ಲೋಕದರ್ಶನವರದಿ
ರಾಣೇಬೆನ್ನೂರು: ಏ.21: ಕರೋನಾ ವೈರಸ್ ಮಹಾಮಾರಿ ಸೋಂಕು ರೋಗವು ಹರಡುತ್ತಿರುವ ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಜನಜಾಗೃತಿಗೊಳಿಸುವ ನಿಟ್ಟಿನಲ್ಲಿ ಅನೇಕ ರೀತಿಯ ಕಾರ್ಯಕ್ರಮಗಳು ಹಾಕಿಕೊಂಡಿದೆ. ಇದು ಕೇವಲ ನಗರಕ್ಕಷ್ಟಕ್ಕೇ ಮಾತ್ರ ಸೀಮಿತವಾಗಿವಿಯೇ? ಎಂದು ಪ್ರಶ್ನಿಸಿರುವ ಉತ್ತರ ಕನರ್ಾಟಕ ಪ್ರದೇಶ ರೈತ ಹಾಗೂ ರೈತ ಕಾಮರ್ಿಕರ ಸಂಘದ ಅಧ್ಯಕ್ಷ ಕೃಷ್ಣಮೂತರ್ಿ ಲಮಾಣಿ ಅವರು ಈ ಕೂಡಲೇ ಇಂತಹ ಜನಜಾಗೃತಿ ಕಾರ್ಯಕ್ರಮಗಳು ತಾಂಡಾಗಳಲ್ಲಿಯೂ ಸಹ ನಡೆಸಲು ತಾಲೂಕಾಡಳಿತವು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ನಗರದಲ್ಲಿ ಕರೋನಾ ಜಾಗೃತಿ ಕಾರ್ಯಕ್ರಮಗಳು ಆಡಳಿತ, ಸಂಘ-ಸಂಸ್ಥೆಗಳು ನಗರಸಭೆ, ಪೋಲೀಸ್ ಇಲಾಖೆ, ವೈದ್ಯರು, ಪೌರಕಾಮರ್ಿಕರು ಮತ್ತು ಮತ್ತಿತರೆ ಸಂಘ-ಸಂಸ್ಥೆಗಳು ಆಶಾ ಅಂಗನವಾಡಿ ಕಾರ್ಯಕರ್ತರು ಮಾಡುತ್ತಿದ್ದಾರೆ.
ಆದರೆ, ಜನಜಾಗೃತಿಯು ತಾಲೂಕಿನಲ್ಲಿರುವ ತಾಂಡಾಗಳಲ್ಲಿ ನಡೆಯುತ್ತಿರುವುದು ಕಂಡುಬರುತ್ತಿಲ್ಲ. ಕೂಡಲೇ ಕ್ರಮಕೈಗೊಂಡು ಹೆಚ್ಚಿನ ರೀತಿಯಲ್ಲಿ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಕರೋನಾ ವೈರಸ್ ಘಟನೆಗಳು ಆರಂಭವಾಗಿ ಲಾಕ್ಡೌನ್ ಆಗಿದ್ದರೂ ಬಹುತೇಕ ತಾಂಡಾಗಳಲ್ಲಿ ಯುವಕರಿಗೆ ಕೆಲಸವಿಲ್ಲದೇ, ಸಮಯ ಕಳೆಯುವಂತಾಗಿದೆ.
ಈ ಸಂದರ್ಭದಲ್ಲಿ ಜೂಜಾಟಗಳು ನಿತ್ಯನಿರಂತವಾಗಿ ನಡೆಯುತ್ತಿದ್ದರೂ ಪೋಲೀಸ್ ಇಲಾಖೆ ಇತ್ತಕಡೆ ಕಣ್ಣು ಹಾಯಿಸದೇ, ಇರುವುದು ಜೂಜಾಟ ಹೆಚ್ಚಳಕ್ಕೆ ಪರೋಕ್ಷವಾಗಿ ಕಾರಣವಾದಂತಾಗಿದೆ. ಇಲಾಖೆಯು ಗಮನಹರಿಸಿ ಜೂಜಾಟಗಾರರ ಮೇಲೆ ಕಾನೂನು ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.