ಜೂ.8 ಕ್ಕೆ ದರ್ಶನ‌ ನೀಡಲಿರುವ ಗಾಣಗಾಪುರ ದತ್ತಾತ್ರೇಯ

ಕಲಬುರಗಿ, ಜೂ.6, ಕೊರೊನಾ ಲಾಕ್ ಡೌನ್ ನಿಂದಾಗಿ ರಾಜ್ಯದ ದೇವಾಲಯಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ, ಭಕ್ತರ ಅವಕಾಶಕ್ಕೆ ಬ್ರೇಕ್ ಹಾಕಲಾಗಿತ್ತು.ಇದೀಗ  ಜೂ. 8 ಕ್ಕೆ ದೇಗುಲ ತೆರೆಯಲು ಸರ್ಕಾರ ಅನುಮತಿ ಹಿನ್ನೆಲೆಯಲ್ಲಿ ಜಿಲ್ಲೆಯ ಅಫಜಲಪುರ  ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ದರ್ಶನ‌‌ ನೀಡಲು‌ ಮುಂದಾಗಿದ್ದು, ದತ್ತನ ಸನ್ನಿಧಿಯಲ್ಲಿ ಸಕಲ ಸಿದ್ಧತೆ ನಡೆದಿದೆ.ಕೊರೊನಾ  ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲ ನಿಯಮಗಳನ್ನು ಹೊರಡಿಸಿದ್ದು, ಅದರಂತೆ  ಸಾಮಾಜಿಕ ಅಂತರ ಕಾಯ್ದುಕೊಳ್ಳಲು ದೇವಸ್ಥಾನದ ಪ್ರಾಂಗಣದಲ್ಲಿ ಚೌಕಾಕೃತಿ ರಚನೆ ಮಾಡಲಾಗುತ್ತಿದೆ.  ಅಲ್ಲದೇ, ಕೇವಲ ಬೆಳಿಗ್ಗೆ ಹಾಗೂ ಸಂಜೆ ಪಾಳಿಯಲ್ಲಿ ಮಾತ್ರ  ದರ್ಶನಕ್ಕೆ  ಅವಕಾಶ ಕಲ್ಪಿಸಲಾಗುತ್ತಿದೆ.ಕೇವಲ ರಾಜ್ಯವಲ್ಲದೇ ದೇಶದ ಹಲವಡೆಯಿಂದ ಅಸಂಖ್ಯಾತ ಭಕ್ತರು ದತ್ತನ ಸನ್ನಿಧಿಗೆ ಬಂದು ಆಶೀರ್ವಾದ ಪಡೆದುಕೊಳ್ಳುತ್ತಾರೆ.