ಕೊಪ್ಪಳ 23: ಕೀನ್ಯಾ ದೇಶದ ನಾಕೂರಿನ ಲೋಗ್ಬೋರೋ ವಿಶ್ವ ವಿದ್ಯಾಲಯದಲ್ಲಿ ನಡೆದ 41ನೇ ಅಂತರಾಷ್ಟ್ರೀಯ ಮಟ್ಟದ (ಡಬ್ಲ್ಯೂ.ಇ.ಡಿ.ಸಿ) ಕಾಯರ್ಾಗಾರದಲ್ಲಿ ಕೊಪ್ಪಳ ಜಿಲ್ಲೆಯ ಸ್ವಚ್ಛತೆ ಹಾಗೂ ನೈರ್ಮಲ್ಯ ಕುರಿತು ಉಪನ್ಯಾಸ ನೀಡಲು ಭಾತರ ದೇಶದ ಏಕೈಕ ಪ್ರತಿನಿಧಿಯಾಗಿ ಭಾಗವಹಿಸಿ ಯಶಸ್ವಿ ಉಪನ್ಯಾಸ ನೀಡಿ ಬಂದಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ವೆಂಕಟರಾಜಾ ಅವರಿಗೆ ಜಿಲ್ಲಾ ಆರ್.ಡಿ.ಪಿ.ಆರ್. ಸಂಸ್ಥೆ, ಜಿ.ಪಂ., ತಾ.ಪಂ., ಗ್ರಾ.ಪಂ. ವತಿಯಿಂದ ಸನ್ಮಾನಿಸಲಾಯಿತು. ಕನರ್ಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ವ, ನೌಕರರ ಸಂಘ, ಜಿಲ್ಲಾ ಘಟಕ ಕೊಪ್ಪಳ ವತಿಯಿಂದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಸೋಮವಾರದಂದು ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸನ್ಮಾನ ಸ್ವೀಕರಿಸಿದ ಬಳಿಕ ಜಿ.ಪಂ. ಸಿಇಓ ವೆಂಕಟರಾಜಾ ಅವರು ಮಾತನಾಡಿ, ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಸಮಬಂಧಿಸಿದಂತೆ ಕೊಪ್ಪಳ ಜಿಲ್ಲೆಯನ್ನು ಬಯಲು ಬಹೀದರ್ೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾ ಪಂಚಾಯತ್ ವತಿಯಿಂದ "ಮಿಷನ್-200, ಅಪರೇಷನ್-ಅಂತ್ಯ, ಬೃಹತ್ ಮಾನವ ಸರಳಿ ನಿಮರ್ಾಣ" ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ಸು ಕಂಡಿದೆ. ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು, ಕಂಪ್ಯೂಟರ ಆಪರೇಟರ್ಸ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪರಿಶ್ರಮದಿಂದಾಗಿ ಕೊಪ್ಪಳ ಬಯಲು ಬಹಿದರ್ೆಸೆ ಮುಕ್ತ ಜಿಲ್ಲೆಯಾಗಿದೆ. ಜಿಲ್ಲೆಯ ವಿವಿಧ ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿಗಳು ಸೇನಾಧಿಪತಿಗಳಂತೆ ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ. ಮುಖ್ಯವಾಗಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಹ ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪಂಚಾಯತ್, ಕಂದಾಯ, ಪೊಲೀಸ್, ಶಿಕ್ಷಣ ಹಾಗೂ ವಿವಿಧ ಇಲಾಖೆಗಳ ಸಹಕಾರದಿಂದ ಹೈದರಾಬಾದ ಕನರ್ಾಟಕ ಭಾಗಗಳ ಜಿಲ್ಲೆಗಳಲ್ಲಿ ಕೊಪ್ಪಳವು ಬಯಲು ಬಹಿದರ್ೆಸೆ ಮುಕ್ತ ಮೊಟ್ಟ ಮೊದಲ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ 01ಲಕ್ಷ 46 ಸಾವಿರಕ್ಕೂ ಅಧಿಕ ಶೌಚಾಲಯಗಳನ್ನು ನಿಮರ್ಾಣ ಮಾಡಲಾಗಿದೆ. ಎಲ್ಲರ ಸಾಂಗಿಕ ಪ್ರಯತ್ನದಿಂದ ಜಿ.ಪಂ. ಕಾರ್ಯವು ಯಶಸ್ವಿಯಾಗಿದ್ದು, ಇದರ ಪ್ರತಿ ಫಲವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯು ಗಮನ ಸೆಳೆದಿದೆ. ಶ್ರಮೀಸಿದ ಎಲ್ಲರಿಗೂ ಸಮಾರಂಭದ ಮುಖಾಂತರವಾಗಿ ಧನ್ಯವಾದಗಳನ್ನು ಅಪರ್ಿಸುತ್ತೇನೆ ಎಂದರು.
ಜಿ.ಪಂ ಯೋಜನಾ ನಿದರ್ೇಶಕ ರವಿ ಬಸರಿಹಳ್ಳಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯನ್ನು ಜಿ.ಪಂ. ಸಿಇಓ ವೆಂಕಟರಾಜಾರವರು ಜಾಗತಿಕ ಮಟ್ಟದಲ್ಲಿ ಗುರುತಿಸಿದ್ದಾರೆ. ಈ ಹಿಂದೆ ಜಿ.ಪಂ ಸಿಇಓ ಆಗಿದ್ದ ಕೃಷ್ಣಾ ಉದಪುಡಿ ಅವರು ಜಿಲ್ಲೆಯನ್ನು ರಾಜ್ಯ ಮಟ್ಟದಲ್ಲಿ ಗುರಿತಿಸಿದ್ದರು. ಸಿಇಓ ಆರ್. ರಾಮಚಂದ್ರನ್ ಅವರು ರಾಷ್ಟ್ರ ಮಟ್ಟದಲ್ಲಿ ಗುರುತಿಸಿದರೆ, ಜಿಲ್ಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ವೆಂಕಟರಾಜಾರವರು ಕೊಂಡೊಯ್ದಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನುಪ ಶೆಟ್ಟಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್, ಜಿ.ಪಂ. ಕಾರ್ಯದಶರ್ಿ ಎನ್.ಕೆ ತೊರವಿ, ಸಹಾಯಕ ನಿದೇಶಕ ಶರಣಬಸಪ್ಪ, ಕನರ್ಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ವ, ನೌಕರರ ಸಂಘದ ರಾಜ್ಯಾಧ್ಯಕ್ಷ ಶರಣಯ್ಯ ಸಸಿಮಠ, ಜಿಲ್ಲಾಧ್ಯಕ್ಷ ವೆಂಕಟೇಶ, ರಾಜ್ಯ ಸಕರ್ಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ ಸೇರಿದಂತೆ ತಾ.ಪಂ. ಅಧಿಕಾರಿಗಳು ಹಾಗೂ ಜಿಲ್ಲಾ ಆರ್.ಡಿ.ಪಿ.ಆರ್ ಸಂಸ್ಥೆಯ ಪದಾಧಿಕಾರಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.