ವಯನಾಡ್, ಮೇ 29,ಮಾತೃಭೂಮಿ ವ್ಯವಸ್ಥಾಪಕ ನಿರ್ದೇಶಕ ಮತ್ತು ರಾಜ್ಯಸಭಾ ಸದಸ್ಯ ಎಂ ಪಿ ವೀರೇಂದ್ರ ಕುಮಾರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಇಲ್ಲಿಗೆ ಸಮೀಪದ ಕುಡಿಯರನಮಾಲದಲ್ಲಿರುವ ಅವರ ನಿವಾಸದ ಬಳಿ ನಡೆಯಿತು. ಸಾಂಪ್ರದಾಯಿಕ ಜೈನ ಪದ್ಧತಿಯಂತೆ, ಪ್ರಾರ್ಥನೆಗಳ ನಡುವೆ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ-ವಿಧಾನಗಳು ನಡೆದವು.
ವೀರೇಂದ್ರಕುಮಾರ್ ಅವರ ಪುತ್ರ ಮತ್ತು ಮಾತೃಭೂಮಿ ಸಮೂಹ ಪ್ರಕಟಣೆಗಳ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶ್ರೇಯಮ್ಸ್ ಕುಮಾರ್ ಅವರು ಸಂಜೆ 5 ಗಂಟೆ ಸುಮಾರಿಗೆ ಅಂತಿಮ ವಿಧಿಗಳನ್ನು ನೆರವೇರಿಸಿದರು.ಅಂತ್ಯಕ್ರಿಯೆ ವೇಳೆ ಸಚಿವರಾದ ಎ ಕೆ ಸಸೀಂದ್ರನ್ ಮತ್ತು ಕೆ ಕೃಷ್ಣನ್‍ಕುಟ್ಟಿ ಮತ್ತು ವಯನಾಡ್ ಶಾಸಕ ಸಿ ಕೆ ಸಸೀಂದ್ರನ್ ಹಾಗೂ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಅಗಲಿದ ನಾಯಕನಿಗೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಸ್ಥಳೀಯರು ಅಂತಿಮ ನಮನ ಸಲ್ಲಿಸಿದರು.