ಹಲಗೇರಿ ಪೋಲಿಸರು ಬೆಳ್ಳುಳ್ಳಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿ

ಲೋಕ ದರ್ಶನದ ಫಲಶೃತಿ

ರಾಣೆಬೆನ್ನೂರ: ತಾಲೂಕಿನ ಮಣಕೂರ ಗ್ರಾಮದಲ್ಲಿ  ಬೆಲೆ ಬಾಳುವ ಬೆಳ್ಳುಳ್ಳಿಯನ್ನು ಕಳುವು ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಪೋಲಿಸರು ಬಂಧಿಸಿದ್ದಾರೆ 

    ಹಿರೇಕೆರೂರ ತಾಲುಕಿನ ಚನ್ನಳ್ಳಿ ತಾಂಡಾದ ದೇವಲೆಪ್ಪಬಾಬು ಚಿಕ್ಕಮಾಗಡಿ ಹಾಗೂ ಕರಬಸ್ಸಪ್ಪ ಶಿವಪ್ಪ ಚಿಕ್ಕಮಾಗಡಿ ಬಂಧಿಸಿದ್ದು ಇವರ ಹತ್ತಿರ 1 ಲಕ್ಷ ರೂ ಮೌಲ್ಯದ ಬೆಳ್ಳುಳ್ಳಿ ಹಾಗೂ ಟಿ ವಿ ಎಸ್ ಸ್ಕೂಟಿಯನ್ನು ಹಲಗೇರಿ ಪೋಲಿಸ್ ಠಾಣೆ ಪೋಲಿಸರು ವಶಪಡಿಸಿಕೊಂಡು ಕೇಸು ದಾಖಲಿಸಿದ್ದಾರೆ 

     ಕಳ್ಳರಿಗೆ ಸಹಕರಿಸಿದ ಜಯಪ್ಪ ಲಮಾಣಿ, ಕುಮಾರ ಲಮಾಣಿ ,ಮಾದೇವಪ್ಪ ಲಮಾಣಿ ಗಾಗಿ ಪೋಲೀಸರು ಬಲೆಬೀಸಿದ್ದಾರೆ 4 ರಂದು ಮಣಕೂರಿನ ರೈತ ನಾಗಪ್ಪ ಬನ್ನಿಕೋಡ್ಅವರ 10 ಕ್ವಿಂಟಾಲ್ ಬೆಳ್ಳುಳ್ಳಿ ಕಳುವಾಗಿದೆ ಎಂದು ರೈತ ನೀಡಿದ ದೂರಿನ ಮೇರೆಗೆ ಎಸ್ ಪಿ, ಮತ್ತು ಬಿ ವೈ ಎಸ್ ಪಿ, ಟಿ ವಿ ಸುರೇಶ ಇವರ ಮಾರ್ಗದರ್ಶನದಲ್ಲಿ ಹಲಗೇರಿ ಪಿ ಎಸ್ ಐ  ಸಿದ್ದಾರೂಢ ಬಡಿಗೇರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ 

ಫಲಶೃತಿ 

    ಲೋಕ ದರ್ಶನ ಪತ್ರಿಕೆಯಲ್ಲಿ ಸೋಮವಾರ ಬೆಳ್ಳುಳ್ಳಿಯನ್ನು ಬಿಡದ ಕಳ್ಳರು ಪೋಲೀಸರ ವಶಕ್ಕೆ ರೈತರ ರಕ್ಷಣೆಗೆ ಖಾಕಿ ಪಡೆ ಮುಂದಾಗುವುರೇ ? ಎಂಬ ವಿಶೇಷ ವರದಿಗೆ ಗಮನ ಸೆಳೆದು ಬೆಳ್ಳುಳ್ಳಿ ಕಳ್ಳರನ್ನು ಬಂಧಿಸಿ ಯಶಸ್ವಿಯಾಗಿದ್ದಾರೆ 

ಈ ವರ್ಷ ಮುಂಗಾರು ಮಳೆ ಹೆಚ್ಚಾಗಿದ್ದಾರಿಂದ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಳೆಗಳು ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳ್ಳುಳ್ಳಿ ಬೆಳೆ ಆಯಾ ಗ್ರಾಮಗಳಲ್ಲಿ ಅಲ್ಪ ಸ್ವಲ್ಪ ಬೆಳೆ ಬಂದಿದ್ದು ಉತ್ತಮ ಬೆಲೆ ಇರುವುದರಿಂದ ಕಳ್ಳರ ಕಣ್ಣು ಈಗ ಬೆಳ್ಳುಳ್ಳಿಯ ಮೇಲೆ ಬಿದ್ದಿರುತ್ತಾದೆ. ಕಳ್ಳರಿಂದ ಈ ಬೆಳೆಯನ್ನು ರಕ್ಷಿಸುವುದೇ ರೈತರಿಗ ದೊಡ್ಡ ತಲೆನೋವು ಆಗಿದೆ. 

ಬೆಳ್ಳುಳ್ಳಿಯನ್ನು ಕಿತ್ತು ಹೊಲಗಳಲ್ಲಿ ಮತ್ತು ಕಣಗಳಲ್ಲಿ ಓಣಗಿಸಲಿಕ್ಕೆ ರಾಶಿ ಹಾಕಿದಾಗ ಕಳ್ಳರು ಯಾವ ಮಾಯೆಯಿಂದ ಬಂದು ಕಳ್ಳತನ ಮಾಡುತ್ತಾರೋ ತಿಳಿಯಾದಾಗಿದೆ. 

ಈಗಾಗಲೇ ಮಣಕೂರು, ಇಟಗಿ, ಮುಷ್ಠೂರು, ತುಮ್ಮಿನಕಟ್ಟಿ, ಲಿಂಗದಹಳ್ಳಿ, ಹೆಡಿಯಾಲ, ಸುಣಕಲ್ಬಿದರಿ, ಜೋಯಿಸರಹರಳಹಳ್ಳಿ, ಉಕ್ಕುಂದ, ಸರ್ವಂದ, ಎರೇಕುಪ್ಪಿ ಮುಂತಾದ ಗ್ರಾಮಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ರೈತರು ಹಗಲಿರುಳು ಕಾಯುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ರೈತರು ತಮ್ಮ ಗೋಳನ್ನು ನಮ್ಮ ಪ್ರತಿನಿಧಿಗೆ ತಿಳಿಸಿದ್ದಾರೆ.