ಸುಧಾಕರ ದೈವಜ್ಞ
ಶಿಗ್ಗಾವಿ28 : ತಾಲೂಕಿನ ಇತಿಹಾಸವನ್ನು ನೋಡಿದಾಗ ಅನೇಕ ಸಾದು ಸಂತರು, ಶರಣರು, ಮಹಾತ್ಮರು, ಶಿವಯೋಗಿಗಳು, ಪುಣ್ಯ ಪುರುಷರು ಮತ್ತು ತಮ್ಮ ಕಲೆಯ ಮುಖಾಂತರ ಮೆಲುಸ್ತರಕ್ಕೆ ಅನೇಕ ಕಲಾವಿದರೂ ಹೋಗಿದ್ದುಂಟು ಅದರಲ್ಲಿ ತಾಲೂಕಿನ ಹುಲಗೂರ ಗ್ರಾಮದ ಕುಮಾರಿ ಗೌರಮ್ಮ ಮರಡಿ ಒಬ್ಬರು.
ಹುಲಗೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ನಂತರ ಹುಲಗೂರಿನ ಪ್ರೌಡಶಾಲೆಯಲ್ಲಿ ಪ್ರೌಡಶಿಕ್ಷಣವನ್ನು ಮುಗಿಸಿ ನಂತರ ಶಿಗ್ಗಾವಿಯ ರಂಭಾಪೂರಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವ್ಯಾಸಂಗವನ್ನು ಮಾಡಿದ ಗೌರಮ್ಮ ಅವರು ಸರಳ ಮತ್ತು ಸೂಕ್ಷ್ಮವಾದ ವ್ಯಕ್ತಿತ್ವವನ್ನು ಉಳ್ಳಂತಹ ತಾಲೂಕಿನ ಯುವ ಗಾಯಕಿ ಗೌರಮ್ಮ.
ಬಡತನ ಪರಿಸ್ಥಿತಿಯಲ್ಲಿ ಬೆಳೆದ ಗೌರಮ್ಮ ತಂದೆ ಮತ್ತು ತಾಯಿ ಕೃಷಿ ಅವಲಂಬಿತ ಕುಟುಂಬದವರು. ಮೊದಲಿನಿಂದ ಗೌರಮ್ಮನಿಗೆ ಪ್ರಾರ್ಥನೆ ಮಾಡುವುದು ಮತ್ತು ಹಾಡನ್ನು ಹೇಳುವುದು ಮತ್ತು ಕೇಳುವುದು ಬಹಳ ಇಷ್ಟ ಹಾಗೂ ದೂರದರ್ಶನ ಮಾದ್ಯಮ ಮತ್ತು ಚಲನಚಿತ್ರದಲ್ಲಿ ಬರುವಂತ ವಿಶೇಷ ಹಾಡುಗಳನ್ನು ಹೇಳುವ ಹವ್ಯಾಸ ಮಾಡಿಕೊಂಡಿದ್ದರು ಆ ತಳಹದಿಯ ಮೇಲೆ ದಿನಂಪ್ರತಿ ಮನೆಯಲ್ಲಿಯೇ ಕೆಲವೊಂದು ಆಯ್ದ ಚಲನಚಿತ್ರಗಳ ಹಾಡಿನ ಪುಸ್ತಕವನ್ನು ತೆಗೆದುಕೊಂಡು ಸಂಗೀತ ಅಭ್ಯಾಸವನ್ನು ಮಾಡಲು ಬಯಸಿದಾಗ ಮನೆ ತಂದೆ-ತಾಯಿ ಮತ್ತು ಗುರುಗಳ ಪ್ರೋತ್ಸಾಹದಿಂದ ಇಂದು ಚಂದನ ವಾಹಿನಿಯು ನೆಡೆಸುವ ಗಾನ ಚಂದನ ಕಾರ್ಯಕ್ರಮದಲ್ಲಿ ಶಿಗ್ಗಾವಿ ತಾಲೂಕಿನ ಯುವ ಗಾಯಕಿ ಆಯ್ಕೆಯಾಗಿ ರಾಜ್ಯದ ಜನರಿಗೆ ಸಂಗೀತ ಸುದೆಯನ್ನು ಉಣಬಡಿಸಿ ಜನರ ಪ್ರೀತಿಗೆ ಪಾತ್ರಳಾಗಿದ್ದಾಳೆ ಗೌರಮ್ಮ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮತ್ತು ಬೇರೆ ಬೇರೆ ತಾಲೂಕಿನಲ್ಲಿ ತಮ್ಮ ಸಂಗೀತ ಕಾರ್ಯಕ್ರಮದ ಮುಖಾಂತರ ನಾಡಿನದದ್ಯಾಂತ ಎಲ್ಲ ಸಂಗೀತ ಪ್ರಿಯರಿಗೆ ಚಿರಪರಿಚರಾಗಿದ್ದು ಅವರಿಗೆ ಒಳ್ಳೆಯ ಅವಕಾಶ ದೊರಕಿದರೆ ಅವರು ಮೇಲೆತ್ತರಕ್ಕೆ ಹೋಗುವುದರಲ್ಲಿ ಸಂದೇಹವಿಲ್ಲ ಅವರಿಗೆ ಆಥರ್ಿಕವಾಗಿ ಮತ್ತು ಸಾಮಾಜಿಕವಾಗಿ ಬೆಂಬಲದ ಅವಶ್ಯಕತೆ ಇದೆ ಎಂದು ಹೇಳಬಹುದು.
ಅವರ ವಿಶೇಷ ಏನೆಂದರೆ ಬಡತನ ಪರಿಸ್ಥಿತಿಯಲ್ಲಿ ಸಂಗೀತ ಕಲಿಯಲು ಆಗಲಿಲ್ಲ ಏಕೆಂದರೆ ಮೂರು ವರ್ಷದ ಹಿಂದೆ ಅವರ ತಂದೆ ಮರಣವನ್ನು ಹೊಂದಿದ ಕಾರಣ ಅವರಿಗೆ ಸಂಗೀತ ಕಲಿಯಲು ಆಗುತ್ತಿಲ್ಲ ಕಾರಣ ಬಡತನ ಸಂಗೀತ ಕಲಿಯಲು ಹೋದರೆ ಆಥರ್ಿಕವಾಗಿ ಸದೃಡರಾಗಿರಬೇಕಾಗುತ್ತದೆ ಆದ್ದರಿಂದ ಇವರು ಕಲಿತ ಅಲ್ಪ ಸ್ವಲ್ಪ ಸಂಗೀತದ ತಳಹದಿಯ ಮುಖಾಂತರ ಸಂಗೀತ ಕಾರ್ಯಕ್ರಮವನ್ನು ನೀಡುತ್ತಿದ್ದು ಅವರಿಗೆ ತಾಲೂಕಿನ ಯಾರಾದರೂ ಪರವಾಗಿಲ್ಲ ಅವರ ಜವ್ದಾಬಾರಿ ತೆಗೆದುಕೊಂಡರೆ ಅವರಲ್ಲಿರುವ ಪ್ರತಿಭೆಯನ್ನು ಮತ್ತು ಸುಂದರ ಕಂಠದ ಸಂಗೀತ ಲಿಲೇಯನ್ನು ರಾಷ್ಟ್ರ ತುಂಬೆಲ್ಲ ಪ್ರಸರಿಸಬಹುದು ಅನ್ನುತ್ತಾರೆ ಗೌರಮ್ಮ.