ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟಕ್ಕೆ ನಿರ್ಧಾರ: ಬೆಂಬಲ
ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟಕ್ಕೆ ನಿರ್ಧಾರ: ಬೆಂಬಲFunding for the struggle for the fulfillment of teacher demands: support
Lokadrshan Daily
12/14/24, 10:42 PM ಪ್ರಕಟಿಸಲಾಗಿದೆ
ಲೋಕದರ್ಶನ ವರದಿ
ಶಿರಹಟ್ಟಿ 08: ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಹಲವಾರು ಬೇಡಿಕೆಗಳನ್ನು ಈಡೆರಿಸುವಂತೆ ವಿಧಾನ ಪರಿಷತ್ತ ಸದಸ್ಯ ಬಸುವರಾಜ ಹೊರಟ್ಟಿ ಹಾಗೂ ಹಲವಾರು ಮಹನೀಯರು ಇದೆ ತಿಂಗಳ 17ರಂದು ಶಾಲಾ ಕಾಲೇಜ್ ಬಂದ ಮಾಡಿ ಧಾರವಾಡದ ಆಯುಕ್ತರ ಕಚೇರಿ ಎದುರು ಕರೆಯಾಲಾಗಿರುವ ಬಂದಗೆ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಶಿರಹಟ್ಟಿ ತಾಲೂಕ ಘಟಕದ ವತಿಯಿಂದ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಲಾಯಿತು.
ಈ ವೇಳೆ ಸಂಘದ ತಾಲೂಕ ಅಧ್ಯಕ್ಷ ಎಮ್.ಕೆ.ಲಮಾಣಿ ಮಾತನಾಡಿ ನಮ್ಮ ಬೇಡಿಕೆಗಳನ್ನು ಹಲವಾರು ಬಾರಿ ಸರಕಾರದ ಮುಂದೆ ಇಡಲಾಗಿದೆ ಆದರೆ ಅದಕ್ಕೆ ಕ್ಯಾರೆ ಎನ್ನದ ಸರಕಾರದ ವಿರುದ್ಧ ಬಂದ ಕರೆ ಅನಿವಾರ್ಯವಾಗಿದೆ. 2006 ನಂತರ ಹಾಜರಾದ ಶಿಕ್ಷಕರಿಗೆ ಹಿಂದಿನಂತೆ ನಿವೃತ್ತಿ ವೇತನ, 1995ರ ನಂತರ ಪ್ರಾರಂಭವಾಗಿರುವ ಎಲ್ಲಾ ಶಾಲಾ ಕಾಲೇಜುಗಳಿಗೆ ಅನುದಾನ ಮಂಜುರ ಮಾಡುವದು, ಕಾಲ್ಪನಿಕ ವೇತನ ಬಡ್ತಿ ತಕ್ಷಣ ಜಾರಿ ಮಾಡುವದು ಮತ್ತು ಸರಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಖಾಸಗಿ ನೌಕರರಿಗೆ ನೀಡುವದು, ಈ ಎಲ್ಲ ಬೇಡಿಕೆಗಳನ್ನು ಇಡೆರಿಸುವಂತೆ ಹಲವುಬಾರಿ ಹೋರಾಟ ಮಾಡಿ ಮನವರಿಕೆ ಮಾಡಿಕೊಟ್ಟರು ಈವರೆಗೆ ಯಾವುದೆ ಕ್ರಮ ಕೈಗೊಳ್ಳದಿರುವದರಿಂದ ದಿನಾಂಕ 17ರಂದು ಕರೆಯಲಾಗಿರುವ ಬಂದಗೆ ಸಭೆಯಲ್ಲಿ ಸವರ್ಾನುಮತದಿಂದ ಬೆಂಬಲ ವ್ಯಕ್ತಪಡಿಸಲಾಗಿದೆ ಎಂದು ಹೇಳಿದರು. ಎಚ್.ಟಿ.ಬಿಜ್ಜೂರ, ಎಸ್.ಎಮ್.ಹಳ್ಳೆಮ್ಮನವರ, ಬಸವರಡ್ಡಿ, ಎಸ್.ಎಸ್.ಮಠದ, ಎಚ್.ಎಲ್.ಮುಳಗುಂದ ಮುಂತಾದವರು ಸಭೆಯಲ್ಲಿ ಹಾಜರಿದ್ದರು.