ಜಿಎಸ್ಟಿ ಭಾರತದ ಸುಗಮ ಪರಿವರ್ತನೆಗಳಲ್ಲೊಂದು: ಅರುಣ್ ಜೇಟ್ಲಿ

ನವದೆಹಲಿ 1: ಸರಕು ಮತ್ತು ಸೇವಾ ತೆರಿಗೆ-ಜಿಎಸ್ ಟಿ ಮೌಲ್ಯಮಾಪನ ಮತ್ತು ಗ್ರಾಹಕ ಸ್ನೇಹಿಯಾಗಿದ್ದು, ಭಾರತದ ಸುಗಮ ಪರಿವರ್ತನೆಗಳ ಸಾಲಿಗೆ ಸೇರಿದೆ  ಹಾಗೂ ಅನುಷ್ಠಾನಗೊಂಡ ಕೆಲವೇ ದಿನಗಳಲ್ಲಿ ಸ್ಥಿರತೆ ಸಾಧಿಸಿದೆ ಎಂದು ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ 

  "ಐತಿಹಾಸಿಕ ತೆರಿಗೆ ವ್ಯವಸ್ಥೆ ಜಿಎಸ್ ಟಿ ಯೋಜನೆ ಜಾರಿಗೆ ತರುವುದು ರಾಜಕೀಯವಾಗಿ ಸುರಕ್ಷಿತವಲ್ಲ.  ಅನೇಕ ದೇಶಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದ ಸರ್ಕಾರಗಳು ಮುಂದಿನ ಚುನಾವಣೆಯಲ್ಲಿ ಸೋಲನುಭವಿಸಿದವು ಎಂದು ಹಲವರು ಸಲಹೆ ನೀಡಿದರು. ಆದರೆ ಈ ಯೋಜನೆ ಭಾರತದ ಸುಗಮ ಪರಿವರ್ತನೆಗಳಲ್ಲೊಂದಾಯಿತು. ಭಾರತದಲ್ಲಿ ಜಿಎಸ್ ಟಿ ಅನುಷ್ಠಾನಗೊಂಡು 2 ವರ್ಷ ಪೂರೈಸಿದೆ" ಎಂದು ಟ್ವಿಟರ್ ನಲ್ಲಿ ತಿಳಿಸಿದ್ದಾರೆ 

  ಸಿಂಗಲ್ ಸ್ಲ್ಯಾಬ್ ಜಿಎಸ್ ಟಿ ವ್ಯವಸ್ಥೆಗೆ ಒತ್ತಾಯಿಸಿದ್ದ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿರುವ ಜೇಟ್ಲಿ, ಯಾವ ದೇಶದಲ್ಲಿ ಬಡವರೇ ಇಲ್ಲವೋ, ಅಂತಹ ಕಡೆ ಮಾತ್ರ ಸಿಂಗಲ್ ಸ್ಲ್ಯಾಬ್ ವ್ಯವಸ್ಥೆ ಯಶಸ್ವಿಯಾಗುತ್ತದೆ.  ಬಡತನದ ರೇಖೆಗಿಂತ ಕೆಳಗಿರುವ ಜನರೇ ಹೆಚ್ಚಾಗಿರುವ ದೇಶದಲ್ಲಿ ಒಂದೇ ದರ ವಿಧಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. 

  "ಜಿಎಸ್ಟಿ ಅಳವಡಿಕೆಗೂ ಮುನ್ನ ಬಡವರು, ಶ್ರೀಮಂತರು ಒಂದೇ ಬಗೆಯ ತೆರಿಗೆ ಪಾವತಿಸುತ್ತಿದ್ದರು.  ಹಣದುಬ್ಬರಕ್ಕೆ ನಿವಾರಣೆಗೆ ಬಹು ಹಂತದ ತೆರಿಗೆ ವ್ಯವಸ್ಥೆ ಸೂಕ್ತ.  ಇದರಿಂದ ಶ್ರೀಸಾಮಾನ್ಯರು ಕೊಳ್ಳಬಹುದಾದ ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸಿರುವುದಿಲ್ಲ.  ಹವಾಯಿ ಚಪ್ಪಲಿಗೂ, ಮಸರ್ಿಡಿಸ್ ಕಾರಿಗೂ ಒಂದೇ ಬಗೆಯ ತೆರಿಗೆ ಇರುವುದಿಲ್ಲ ಎಂದಿದ್ದಾರೆ. 

  ಐಷಾರಾಮಿ ಮತ್ತು ಸಾಮಾನ್ಯ ಸರಕುಗಳನ್ನು ಹೊರತುಪಡಿಸಿ, ಶೇಕಡಾ 28 ರಷ್ಟು ಸ್ಲ್ಯಾಬ್ ಗಳನ್ನು ಬಹುತೇಕ ಹಂತಹಂತವಾಗಿ ಹೊರಹಾಕಲಾಗಿದೆ. ಶೂನ್ಯ ಮತ್ತು ಶೇ. 5 ರಷ್ಟು ಸ್ಲ್ಯಾಬ್ ಗಳು ಯಾವಾಗಲೂ ಉಳಿಯುತ್ತವೆ. ಆದಾಯವು ಮತ್ತಷ್ಟು ಹೆಚ್ಚಾದಂತೆ, ಇದು ನೀತಿ ನಿರೂಪಕರಿಗೆ ಶೇ 12 ಮತ್ತು 18 ರಷ್ಟು ಸ್ಲ್ಯಾಬ್ ಗಳನ್ನು ಒಂದೇ ದರದಲ್ಲಿ ವಿಲೀನಗೊಳಿಸಲು ಅವಕಾಶವನ್ನು ನೀಡುತ್ತದೆ, ಇದರ ಪರಿಣಾಮವಾಗಿ ಜಿಎಸ್ಟಿಯನ್ನು ಎರಡು ದರದ ತೆರಿಗೆಯನ್ನಾಗಿ ಮಾಡುತ್ತದೆ. 

  ಜಿಎಸ್ ಟಿಯಲ್ಲಿ ಎಲ್ಲಾ 17 ವಿಭಿನ್ನ ಕಾನೂನು ವಿಲೀನಗೊಳಿಸ, ಏಕರೂಪ ತೆರಿಗೆಯನ್ನು ರಚಿಸಿದೆ. ವ್ಯಾಟ್ಗೆ ಪ್ರಮಾಣಿತ ದರವಾಗಿ ಜಿಎಸ್ಟಿ ಹಿಂದಿನ ದರವು ಶೇ. 14.5, ಅಬಕಾರಿ, ಶೇ.  12.5 ಮತ್ತು ಸಿಎಸ್ಟಿ ಮತ್ತು ತೆರಿಗೆಯ ಮೇಲಿನ ತೆರಿಗೆಯ ಪರಿಣಾಮವನ್ನು ಸೇರಿಸಿದರೆ, ಗ್ರಾಹಕರು ಪಾವತಿಸಬೇಕಾದ ತೆರಿಗೆ ಶೇ 31 ರಷ್ಟಿತ್ತು. ಮನರಂಜನಾ ತೆರಿಗೆಯನ್ನು ರಾಜ್ಯಗಳು ಶೇ 35 ರಿಂದ 110 ರವರೆಗೆ ವಿಧಿಸುತ್ತಿದ್ದವು. 

  ತೆರಿಗೆಯೊಂದಿಗೆ, ಕಳೆದ ಎರಡು ವರ್ಷಗಳಲ್ಲಿ ಮೌಲ್ಯಮಾಪನದ ತಳಹದಿ ಶೇ. 84 ರಷ್ಟು ಹೆಚ್ಚಾಗಿದೆ. ಜುಲೈನಿಂದ ಮಾರ್ಚ್  2017-18ರಲ್ಲಿ ತಿಂಗಳಿಗೆ ಸಂಗ್ರಹಿಸಿದ ಸರಾಸರಿ ಆದಾಯ 89,700 ಕೋಟಿ ರೂ. ಮುಂದಿನ ವರ್ಷದಲ್ಲಿ (2018-19) ಮಾಸಿಕ ಸರಾಸರಿ ಶೇ 10 ರಷ್ಟು ಹೆಚ್ಚಳಗೊಂಡು 97,100 ಕೋಟಿ ರೂ.ತಲುಪಲಿದೆ ಎಂದು ಹೇಳಿದ್ದಾರೆ.  ಜಿಎಸ್ಟಿ  ಸನ್ನಿವೇಶವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಇಂದು, ಕೇವಲ ಒಂದು ತೆರಿಗೆ, ಆನ್ಲೈನ್ ರಿಟರ್ನ್ಸ್ , ಪ್ರವೇಶ ತೆರಿಗೆ ಇಲ್ಲ, ಟ್ರಕ್ ಕ್ಯೂಗಳಿಲ್ಲ ಮತ್ತು ಅಂತರರಾಜ್ಯ ತಡೆಗಳಿಲ್ಲ.  ನಿಧರ್ಾರ ಕೈಗೊಳ್ಳುವ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ.  ಭವಿಷ್ಯದಲ್ಲಿ ಈ ಟ್ರೆಂಡ್ ಮುಂದುವರಿಯಲಿದೆ" ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.