ಅತಿವೃಷ್ಠಿ, ನೆರೆಯ ಬೆಳೆಹಾನಿ ವರದಿ ತ್ವರಿತವಾಗಿ ಸಲ್ಲಿಕೆಗೆ ಜಿ.ಪಂ. ಸೂಚನೆ

ಹಾವೇರಿ: ಅತಿವೃಷ್ಠಿ ಹಾಗೂ ನೆರೆಯಿಂದ ಹಾನಿಗೊಳಗಾಗಿರುವ ಬೆಳೆ ನಷ್ಟ ವರದಿಯನ್ನು ವಾರದಲ್ಲಿ ಪೂರ್ಣಗೊಳಿಸಿ ಸಕರ್ಾರಕ್ಕೆ ಮಾಹಿತಿ ಸಲ್ಲಿಸುವಂತೆ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಸೂಚಿಸಿದರು.

ಜಿಲ್ಲಾ ಪಂಚಾಯತಿ ನೂತನ ಸಭಾಂಗಣದಲ್ಲಿ ಕೆ.ಡಿ.ಪಿ. ಕಾರ್ಯಕ್ರಮಗಳ ಜುಲೈ ಮಾಹೆಯ ಪ್ರಗತಿಪರಿಶೀಲನೆ ನಡೆಸಿದ ಅವರು ಗ್ರಾಮವಾರು, ಬೆಳೆವಾರು ರೈತರ ಬೆಳೆ ನಷ್ಟದ ಕುರಿತಂತೆ ನಿಖರವಾದ ಮಾಹಿತಿಯನ್ನು ಸಂಗ್ರಹಿಸಬೇಕು. ಬೆಳೆ ನಷ್ಟಹೊಂದಿದ ಯಾವುದೇ ರೈತ ಪರಿಹಾರದಿಂದ ವಂಚಿತವಾಗಬಾರದು. ಈ ಕಾರಣಕ್ಕಾಗಿಯೇ ರೈತರು ಪ್ರತಿಭಟನೆ, ಚಳುವಳಿಗಳು ನಡೆದರೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಬೆಳೆ ಸಮೀಕ್ಷೆ ಕುರಿತಂತೆ ಮಾಹಿತಿ ನೀಡಿದ ಕೃಷಿ ಜಂಟಿ ನಿದರ್ೆಶಕ ಮಂಜುನಾಥ್ ಅವರು ನೆರೆ ಹಾಗೂ ಅತಿವೃಷ್ಠಿಯಿಂದ ಹಾಳಾಗಿರುವ ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದೆ. ನದಿಪಾತ್ರದ ಕೆಲ ಗ್ರಾಮಗಳಲ್ಲಿ ಹೊಲದಲ್ಲಿ ನೀರು ನಿಂತಿರುವುದರಿಂದ ಸಮೀಕ್ಷೆ ವಿಳಂಬವಾಗಿದೆ. ಕನಿಷ್ಠ ಎರಡು ತಿಂಗಳಾದರು ಸಮೀಕ್ಷೆ ಕಾರ್ಯಕ್ಕೆ ಸಮಯ ಬೇಕಾಗಿದೆ. ಸಮೀಕ್ಷೆ ಕೈಗೊಂಡು ಸಕರ್ಾರಕ್ಕೆ ವರದಿ ಸಲ್ಲಿಸಿದ ನಂತರ ನೇರವಾಗಿ ಬೆಳೆನಷ್ಟವಾದ ರೈತರ ಖಾತೆಗೆ ಸಕರ್ಾರದಿಂದಲೇ ಹಣ ಜಮಾ ಮಾಡಲಾಗುತ್ತದೆ. ಬೆಳೆ ಹಾನಿಯ ಜೊತೆಗೆ ಪ್ರವಾಹದಿಂದ ಭೂ ಕೊರತದಿಂದ ಮಣ್ಣಿನ ಸವಕಳಿ ಭೂ ಕೊರೆತಕ್ಕೆ ಎನ್.ಡಿ.ಆರ್.ಎಫ್. ನಿಯಮದಂತೆ ಪರಿಹಾರ ನೀಡಲು ಅವಕಾಶವಿದೆ ಎಂದು ತಿಳಿಸಿದರು.

ಪ್ರಾಥಮಿಕ ಅಂದಾಜಿನಂತೆ 8135 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಮಳೆ ಹಾಗೂ ನೆರೆಯಿಂದ ಕಸ ಹಾಗೂ ಮಣ್ಣು ತುಂಬಿಕೊಂಡಿರುವುದು, ಭೂ ಕುಸಿತ, ಭೂ ಸವಕಳಿ, ಭೂಮಿ ಕೊಚ್ಚಿಹೋಗಿರುವುದು ಗುರುತಿಸಲಾಗಿದೆ. 1,22,397 ಹೆಕ್ಟೇರ್ ಬೆಳೆಹಾನಿಯಾಗಿರುವುದು ಪ್ರಾಥಮಿಕ ವರದಿಯಿಂದ ಕಂಡುಬಂದಿದೆ. ನಿಖರವಾದ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ತೋಟಗಾರಿಕೆ ಇಲಾಖೆ ಉಪನಿದರ್ೆಶಕ ಶರಣಪ್ಪ ಭೋಗಿ ಅವರು  ಅಂದಾಜು 12000 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿರುವುದಾಗಿ ತಿಳಿಸಿದರು. ರೇಷ್ಮೆ ಇಲಾಖೆಯ ಸಹಾಯಕ ನಿದರ್ೆಕರು 53 ಹೆಕ್ಟೇರ್ ರೇಷ್ಮೆ ಬೆಳೆ ಹಾನಿಯಾಗಿರುವುದಾಗಿ ಮಾಹಿತಿ ನೀಡಿದರು.

 ಫಾಗಿಂಗ್ ವ್ಯವಸ್ಥೆ:   ನೆರೆಯಿಂದ ಜಲಾವೃತಗೊಂಡಿದ್ದ ಗ್ರಾಮಗಳಲ್ಲಿ ಕೆಟ್ಟ ವಾಸನೆ ಬರುತ್ತಿದೆ. ಗ್ರಾಮದಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಡಿಡಿಟಿ ಸಿಂಪರಣೆ, ನಿರಂತರ ಫಾಗಿಂಗ್ ಹಾಗೂ ಹಾಲೋಜಿನ್ ಮಾತ್ರೆ ವಿತರಿಸಲು ಕ್ರಮಕೈಗೊಳ್ಳುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಿದರು.

ನಿರಂತರ ವೈದ್ಯಕೀಯ ತಪಾಸಣೆ ಹಾಗೂ ಆರೋಗ್ಯದ ಮುನ್ನೆಚ್ಚರಿಕೆ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಎಲ್ಲ ವೈದ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಕಾಲಕ್ಕೆ ಚಿಕಿತ್ಸೆ ನೀಡುವಂತೆ ಕ್ರಮವಹಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.

       ನೆರೆ ಪೀಡಿತ ಗ್ರಾಮಗಳಲ್ಲಿ ಜಾನುವಾರುಗಳು ಕೊಳಕು ನೀರು ಕುಡಿಯಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕು. ಆನುವಾರುಗಳಿಗಾಗಿ ತೆರೆದಿರುವ ಗೋಶಾಲೆಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಪಶು ಸಂಗೋಪನೆ ಇಲಾಖೆ ಉಪನಿದರ್ೆಶಕರಿಗೆ ಸೂಚನೆ ನೀಡಿದರು.

 ಕಪ್ಪು ಪಟ್ಟಿಗೆ: ಪಂಚಾಯತ್ ರಾಜ್ ಇಂಜನೀಯರಿಂಗ್ ವತಿಯಿಂದ 75 ಲಕ್ಷ ರೂ. ಅನುದಾನದಲ್ಲಿ ಹೊಸದಾಗಿ ನಿಮರ್ಾಣ ಮಾಡಿದ ಅಗಡಿ- ಯಲಗಚ್ಚ ರಸ್ತೆ ಅತ್ಯಂತ ಕಳಪೆ ಕಾಮಗಾರಿಯಿಂದ ಡಾಂಬರ ರಸ್ತೆ ಕೆಸರಿನ ರಸ್ತೆಯಂತಾಗಿದೆ. ಈ ರಸ್ತೆ ನಿಮರ್ಾಣ ಮಾಡಿದ  ಗುತ್ತಿಗೆದಾರನಿಗೆ  ಬಾಕಿ ಹಣ ಪಾವತಿಸಬಾರದು ಹಾಗೂ ಕಪ್ಪು ಪಟ್ಟಿಗೆ ಸೇರಿಸಲು ಜಿ.ಪಂ.ಇಂಜನೀಯರಗೆ ಸೂಚಿಸಿದರು.

  ಕಿರುಗಾಲುವೆಗೆ ಪ್ರಸ್ತಾವನೆ: ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆ ನಿಮರ್ಾಣ ಪೂರ್ಣಗೊಂಡರು ಕಿರುಗಾಲುವೆ ನಿಮರ್ಾಣ ಮಾಡದ ಕಾರಣ ರೈತರು ಕಾಲಿವೆ ನೀರನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಕಿರುಗಾಲುವೆ ನಿಮರ್ಾಣಕ್ಕೆ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಯುಟಿಪಿ ಅಭಿಯಂತರರಿಗೆ ಸೂಚಿಸಿದರು.

ಬಾಡಾ ಗ್ರಾಮದ ಉದರ್ು ಶಾಲಾ ಕಟ್ಟಡಕ್ಕೆ ನಿವೇಶನ, ಕಬನೂರ ಗ್ರಾಮದ ಅಂಗನವಾಡಿ ಕಟ್ಟಡಕ್ಕೆ ನಿವೇಶನ, ಕಾಕೋಳ ಗ್ರಾಮಕ್ಕೆ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾತಿ, ರೇಷ್ಮೆ ಸಾಗಾಣಿಕೆ ಮನೆಗಳಿಗೆ ರೂ.10 ಕೋಟಿ ಅನುದಾನ ಮಂಜೂರಾತಿ, ಮಳೆಯಿಂದ ಹಾಳಾಗಿರುವ ಐಪಿ ಸೆಟ್ಗಳ ವಿದ್ಯುತ್ ಸಂಪರ್ಕ, ಮಳೆಯಿಂದ ಹಾನಿಯಾಗಿರುವ 464 ಶಾಲಾ ಕೊಠಡಿಗಳ ತ್ವರಿತ ದುರಸ್ಥಿ ಕೈಗೊಳ್ಳಲು ಸೂಚಿಸಿದರು.

ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಸೇವೆಯ ಲ್ಯಾಬ್ ಟೆಕ್ನಿಷಿಯನ್ಗಳನ್ನು ಆಯುಕ್ತರು ಮಂಜೂರಾತಿ ನೀಡಿದ ಕಾರಣ ಕೆಲಸದಿಂದ ತೆಗೆದುಹಾಕಲಾಗಿದೆ. 

      ಇದರಿಂದ ವೈದ್ಯಕೀಯ ಸೇವೆಗೆ ವ್ಯತ್ಯಯವಾಗಿದೆ. ಆಯುಕ್ತರಿಗೆ ಮರು ಮಂಜೂರಾತಿ ಪ್ರಸ್ತಾವನೆ ಸಲ್ಲಿಸಿ ಲ್ಯಾಬ್ ಟೆಕ್ನಿಷಿಯನ್ಗಳನ್ನು ಮುಂದುವರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲೀಲಾವತಿ, ಉಪಕಾರ್ಯದಶರ್ಿ ಜಿ.ಗೋವಿಂದಸ್ವಾಮಿ ಹಾಗೂ ಮುಖ್ಯ ಯೋಜನಾ ನಿದರ್ೆಶಕ ಕುಮಾರ ಮಣ್ಣವಡ್ಡರ ಹಾಗೂ ಜಿಲ್ಲಾ ಪಂಚಾಯತ್  ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ ದುಗ್ಗತ್ತಿ, ಜಿ.ಪಂ.ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ನೀಲವವ ಚವ್ಹಾಣ ಅವರು ಉಪಸ್ಥಿತರಿದ್ದರು