ಬುಲಂದ್ಶಹರ್, ಫೆಬ್ರವರಿ 15, ನಿರ್ಭಯ ಪ್ರಕರಣ ನೆನಪು ಮಾಡುವಂತಹ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ಜಿಲ್ಲೆಯ ಸಿಯಾನಾ ಪ್ರದೇಶದಲ್ಲಿ ಜರುಗಿದೆ. ಮೀರತ್ ವಿಶ್ವವಿದ್ಯಾಲಯದ ಎಂಬಿಎ ವಿದ್ಯಾರ್ಥಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ಗುರುವಾರ ಘಟನೆ ಸಂಭವಿಸಿದ್ದು, ಮೀರತ್ನಿಂದ ವಿದ್ಯಾರ್ಥಿ ಬಸ್ನಲ್ಲಿ ಹಿಂದಿರುಗುತ್ತಿದ್ದಾಗ, ವಾಹನವು ಕೆಟ್ಟು ನಿಂತಾಗ ಆಕೆ ಕಾರಿನಲ್ಲಿ ಲಿಫ್ಟ್ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದವರು ಬುಲಂದ್ಶಹರ್ನ ಸಿಯಾನಾಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಪ್ರತಿಭಟನೆಗೆ ಪ್ರಯತ್ನಿಸಿದಾಗ ಆಕೆಯ ಮೇಲೆ ಕಬ್ಬಿಣದ ರಾಡಿನಿಂದ ಥಳಿಸಲಾಗಿದೆ. ನಂತರ ವಿದ್ಯಾರ್ಥಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಸಯಾನಾ ಪ್ರದೇಶದ ಹಳ್ಳಿಯೊಂದರಲ್ಲಿ ಬಿಸಾಡಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಮೀರತ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದೂ ವರದಿಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಆಕೆಯನನ್ನು ಚೆನ್ನಾಗಿ ಬಲ್ಲವರೆ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ, ಇದರಿಂದಾಗಿ ಅವರು ಕಾರಿನಲ್ಲಿ ಲಿಫ್ಟ್ ತೆಗೆದುಕೊಂಡರು.ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಅಪರಾಧಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಮೀರತ್) ಪ್ರವೀಣ್ ಕುಮಾರ್ ತಿಳಿಸಿದ್ದಾರೆ.