ಲೋಕದರ್ಶನ ವರದಿ
ಬಾಗಲಕೋಟೆ, 12: ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಹಮ್ಮಿಕೊಂಡ ಕಲಿಕಾ ಪ್ರವಾಸಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ಗಂಗೂಬಾಯಿ ಮಾನಕರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಲ್ಲಿ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದ ಅವರು ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ಈಗಾಗಲೇ ಬಯಲು ಬಹಿದರ್ೆಸೆ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿದ್ದು, ಪ್ರಸ್ತುತ ಎರಡನೇ ಹಂತವಾಗಿ ಓಡಿಎಫ್ ಪ್ಲಸ್ ಕಾರ್ಯಕ್ರಮ ಚಟುವಟಿಕೆಯಡಿ ಸ್ವಚ್ಛ ಸುಂದರ ಜಿಲ್ಲೆಯನ್ನಾಗಿಸಲು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಹಾಗೂ ಶೌಚಾಲಯ ಸುಸ್ಥಿರ ಬಳಕೆ ಪೂರಕವಾಗಿ ಗ್ರಾಮ ಪಂಚಾಯತಿ ಪ್ರತಿನಿಧಿಗಳು, ಅಭಿವೃದ್ದಿ ಅಧಿಕಾರಿಗಳು, ತಾಲೂಕ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿ ಒಟ್ಟು 50 ಜನರಿಗೆ ಒಂದು ದಿನದ ಉಡುಪಿ ಜಿಲ್ಲಾ ಕಲಿಕಾ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದರು.
ಈಗಾಗಲೇ ಉತ್ತಮ ರೀತಿಯಲ್ಲಿ ಶೌಚಾಲಯಗಳ ಸುಸ್ಥಿರ ಬಳಕೆ ಹಾಗೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮಾಡಿದ ಉಡುಪಿ ಜಿಲ್ಲೆ ಅಧ್ಯಯನ ಪ್ರವಾಸವು ಈ ಜಿಲ್ಲೆಯಲ್ಲಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನ ಕೈಗೊಳ್ಳಲು ಹಾಗೂ ಸ್ವಚ್ಛ ಸುಂದರ ಜಿಲ್ಲೆಯನ್ನಾಗಿಸಲು ಸಹಕಾರವಾಗುವುದೆಂದು ಜಿ.ಪಂ ಸಿಇಓ ಮಾನಕರ ಹೇಳಿದರು. ಇದೇ ಸಂದರ್ಭದಲ್ಲಿ ಜಿ.ಪಂ ಯೋಜನಾ ನಿದರ್ೇಶಕ ವಿ.ಎಸ್.ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.