ಬಲ್ಲಿಯಾ, ಮಾ 20,ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಇಂದು ಬೆಳಗ್ಗೆ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ಜಾರಿಯಾದ ಬೆನ್ನಲ್ಲೇ ನಿರ್ಭಯಾ ಪೂರ್ವಿಕರ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು.ಉತ್ತರ ಪ್ರದೇಶದ ಮರ್ವಾರಾ ಕಾಲಾ ಗ್ರಾಮಸ್ಥರು ಪರಸ್ಪರ ಸಿಹಿ ಹಂಚಿ, ಹೋಳಿ ಆಚರಿಸಿದರು. “ಮುಸುಕಿದ್ದ ಕತ್ತಲೆ ಇಂದು ಬೆಳಗಿನ ಜಾವ ಸರಿದಿದೆ. ಈ ವರ್ಷ ಗ್ರಾಮದಲ್ಲಿ ಯಾರೂ ಸಹ ಹೋಳಿ ಆಚರಿಸಿರಲಿಲ್ಲ. ಆದರೆ ಈಗ ಎಲ್ಲರೂ ಬಣ್ಣದಲ್ಲಿ ಮೀಯುತ್ತಿದ್ದಾರೆ” ಎಂದು ನಿರ್ಭಯಾಳ ಅಜ್ಜ ಲಾಲ್ ಜಿ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ. "ಕಾಮುಕರನ್ನು ಗಲ್ಲಿಗೇರಿಸಿದ ಕ್ರಮ ಪ್ರತಿಯೊಬ್ಬ ಹೆಣ್ಣಿಗೆ ಸಂದ ಅಭಿನಂದನೆಯಾಗಿದೆ. ದೇಶದ ಮಹಿಳೆಯರು ನನ್ನ ಮೊಮ್ಮಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದು, ಹಲವು ವರ್ಷಗಳಬಳಿಕವಾದರೂ ನ್ಯಾಯ ದೊರಕಿದೆ" ಎಂದು ಲಾಲ್ ಜಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.