ಗಾಂಧೀಜಿಯವರ 150ನೇ ಜಯಂತಿ ಆಚರಣೆ

ರಾಯಬಾಗ 04: ಪಟ್ಟಣದ ಝೇಂಡಾಕಟ್ಟೆ ಬಳಿ ಕಾಂಗ್ರೇಸ್ ಮುಖಂಡರು ಮತ್ತು ಕಾರ್ಯಕರ್ತರು ಗಾಂಧಿಜೀ ಮತ್ತು ಲಾಬ ಬಹದ್ದೂರ ಶಾಸ್ತ್ರಿಯವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಮಹಾತ್ಮ ಗಾಂಧಿಜಿಯವರ 150ನೇ ಮತ್ತು ಲಾಲಬಹದ್ದೂರ ಶಾಸ್ತ್ರಿ ಅವರ 115ನೇ ಜಯಂತಿಯನ್ನು ಬುಧವಾರದಂದು ಆಚರಿಸಿದರು.

ಬಳಿಕ ಮಾತನಾಡಿ, ರಾಯಬಾಗ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಈರಗೌಡ ಪಾಟೀಲ, ಗಾಂಧಿಜೀಯವರ ಆದರ್ಶ ಮತ್ತು ಸರಳ ಜೀವನವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕೆಂದರು.

ಜಿ.ಪಂ. ಸದಸ್ಯೆ ಜಯಶ್ರೀ ಮೊಹಿತೆ, ಕುಡಚಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರೇವಣ್ಣಸರವ, ನ್ಯಾಯವಾದಿ ಆರ್.ಎಸ್.ಶಿರಗಾಂವೆ, ತಾ.ಪಂ.ಸದಸ್ಯರಾದ ನಾಮದೇವ ಕಾಂಬಳೆ, ಅಶೋಕ ಬಾನಸಿ, ಮಾರುತಿ ನಾಯಿಕ, ದಿಲೀಪ ಜಮಾದಾರ, ಕುಂತಿನಾಥ ಮಗದುಮ್ಮ, ಅರ್ಜುನ ಬಂಡಗಾರ, ಹಾಜಿ ಮುಲ್ಲಾ, ದಿಲೀಪ ಜಮಾದಾರ, ಶ್ರವಣ ಕಾಂಬಳೆ, ಮುರಗೇಶಕೋಟಿವಾಲೆ, ಭೀಮು ಕಾಂಬಳೆ, ಪುರಂದರ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.