ಲೋಕದರ್ಶನವರದಿ
ರಾಣೇಬೆನ್ನೂರು: ಜಿಟಿಜಿಟಿಯ ಮಳೆಯಲ್ಲೂ ಹಾಗೂ ಬರಗಾಲ ಛಾಯೆಯಲ್ಲಿಯೂ ಸಹ ತಾಲೂಕಿನಾದ್ಯಂತ ನಾಗರ ಪಂಚಮಿ ಹಬ್ಬವನ್ನು ಬಹುತೇಕವಾಗಿ ಸಡಗರ ಸಂಭ್ರಮದ ಮಧ್ಯ ಸಂಪ್ರದಾಯಬದ್ದವಾಗಿ ಆಚರಿಸಲಾಯಿತು. ನಗರ ಸೇರಿದಂತೆ ಕೆಲವಡೆ ಸೋಮವಾರ ಮತ್ತು ರವಿವಾರ ದಿನದಂದು ನಾಗಪ್ಪನಿಗೆ ಹಾಲು ಎರೆದು ಮಹಿಳೆಯರು ಭಕ್ತಿಭಾವ ಮೆರೆದರು.
ನಚಿಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ನಾಗಪ್ಪನಿಗೆ ಹಾಲು ಎರೆಯುವದರ ಮೂಲಕ ಪೂಜೆ ಸಲ್ಲಿಸಿ. ಅಣ್ಣ-ತಂಗಿಯರು ಹಾಲು ಎರೆಯುವ ಸಂಪ್ರದಾಯ.
ಗಂಡನ ಮನೆಯಿಂದ ತವರು ಮನೆಗೆ ಹೆಣ್ಣು ಮಕ್ಕಳನ್ನು ಕರೆತಂದು ಅವರಿಗೆ ಹೊಸ ವಸ್ತ್ರಗಳನ್ನು ಉಡುಗೊರೆಯಾಗಿ ನೀಡಿ, ಮನೆ ಮಂದಿಯಲ್ಲ ನಾಗಪ್ಪನಿಗೆ ಹಾಲೆರೆದು ಸಂಭ್ರಮಿಸಿದರು.
ಕಲ್ಲು ಅಥವಾ ಮಣ್ಣಿನ ನಾಗಪ್ಪನಿಗೆ ಪೂಜೆ ಸಲ್ಲಿಸಿ ಶೇಂಗಾ, ಎಳ್ಳು, ಕಡಲಿ, ಹುರಳಿ, ತಂಬಿಟ್ಟು ಸೇರಿದಂತೆ ವಿವಿಧ ಬಗೆಯ ಉಂಡಿಗಳನ್ನು ನೈವೇದ್ಯ ಮಾಡಿ, ನಂತರ ಭೋಜನ ಸವಿದು ಜೋಕಾಲಿ ಜೀಕುವುದು ಎಲ್ಲಡೆ ಕಂಡು ಬಂದಿತು.
ದಿನವೀಡಿ ಬಂದ ತುಂತುರು ಮಳೆ ಹಾಗೂ ಆಗಾಗ್ಗೆ ಬರುತ್ತಿದ್ದ ಜೋರಾದ ಮಳೆಯಿಂದಾಗಿ ನಾಗರ ಪಂಚಮಿಗೆ ಸಂಭ್ರಮಕ್ಕೆ ಅಡತಡೆಯುಂಟಾಯಿತು