicle in Ugargol village
ಲೋಕದರ್ಶನ ವರದಿ
ಉಗರಗೋಳ 01: ಗ್ರಾಮಸ್ಥರು ಎಲ್ಲೆಂದರಲ್ಲಿ ಕಸ ಎಸೆಯಬಾರದು, ಬದಲಿಗೆ ಪ್ರತಿದಿನ ತಮ್ಮ ಮನೆಬಾಗಿಲಿಗೆ ಬರುವ ವಾಹನಕ್ಕೆ ಕಸ ನೀಡಿ ಸ್ವಚ್ಛ ವಾತಾವರಣ ನಿರ್ಮಾನಕ್ಕೆ ಸಹಕರಿಸಬೇಕು ಎಂದು ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ಶಿವುಪ್ರಕಾಶ ಪಾಟಿಲ ಹೇಳಿದರು.
ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಬುಧವಾರ ರಂದು ಗ್ರಾಮ ಪಂಚಾಯತಿ ವತಿಯಿಂದ ಕಸ ವಿಲೇವಾರಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಮನೆಗಳಲ್ಲಿ ವೈಯಕ್ತಿಕವಾಗಿ ಸ್ವಚ್ಛತೆ ಕಾಯ್ದುಕೊಂಡರೆ ಸಾಲದು, ತಮ್ಮ ಪರಿಸರದಲ್ಲೂ ಸಚ್ಛತೆ ಕಾಪಾಡಬೇಕು ಎಂದರು.
ಉಗರಗೋಳ ಪಂಚಾಯತ ಅಭಿವೃದ್ದಿ ಅಧಿಕಾರಿ ರೇಣುಕಾ ನಾಡಗೌಡ ಮಾತನಾಡಿ ಗ್ರಾಮಸ್ಥರು ಎಲ್ಲಿ ಬೇಕಾದಲ್ಲಿ ಕಸ ಎಸೆಯುವದರಿಂದ ದುರ್ನಾತ ಬೀರುತ್ತಿದ್ದು, ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿ ಇದು ತಮ್ಮ ಮೇಲೂ ಪರಿನಾಮ ಬಿರಬಹುದು, ಈಗಿರು ಕಸದ ವಾಹನದಲ್ಲಿ ಕಸವನ್ನು ಹಾಕಿ ಗಲೀಜನ್ನು ತಪ್ಪಿಸಬೇಕೆಂದು ಗ್ರಾಮಸ್ಥರಲ್ಲಿ ವಿನಂತಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 