ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿ.ಬಿ.ಸಿಂಡ್ರೋಮ್ : ಎರಡು ಹಳ್ಳಿಗಳ ಮೇಲೆ ನಿರಂತರ ನಿಗಾನಾಗರಾಜ್ ಹರಪನಹಳ್ಳಿ

GB Syndrome in Uttara Kannada District: Harapanahalli is a constant attack on two villages

ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿ.ಬಿ.ಸಿಂಡ್ರೋಮ್ : ಎರಡು ಹಳ್ಳಿಗಳ ಮೇಲೆ ನಿರಂತರ ನಿಗಾನಾಗರಾಜ್ ಹರಪನಹಳ್ಳಿ 

ಕಾರವಾರ 22  : ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಗುಲಿಯನ್ ಬರಿ ಸಿಂಡ್ರೋಮ್ ( ಜಿ.ಬಿ.ಸಿಂಡ್ರೋಮ್ ) ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರದ ತಾಲೂಕಿನ ಒಂದೆರಡು ಹಳ್ಳಿಗಳಲ್ಲಿ ಈಚಿನ ದಿನಗಳಲ್ಲಿ ಮತ್ತೆ ಕಾಣಿಸಿಕೊಂಡಿದೆ. ಹಳಿಯಾಳ ಗೌಳಿವಾಡ ಗ್ರಾಮ ಮತ್ತು ಅದರ ಸುತ್ತಮುತ್ತ ಮಜಿರೆಗಳು , ಯಲ್ಲಾಪುರದ ಕುಂದರಗಿ ಪಂಚಾಯತ್ ವ್ಯಾಪ್ತಿಯ ಮಜ್ಜಿಗೆ ಮತ್ತು ಇತರೆ ಗ್ರಾಮದಲ್ಲಿ ಜಿ.ಬಿ.ಸಿಂಡ್ರೋಮ್ ಲಕ್ಷಣದ ಕಾಯಿಲೆ ಬಂದಿದ್ದು, ಆರೋಗ್ಯ ಇಲಾಖೆ ನಿರಂತರ ನಿಗಾ ವಹಿಸಿದೆ. ಹಳಿಯಾಳ ಮತ್ತು ಯಲ್ಲಾಪುರದಿಂದ ಪಂಡರಾಪುರ ವಿಠ್ಠಲನ ದರ್ಶನ ಕ್ಕೆ ಹೋಗಿ ಮರಳಿ ಬಂದ ಕೆಲವರಲ್ಲಿ ಈ ಕಾಯಿಲೆ ಕಂಡು ಬಂದಿದೆ. ಹಳಿಯಾಳದಲ್ಲಿ 38, ಯಲ್ಲಾಪುರದ ಕುಂದರಗಿ ವ್ಯಾಪ್ತಿಯಲ್ಲಿ 30 ಜನರಿಗೆ ಜಿ.ಬಿ.ಸಿಂಡ್ರೋಮ್ ಲಕ್ಷಣ ಕಂಡು ಬಂದಿವೆ. ಇದರಲ್ಲಿ 3 ಜನರ ಆರೋಗ್ಯ ಸ್ಥಿತಿ ಗಂಭೀರ ವಾಗಿದ್ದು, ಅವರನ್ನುಧಾರವಾಡದ ಎಸ್‌. ಡಿ.ಎಂ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರು ಪ್ರಣಾಪಾಯ ದಿಂದ ಪಾರಾಗಿದ್ದಾರೆ ಎನ್ನಲಾಗಿದೆ.ಮಹಾರಾಷ್ಟ್ರದಲ್ಲಿ ಕಾಣಿಸಿದ ಜಿ.ಬಿ.ಸಿಂಡ್ರೋಮ್ ಉತ್ತರ ಕನ್ನಡ ಜಿಲ್ಲೆಗೆಹೊಸದಲ್ಲ. ಈ ರೋಗ ದಾಂಡೇಲಿ, ಜೋಯಿಡಾ, ಯಲ್ಲಾಪೂರ ತಾಲೂಕುಗಳಲ್ಲಿ ಕಳೆದ 10 ವರ್ಷಗಳ ಹಿಂದೆಯೇ ಕಾಣಿಸಿಕೊಂಡಿತ್ತು. ಈ ವಿಚಿತ್ರ ರೋಗದ ಕುರಿತು ಈ ಹಿಂದೆ ಮಾದ್ಯಮಗಳಲ್ಲಿ ,ದೃಶ್ಯ ಮಾಧ್ಯಮ ಗಳಲ್ಲಿ ಸಹ ಪ್ರಸಾರವಾಗಿತ್ತು .ಕೆಲವು ವರ್ಷಗಳ ಹಿಂದೆ ಜೋಯಿಡಾ ತಾಲೂಕಿನ ಹುಡಸಾ ಗ್ರಾಮದ ಅರ್ಜುನ ದೇಸಾಯಿ ಎನ್ನುವವರ ಮಗಳನ್ನು ಹೆರಿಗೆಗಾಗಿ ದಾಂಡೇಲಿಯ ಖಾಸಗಿ ನಸಿಂರ್ಗ್ ಹೋಂ ನಲ್ಲಿ ದಾಖಲಿಸಲಾಗಿತ್ತು. ಆ ಮಹಿಳೆಗೆ ಇದಕ್ಕಿದ್ದಂತೆ ಕಾಲು, ಕೈ,ಶರೀರದ ಮಾಂಸಖಂಡಗಳು ದುರ್ಬಲವಾಗಿ ಚಲನ ಶಕ್ತಿ ಕಳೆದುಕೊಳ್ಳುವಂತಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದ ಮಹಿಳೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ಆರೋಪ ಸಹ ಬಂದಿತ್ತು. ವೈದ್ಯರನ್ನು ನಿಂದಿಸಿ ಪ್ರತಿಭಟನೆಗಳು ನಡೆದವು . ನಂತರ ತನಿಖೆಗೆಂದು ಅಂದಿನ ಜಿಲ್ಲಾ ಆರೋಗ್ಯಾಧಿಕಾರಿಗಳು (ಡಿಎಚ್ ಒ) ಸ್ಥಳಕ್ಕೆ ಬಂದು ಪರೀಶೀಲಿಸಿ ರೋಗಿಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಿದರು. ಅಲ್ಲಿಯ ವೈದ್ಯರು ರೋಗಿಯನ್ನು ಪರೀಶೀಲಿಸಿದಾಗ ಅದು ಗುಲಿಯನ್ ಬರಿ ಸಿಂಡ್ರೋಮ್ ಕಾಯಿಲೆ ಎಂದು ಗುರುತಿಸಲಾಯಿತು. ನಂತರ ಮಹಿಳೆ ಸೂಕ್ತ ಚಿಕಿತ್ಸೆಯಿಂದ ಚೇತರಿಸಿಕೊಂಡು ಇದೀಗ ಜೋಯಿಡಾದ ಹುಡಸಾ ಗ್ರಾಮದಲ್ಲಿದ್ದಾರೆ.ಈ ರೀತಿ ಈ ಭಾಗದ ಕೆಲ ಪುರುಷ ಹಾಗು ಮಹಿಳೆಯರಿಗೆ ಜಿ.ಬಿ. ಸಿಂಡ್ರೋಮ್ ಕಾಯಿಲೆ ಬಂದದ್ದು ಇದೆ. ಅದ. ಮೊದಮೊದಲು ರೋಗದ ಅರಿವಿಲ್ಲದೆ ನಾಟಿ ವೈದ್ಯರಿಗೆ ತೋರಿಸುತ್ತಿದ್ದರು. ರೋಗ ಲಕ್ಷಣ ಹೆಚ್ಚಾದಂತೆ ಸರ್ಕಾರಿ ಹಾಗು ಖಾಸಗಿ ಆಸ್ಪತ್ರೆಗಳಲ್ಲಿ ಹೋಗುತ್ತಿದ್ದರು. ಅಲ್ಲಿಯ ಚಿಕಿತ್ಸೆಗೆ ರೋಗ ನಿಯಂತ್ರಣಕ್ಕೆ ಬಾರದಿದ್ದಾಗ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಿ ಕಳಿಸಲಾಗುತ್ತಿತ್ತು. ರೋಗ ಯಾವುದೆಂದು ಪತ್ತೆಯಗುವ ವೇಳೆಗೆ ರೋಗಿ ಸಂಪೂರ್ಣವಾಗಿ ನಿತ್ರಾಣರಾಗುತ್ತಿದ್ದರು. ನಂತರದ ಕೆಲವು ತಿಂಗಳುಗಳ ಚಿಕಿತ್ಸೆ ಹಾಗು ನರಳಾಟದ ನಂತರ ಕ್ರಮೇಣ ಚೇತರಿಸಿಕೊಂಡು ಗುಣ ಮುಖರಾಗಿ ಬರುತ್ತಿದ್ದರು. ಅವರಲ್ಲಿ ಕೆಲವರು ಇಂದಿಗೂ ಕೈಗೆ ಊರುಗೋಲುಗಳ ಸಹಾಯದಿಂದ ನಡೆದಾಡುವದನ್ನು ಕಾಣಬಹುದು.   ಜಿ.ಬಿ.ಸಿಂಡ್ರೋಮ್ ರೋಗದ ಲಕ್ಷಣಗಳು:ಹಠಾತ್ ಮರಗಟ್ಟುವಿಕೆಯಿಂದ ಸ್ನಾಯು ದೌರ್ಬಲ್ಯವನ್ನುಂಟುಮಾಡಿ ದೇಹದ ಬಹು ಪಾಲು ಭಾಗದ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ವ್ಯಕ್ತಿಯ ಸ್ವ ರಕ್ಷಣಾ ವ್ಯವಸ್ಥೆಯ ಬಾಯಿಯ ನರಗಳ ಮೇಲೆ ಬ್ಯಾಕ್ಟೀರಿಯಾಗಳು ದಾಳಿ ಮಾಡಿದಾಗ ಪಾದಗಳಿಂದ ಸ್ನಾಯು ದೌರ್ಬಲ್ಯ ಪ್ರಾರಂಭವಾಗಿ ನಿಧಾನವಾಗಿ ಹರಡುತ್ತಾ ಕೈ ಹಾಗು ಕುತ್ತಿಗೆಯವರೆಗೆ ಹರಡುತ್ತದೆ. ಇದರಿಂದ ಕೈ ಕಾಲುಗಳ ಚಲನಾ ಶಕ್ತಿ ಸಂಪೂರ್ಣ ಕುಸಿದು ಉಸಿರಾಟ ಸಮಸ್ಯೆ ಉಂಟಾಗುತ್ತದೆ. ಮಾಂಸಖಂಡಗಳ ದುರ್ಬಲತೆ, ಕೈ ಕಾಲುಗಳಲ್ಲಿ ಕೆಳಭಾಗದಿಂದ ಶುರುವಾಗಿ ಮೇಲ್ಬಾಗದವರೆಗೆ ಮುಳ್ಳು ಚುಚ್ಚಿದಂತಾಗಿ ಕೈ ಕಾಲುಗಳು ಹಿಡಿದಂತೆ ಆಗುತ್ತದೆ. ಈ ರೋಗಕ್ಕೆ ತನ್ನದೆ ಆದ ಲಕ್ಷಣಗಳಿದ್ದು ಜನರು ತಮ್ಮ ಆರೋಗ್ಯದ ಬಗ್ಗೆ ಬಹಳ ಎಚ್ಚರಿಕೆಯಿಂದಿರಬೇಕಿದೆ. ಎಲ್ಲ ವಯಸ್ಸಿನವರಲ್ಲೂ ಈ ಕಾಯಿಲೆ ಬರಬಹುದು. ಇದರ ಹರಡುವಿಕೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಒಂದು ಜಾತಿಯ ಬ್ಯಾಕ್ಟಿರಿಯಾ ಸೋಂಕು ಪ್ರಮುಖ ಕಾರಣ. ಒಬ್ಬ ವ್ಯಕ್ತಿಯ ರೋಗ ಲಕ್ಷಣಗಳನ್ನು ಮತ್ತು ನರಮಂಡಲದ ಪರೀಕ್ಷೆ ಆಧರಿಸಿ ಜಿ.ಬಿ. ಸಿಂಡ್ರೋಮ್ ಎಂದು ಪತ್ತೆ ಹಚ್ಚಲಾಗುತ್ತದೆ. ಈ ರೋಗ ಹೆಚ್ಚಾಗಿ ಕಲುಷಿತ ನೀರು ಕುಡಿಯುವದರಿಂದ, ಪಾಚಿಕಟ್ಟಿದ ಮಡುಗಟ್ಟಿದ ನಿಂತ ನೀರಿನಲ್ಲಿ ಬೆಳೆದ ಮೀನು ಹಾಗು ಇನ್ನೀತರ ಜಲಚರ ಆಹಾರಗಳನ್ನು ಮತ್ತು ಅರೆಬರೆ ಬೆಂದ ಕೋಳಿ ಮಾಂಸಗಳಲ್ಲಿಯ ಬ್ಯಾಕ್ಟಿರಿಯಾಗಳಲ್ಲಿಯ ಜಿ.ಬಿ. ಸಿಂಡ್ರೋಮ್ ಬರುತ್ತದೆ ಎನ್ನಲಾಗಿದೆ. ಈ ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ. ಅಲೋಪತಿ ಓಷಧದ ಜೊತೆಗೆ ಆಯುರ್ವೆದ ಎಣ್ಣೆಗಳ ಮಸಾಜ್ ಕ್ರಮಕ್ಕೆ ರೋಗಿಗಳು ಮೊರೆ ಹೋಗುತ್ತಾರೆ. ಈ ರೋಗ ಬಂದವರು ಇದರಿಂದ ಹೊರಬರಲು ತಿಂಗಳುಗಟ್ಟಲೆ ಕಾಲ ತೆಗೆದುಕೊಳ್ಳುತ್ತಾರೆ. ಆದರೆ ಸಂಪೂರ್ಣ ಚೇತರಿಸಿಕೊಂಡ ನಂತರವೂ ನಡೆದಾಡಲು ಕಷ್ಟವಾಗುವ ಸಾಧ್ಯತೆಯಿದೆ. ಈ ರೋಗ ಗಂಭೀರ ಸ್ವರೂಪ ಪಡೆದಾಗ ರೋಗಿಗೆ ವೀಲ್ ಚೇರ್, ವಾಕರ್ ಗಳ ಸಹಾಯ ಬೇಕಾಗುತ್ತದೆ. ಜಿ .ಬಿ. ಸಿಂಡ್ರೋಮ್‌ದಿಂದ ಸಾವನ್ನಪ್ಪಿದ ಬಗ್ಗೆ ಮಾಹಿತಿಗಳಿಲ್ಲ. ಹಿಂದೆ ಐದು ಸಾವಿರ ಜನರಲ್ಲಿ ಒಬ್ಬರಿಗೆ ಮಾತ್ರ ಈ ರೋಗ ಕಂಡು ಬಂದಿದ್ದು, ಇತ್ತಿಚೆಗೆ ಇದರ ಹಾವಳಿ ಹೆಚ್ಚಾಗುತ್ತಿರುವ ವರದಿಗಳಿವೆ.......ಕೋಟ್‌...*ಜಿ.ಬಿ.ಸಿಂಡ್ರೋಮ್ ಸಾಂಕ್ರಾಮಿಕ ರೋಗವಲ್ಲ. ಆದರೂ ಈ ಕಾಯಿಲೆ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಗೌಳಿವಾಡಾ ,ಕುಂದರಗಿ ಪಂಚಾಯತ ಮಜಿರೆ ಮೇಲೆ ನಿಗಾ ಇಟ್ಟಿದ್ದಾರೆ. 65 ಜನ ಅಪಾಯದಿಂದ ಪಾರಾಗಿದ್ದಾರೆ .