ಹೊಸಪೇಟೆಯಲ್ಲಿ ಗಂಗಾಪರಮೇಶ್ವರಿ ಉತ್ಸವ

ಲೋಕದರ್ಶನವರದಿ

ರಾಣೇಬೆನ್ನೂರು೧೫: ತಾಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮದ ತುಂಗಭದ್ರಾ ನದಿ ದಂಡೆಯಲ್ಲಿರುವ ಗಂಗಾ ಪರಮೇಶ್ವರಿ ದೇವಸ್ಥಾನದಲ್ಲಿ ಗಂಗಾ ಜಯಂತ್ಯುತ್ಸವವನ್ನು  ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿಸಲಾಯಿತು.

 ಗಂಗಾಪರಮೇಶ್ವರಿ ಭಾವಚಿತ್ರ ಮೆರವಣಿಗೆಗೆ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಳಪ್ಪ ಅಂಬಿಗೇರ ಚಾಲನೆ ನೀಡಿ ಮಾತನಾಡಿ ಸಕಲ ಜೀವ ಸಂಕುಲ ಬದುಕಿಗೆ ಪಂಚಭೂತ ದೇವತೆಗಳೇ ಮೂಲ ಕಾರಣ, ಆ ಪಂಚಭೂತ ದೇವತೆಗಳಲ್ಲಿ ಗಂಗಾ ಮಾತೆಯೊಬ್ಬಳಾಗಿದ್ದಾಳೆ ಎಂದರು.

     ಅನಾದಿ ಕಾಲದಿಂದಲೂ ಗಂಗಾಮತ ಸಮಾಜಕ್ಕೆ ಇತಿಹಾಸವಿದ್ದು, ಆಕಾಶದಿಂದ ಗಂಗೆಯನ್ನು ಭೂಮಿಗೆ ತಂದ ಭಗೀರಥ, ಮಹಾಭಾರತ ಕಾವ್ಯ ರಚಿಸಿದ ಮಹಷರ್ಿ ವೇದವ್ಯಾಸ, ಕರ್ಣ, ಗಂಗಾತನಯ ಭೀಷ್ಮ, ಅಂಬಿಗರ ಚೌಡಯ್ಯನವರ ಆದರ್ಶಗಳನ್ನು ಗಂಗಾಮತ ಸಮಾಜ ಪಾಲಿಸಬೇಕು ಎಂದರು.

   ಪಾಪ ತೊಳೆಯುವ ಗಂಗಾದೇವಿಯ ನಂಬಿ ಬದುಕುವ ಗಂಗಾಮತಸ್ಥರು ಅಹಿಂಸಾ ಮಾರ್ಗವನ್ನು ಪಾಲಿಸುವ ಮೂಲಕ ಶಿಕ್ಷಣ ಪಡೆದು ದುಡಿಮೆಯ ಮೂಲಕ ಆಥರ್ಿಕವಾಗಿ, ರಾಜಕೀಯವಾಗಿ ಸ್ವಾವಲಂಬಿಗಳಾಗಿ ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದರು.

     ಗಂಗಾಪರಮೇಶ್ವರಿ ಭಾವಚಿತ್ರ ಮೆರವಣಿಯು ದೇವಸ್ಥಾನದಿಂದ ಹೊರಟು ತುಂಗಭದ್ರಾನದಿಗೆ ತೆರಳಿ ದೇವಿಮೂತರ್ಿಗೆ ಗಂಗಾಸ್ನಾನ ಮುಗಿಸಿದ ಬಳಿಕ ಪೂರ್ಣ ಕುಂಬ ಹೊತ್ತ ಮಹಿಳೆಯರು ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ಮೂಲ ದೇವಸ್ಥಾನಕ್ಕೆ ಬಂದು ಸೇರಿತು. ಬಳಿಕ ಅನ್ನ ಸಂತರ್ಪಣೆ ನಡೆಯಿತು. 

    ಗ್ರಾಪಂ ಉಪಾಧ್ಯಕ್ಷ ದಿನೇಶಕುಮಾರ, ಸದಸ್ಯೆ ಸುನಿತಾ ದ್ಯಾಮಕ್ಕನವರ,  ವೀರಣ್ಣ ಬಾಕರ್ಿ, ಕಾರ್ಯದಶರ್ಿ ಶಂಕರ. ಡಿ.ಬಿ, ಲಕ್ಷ್ಮವ್ವ ದ್ಯಾಮಕ್ಕನವರ, ಶಂಕರಪ್ಪ ಅಂಬಿಗೇರ, ಹನುಮಂತಪ್ಪ ಲಿಂಗದಹಳ್ಳಿ, ನಾಗರಾಜ ಅಂಬಿಗೇರ, ಬಸವರಾಜ ಬೋವೆರ ಸೇರಿದಂತೆ ಭಕ್ತರು ಮತ್ತಿತರರು ಇದ್ದರು