ಗದಗ ತಾಲೂಕು ಮಟ್ಟದ ತ್ರೈಮಾಸಿಕ ಗ್ಯಾರಂಟಿ ಸಭೆ
ಗದಗ 17: ಗದಗ ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷರಾದ ಅಶೋಕ ಮಂದಾಲಿ ಅವರ ಅಧ್ಯಕ್ಷತೆಯಲ್ಲಿ ಜರುಗುವ ತಾಲೂಕು ಮಟ್ಟದ ತ್ರೈಮಾಸಿಕ ಗ್ಯಾರಂಟಿ ಸಭೆಯನ್ನು ಡಿಸೆಂಬರ್ 19 ರಂದು ಬೆ 11 ಗಂಟೆಗೆ ಗದಗ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸದರಿ ಸಭೆಗೆ ಸಮಿತಿಯ ಗೌರವಾನ್ವಿತ ಸದಸ್ಯರುಗಳು ಹಾಗೂ ವಿಶೇಷ ಆಹ್ವಾನಿತರು ಸಕಾಲದಲ್ಲಿ ಉಪಸ್ಥಿತರಿರಲು ಗದಗ ತಾಲೂಕು ಪಂಚಗ್ಯಾರಂಟಿ ಯೋಜನೆ ಸದಸ್ಯ ಕಾರ್ಯದರ್ಶಿಗಳು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ್ಲ ತಿಳಿಸಿದ್ದಾರೆ.