ತಾಳಿಕೋಟಿ 10: 2 ಎ ಮೀಸಲಾತಿಗೆ ಆಗ್ರಹಿಸಿ ಜಗದ್ಗುರುಗಳಾದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಸುವರ್ಣ ಸೌವುದಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲು ನಿರ್ಣಯಿಸಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇರಲಿದೆ ಎಂದು ಮಾಜಿ ಶಾಸಕ ನಡಹಳ್ಳಿ ಹೇಳಿದರು.
ಸೋಮವಾರ ಪಟ್ಟಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಪಂಚಮಸಾಲಿ ಸಮಾಜದ ಬಡ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಅನುಕೂಲವಾಗಲೆಂದು 2 ಎ ಮೀಸಲಾತಿಗಾಗಿ ಕಳೆದ 7-8 ವರ್ಷಗಳಿಂದ ಹೋರಾಟವನ್ನು ಮಾಡುತ್ತಾ ಬಂದಿದ್ದಾರೆ, ಇದು ನ್ಯಾಯೋಜಿತವಾದ ಬೇಡಿಕೆಯಾಗಿದೆ ಇದರಲ್ಲಿ ರಾಜಕಾರಣ ಬೇಡ, ನಮ್ಮ ಸರ್ಕಾರ ಇದ್ದಾಗ ನಾವು 2 ಡಿ. ಮೀಸಲಾತಿ ಪ್ರಕಟಿಸಿದ್ದೇವು ಆದರೆ ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳನ್ನು ಗುರುಗಳು ಭೇಟಿಯಾಗಿ ವಿನಂತಿಸಿಕೊಂಡರೂ ಯಾವುದೇ ರೀತಿಯ ಸ್ಪಂದನೆ ಮಾಡುತ್ತಿಲ್ಲ, ಜೊತೆಗೆ ಯು ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಅಧಿಕಾರಿಗಳಿಂದ ಮಾಡಿಸಲಾಗುತ್ತಿದೆ ನಾನು ಈ ಕೆಟ್ಟ ಧೋರಣೆಯನ್ನು ಖಂಡಿಸುತ್ತೇನೆ ಎಂದ ಅವರು ನಾನು ಹೋರಾಟದಲ್ಲಿ ಸಂಪೂರ್ಣವಾಗಿ ಭಾಗಿಯಾಗುತ್ತಿದ್ದೆ ನನ್ನ ಆರೋಗ್ಯದ ಸಮಸ್ಯೆ ಇರುವುದರಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಆದರೂ ನಾನು ನೈತಿಕವಾಗಿ ಅವರ ಬೆಂಬಲಕ್ಕೆ ನಿಂತಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಮಡು ಸಾಹುಕಾರ ಬಿರಾದಾರ, ಕಾಶಿನಾಥ ಮುರಾಳ, ಶಿವಶಂಕರ ಹಿರೇಮಠ, ಪ್ರಭು ಬಿಳೇಭಾವಿ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ, ನಿಂಗಣ್ಣ ಕುಂಟೋಜಿ, ಮಹಾಂತೇಶ ಮುರಾಳ, ದ್ಯಾಮನಗೌಡ ಪಾಟೀಲ ಇದ್ದರು.