ರಾಷ್ಟ್ರೀಯ ಭಾವೈಕ್ಯತೆಗೆ ಗಣೇಶ ಉತ್ಸವ ಮೆರಗು: ಜಿಎಂ.ಕೋಟ್ಯಾಳ

ಲೋಕದರ್ಶನವರದಿ

ಆಲಮಟ್ಟಿ: ನಗರದ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಗಣೇಶೋತ್ಸವ ಹಬ್ಬ ಸೋಮವಾರ  ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ರಾಮಲಿಂಗೇಶ್ವರ ದೇವಸ್ಥಾನದಿಂದ ಗಣೇಶ ಮೂತರ್ಿಯನ್ನು ಶಾಲಾ ವಾಹನದಲ್ಲಿ ಮೆರವಣಿಗೆ ಮೂಲಕ ಕರೆ ತಂದು ಶೃದ್ಧಾಭಕ್ತಿಯಿಂದ ಪೂಜಿಸಿ ಪ್ರತಿಷ್ಠಾಪಿಸಲಾಯಿತು.  ಸಂಪ್ರದಾಯದಂತೆ ದಿನವಿಡಿ ಐದು ಧಾಮರ್ಿಕ ಪೂಜೆ ಪುರಸ್ಕಾರ ಸಲ್ಲಿಸಿ ಆರಾಧಿಸಲಾಯಿತು. ವಿಘ್ನೇಶ್ವರನಿಗೆ ಬಲು ಇಷ್ಟವಾದ ನೈವೇದ್ಯ ಎಡೆಯನ್ನು ಸಮಪರ್ಿಸಲಾಯಿತು.

         ಜ್ಞಾನ ಭಂಡಾರದ ಪ್ರತಿ ಸ್ವರೂಪವಾಗಿರುವ ವಿದ್ಯಾಪ್ರದಾಯಕ ವಿನಾಯಕನ ಲೀಲಾ ಸ್ಮರಣೆಯಲ್ಲಿ ವಿದ್ಯಾಥರ್ಿಗಳೆಲ್ಲ ಮಿಂದೆದ್ದರು. 

       ಈ ಸಂದರ್ಭದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಮಾತನಾಡಿ ಗಣೇಶ ಹಬ್ಬವೆಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ ಪ್ರೇಮ ವಿದ್ಯಾಬುದ್ಧಿ ಜ್ಞಾನದ ಧಾರೆಯಿಂದ ಖ್ಯಾತನಾಮ ಹೊಂದಿರುವ ಗಣೇಶನನ್ನು ನಿರ್ಮಲ ಮನಸ್ಸಿನಿಂದ ನೆನೆದು ಪೂಜಿಸಿದರೆ ಖಂಡಿತ ಬಯಸಿದ ಆಸೆ,ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಬಹುದು. ವಿಘ್ನನಿವಾರಕ ಸದಾಕಾಲ ಮಕ್ಕಳಿಗೆ ಅಭಯಹಸ್ತ ನೀಡುವನಾಗಿದ್ದಾನೆಂದರು.

ರಾಷ್ಟ್ರೀಯ ಭಾವೈಕ್ಯತೆಗೆ ಗಣೇಶೋತ್ಸವ ಪೂರಕ:      ಸ್ವತಂತ್ರ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಗೋಪಾಲಕೃಷ್ಣ ಗೋಖಲೆಯವರು ಹಳ್ಳಿ ಹಳ್ಳಿ, ಬೀದಿಬೀದಿಗಳಲ್ಲಿ ಗಣೇಶನ ಮೂತರ್ಿಗಳನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಬ್ರಿಟಿಷರ ವಿರುದ್ದ ಭಾರತೀಯರನ್ನು ಒಂದುಗೂಡಿಸುವ ಕಳೆಗೆ ನಾಂದಿಹಾಡಿದರಲ್ಲದೇ ರಾಷ್ಟ್ರೀಯ ಭಾವೈಕ್ಯತೆಯ ಹಂಬಲದ ಉದ್ದೇಶದಿಂದ ಜನರನ್ನು ಸಂಘಟಿಸಲು ಗಣೇಶ ಉತ್ಸವಕ್ಕೆ ಅಂದು ಮೆರಗು ನೀಡಿ ಚಾಲನೆ ಗೈದಿದ್ದಾರೆ. ಪರಿಣಾಮ ಅಂದಿನಿಂದ ಇಂದಿನವರೆಗೂ ಪ್ರತಿವರ್ಷ ವಿನಾಯಕನ ಉತ್ಸವ ದೇಶಾದ್ಯಂತ ಉತ್ಸಾಹದ ಉತ್ಸುಕತೆಯ ಬುಗ್ಗೆಯಿಂದ ಅದ್ಧೂರಿಯಾಗಿ ವಿಜೃಂಭಣೆಯಿಂದ ನೆರವೇರುತ್ತಲಿದೆ ಎಂದರು. 

     ಹಿರಿಯ ಶಿಕ್ಷಕ ಆರ್.ಪಿ.ಸಂತರ, ವಕ್ರತುಂಡ ಮಹಾಕಾಯ ಅದಿವಂದಿತ ಗಣೇಶನ ಅಪಾರ ಮಹಿಮೆ ಕುರಿತು ಮಕ್ಕಳಿಗೆ ವಿವರಣೆ ನೀಡಿದರು. ಆರ್.ಎಂ.ರಾಠೋಡ, ಎಸ್.ಎಚ್.ನಾಗಣಿ, ಎಲ್.ಆರ್.ಸಿಂಧೆ ಜಿ.ಆರ್.ಜಾಧವ, ಡಿ.ಕೆ.ಮುದ್ದಾಪುರ, ಅನಿತಾ ರಾಠೋಡ, ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ, ದಾನಾಬಾಯಿ ಲಮಾಣಿ, ಫಕ್ಕೀರಪ್ಪ ನಾಯ್ಕರ, ಗೋಪಾಲ ಬಸಪ್ಪ ಬಂಡಿವಡ್ಡರ ಇತರರಿದ್ದರು. ಹಬ್ಬದಂಗವಾಗಿ ಮಕ್ಕಳಿಗೆ ವಿಶೇಷ ಅನ್ನ ಸಂತರ್ಪಣೆ ವ್ಯವಸ್ಥೆಮಾಡಲಾಯಿತು.

          ಸಿಹಿ ಸಜ್ಜಕಾ, ತುಪ್ಪ, ಅನ್ನಸಾರು, ಉಪ್ಪಿನಕಾಯಿ ಚಪ್ಪರಿಸಿದರು. ಸಂಜೆ ವೇಳೆ ಗಣೇಶ ಮೂತರ್ಿ ವಿಸರ್ಜನಾ ಕಾರ್ಯಕ್ರಮ ಜರುಗಿತು.

        ಕೃಷ್ಣೇಯ ಹಿನ್ನೀರಿನಲ್ಲಿ ಪೂಜೆ ಸಲ್ಲಿಸಿ ಗಣಪತಿ ಬಪ್ಪಾ ಮೋರಯ್ಯಾ ಎಂಬ ಜಯ ಘೋಷದ ಮಧ್ಯೆ ವಿಸಜರ್ಿಸಿ ಗಣೇಶನಿಗೆ ಭಾವಭಕ್ತಿಯ ವಿದಾಯ ಹೇಳಲಾಯಿತು.