ಗಂಗೂಲಿ-ದ್ರಾವಿಡ್ ಜುಗಲ್ ಬಂದಿಯಿಂದ ಭಾರತೀಯ ಕ್ರಿಕೆಟ್ ಮುಂದೆ ಸಾಗಲಿದೆ: ಲಕ್ಷ್ಮಣ

ನವದೆಹಲಿ, ಜೂನ್ 26: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರ ಮುಂದಾಳತ್ವದಲ್ಲಿ ಭಾರತೀಯ ಕ್ರಿಕೆಟ್ ಪ್ರತಿಯೊಂದು ಸ್ವರೂಪದಲ್ಲಿಯೂ ಮುಂದುವರಿಯಲಿದೆ ಎಂದು ಭಾರತದ ಮಾಜಿ ಬ್ಯಾಟ್ಸ್ ಮನ್ ವಿ.ವಿ.ಎಸ್. ಲಕ್ಷ್ಮಣ್ ಹೇಳಿದ್ದಾರೆ.ಭಾರತೀಯ ಕ್ರಿಕೆಟ್ ಆಡಳಿತದಲ್ಲಿ ಗಂಗೂಲಿ ಮತ್ತು ದ್ರಾವಿಡ್ ಅವರ ಜುಗಲ್ ಬಂದಿ ಅಗತ್ಯ ಎಂದು ಸ್ಟಾರ್ ಸ್ಪೋರ್ಟ್ಸ್ ಶೋ ಕ್ರಿಕೆಟ್ ಕನೆಕ್ಟೆಡ್ ನಲ್ಲಿ ಲಕ್ಷ್ಮಣ್ ಹೇಳಿದ್ದಾರೆ. "ಭಾರತೀಯ ಕ್ರಿಕೆಟ್ ಪ್ರತಿ ಸ್ವರೂಪದಲ್ಲಿ ಯಶಸ್ವಿಯಾಗಬೇಕಾದರೆ ಬಿಸಿಸಿಐ ಅಧ್ಯಕ್ಷ ಮತ್ತು ಎನ್‌ಸಿಎ ಅಧ್ಯಕ್ಷರ ಸಹಭಾಗಿತ್ವ ಬಹಳ ಮುಖ್ಯ" ಎಂದು ಲಕ್ಷ್ಮಣ್ ಹೇಳಿದರು.ಭಾರತದ ಕ್ರಿಕೆಟ್ ಅನ್ನು ಮುಂದೆ ಕೊಂಡೊಯ್ಯಲು ತಂಡದ ನಾಯಕ, ಎನ್‌ಸಿಎ ಮುಖ್ಯಸ್ಥ ಮತ್ತು ಬಿಸಿಸಿಐ ಅಧ್ಯಕ್ಷರ ನಡುವಿನ ಸಮನ್ವಯ ಬಹಳ ಮುಖ್ಯ ಎಂದು ಮಾಜಿ ಲಕ್ಷ್ಮಣ ಹೇಳಿದ್ದಾರೆ.ಲಕ್ಷ್ಮಣ್, ಗಂಗೂಲಿ ಮತ್ತು ದ್ರಾವಿಡ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ದೀರ್ಘಕಾಲದವರೆಗೆ ಭಾರತದ ಬ್ಯಾಟಿಂಗ್ ಗೆ ಆಧಾರವಾಗಿದ್ದರು.