ಗದಗ: ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಂಡು ಕೇಳರಿಯದ ಪ್ರವಾಹದ ನಿರ್ವಹಣೆ ಸರ್ಕಾರಕ್ಕೆ ಸವಾಲಾಗಿತ್ತು ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅದನ್ನೀಗ ಸೂಕ್ತವಾಗಿ ನಿರ್ವಹಿಸಲಾಗುತ್ತಿದೆ ಎಂದು ರಾಜ್ಯದ ಗಣಿ, ಭೂವಿಜ್ಞಾನ, ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ನುಡಿದರು.
ಗದಗ ಐ.ಬಿ.ಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಗದಗ ಜಿಲ್ಲೆಯ ನೆರೆ ಸಂದರ್ಭದ ನಿರ್ವಹಣೆ ಯನ್ನು ಜಿಲ್ಲಾಡಳಿತ ಉತ್ತಮವಾಗಿ ನಿರ್ವಹಿಸಿದ್ದು ಈಗ ನೆರೆ ನಂತರದಲ್ಲಿ ಸಂತ್ರಸ್ತರ ಬದುಕು ರೂಪಿಸುವ ಹಾಗೂ ರಸ್ತೆ, ಶಾಲಾ ಕಟ್ಟಡ ಸೇರಿದಂತೆ ಮೂಲಭೂತ ಸೌಕರ್ಯಗಳ ಪುನ ನಿಮರ್ಾಣ ಸಕರ್ಾರದ, ಜಿಲ್ಲಾಡಳಿತದ ಪ್ರಥಮಾದ್ಯತೆಯಾಗಿದೆ. ಇದರ ಜೊತೆಗೆ ಜನಸಾಮಾನ್ಯರ ಕುಂದುಕೊರತೆ ಸಮಸ್ಯೆ ನಿವಾರಣೆ ಜೊತೆಗೆ ಆಡಳಿತ ಚುರುಕಿಗೆ ತಾವು ಗಮನ ನೀಡುತ್ತಿದ್ದು ಈ ನಿಟ್ಟಿನಲ್ಲಿ ಸೋಮವಾರ ತ್ರೈಮಾಸಿಕ ಕೆ.ಡಿ.ಪಿ ನಡೆಸಲಾಗುತ್ತಿದೆ. ಎಂದು ಜಿಲ್ಲಾ ಉಸ್ತುವಾರಿ ಸಚಿವರು ನುಡಿದರು. ನರಗುಂದದಲ್ಲಿ ಸಂಭವಿಸುತ್ತಿರುವ ಭೂಕುಸಿತ ಪ್ರಕರಣಗಳ ಕುರಿತು ಭೂ ವಿಜ್ಞಾನಿಗಳಿಂದ ಪರಿಶೀಲಿನೆ ನಡೆಸಲಾಗಿದೆ. ಪ್ರಾಥಮಿಕ ವರದಿ ರೀತ್ಯಾ ಅಂತರ್ಜಲ ಹೆಚ್ಚಳ, ಮನೆಗಳಲ್ಲಿ ಇರುವ ಹಿಂದಿನ ಕಾಲದ ಹಗೇವುಗಳು ಜೊತೆಗೆ ಸವದತ್ತಿ ರಸ್ತೆ ಅಂತರಿಕವಾಗಿ ಅಂರ್ತಜಲ ಹರಿವಿಗೆ ತಡೆ ಉಂಟು ಮಾಡಿರುವ ಅಂಶಗಳನ್ನು ಉಲ್ಲೇಖಿಸಲಾಗಿದೆ. ಈ ಸಮಸ್ಯೆಯ ಪರಿಹಾರ ಕ್ರಮದ ಜೊತೆಗೆ ಜನರ ಸಂರಕ್ಷಣೆಗೆ ಅಗತ್ಯವಿದ್ದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸುರಕ್ಷಿತ ಸ್ಥಳದಲ್ಲಿ ತಾತ್ಕಾಲಿಕ ಶೆಡ್ ಒದಗಿಸಲು ಸಿದ್ದ ಎಂದು ಸಚಿವ ಸಿ.ಸಿ.ಪಾಟೀಲ ನುಡಿದರು. ಜಿಲ್ಲೆಯಲ್ಲಿ ಆಕ್ರಮ ಗಣಿಗಾರಿಕೆಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ತಾವು ಅಗತ್ಯದ ಆಡಳಿತಾತ್ಮಕ ಕ್ರಮಗಳನ್ನು ಜರುಗಿಸುತ್ತಿರುವುದಾಗಿ ತಿಳಿಸಿದ ಸಚಿವರು. ದೇಶದ ಸರ್ಮೋನ್ನತ ನ್ಯಾಯಾಲಯವು ಅಯೋಧ್ಯೆಗೆ ಸಂಬಂಧಿಸಿದಂತೆ ಇಡೀ ರಾಷ್ಟ್ರದ ಭಾವೈಕ್ಯತೆ ಸಾರುವ ತೀರ್ಪು ನೀಡಿದೆ ಎಂದರು.