ನವದೆಹಲಿ, ಜ 12 : ಭಾನುವಾರ ಪೆಟ್ರೋಲ್ ದರ ಪ್ರತಿ ಲೀಟರ್ಗೆ 10 ರಿಂದ 12 ಪೈಸೆ ಮತ್ತು ಡೀಸೆಲ್ ಲೀಟರ್ಗೆ 6 - 7 ಪೈಸೆಯಷ್ಟು ಇಳಿಕೆ ಕಂಡಿದೆ.
ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 75.90 ರೂ ನಷ್ಟಿದ್ದು, ಶನಿವಾರಕ್ಕೆ ಹೋಲಿಸಿದರೆ 11 ಪೈಸೆ ಇಳಿಕೆಯಾಗಿದೆ ಮತ್ತು ಡೀಸೆಲ್ ದರ ಲೀಟರ್ ಗೆ 69.11 ರೂ ನಷ್ಟಿದ್ದು ಶನಿವಾರ ಈ ಬೆಲೆ ಲೀಟರ್ 69.17 ರೂ ನಷ್ಟಿತ್ತು ಎಂದು ಭಾರತೀಯ ತೈಲ ನಿಗಮದ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಮುಂಬೈನಲ್ಲಿ ಶನಿವಾರದ ದರಕ್ಕಿಂತ ಪೆಟ್ರೋಲ್ ಬೆಲೆ ಲೀಟರ್ ಗೆ 11 ಪೈಸೆ ಇಳಿಕೆಯಾಗಿ 81.49 ರೂ., ಡೀಸೆಲ್ ಬೆಲೆ 7 ಪೈಸೆ ಇಳಿಕೆಯಾಗಿ 72.47 ರೂ ನಷ್ಟಿದೆ.
ಚೆನ್ನೈನಲ್ಲಿ, ಪೆಟ್ರೋಲ್ ಬೆಲೆ 12 ಪೈಸೆ ಇಳಿದು 78.86 ರೂ.ಗೆ ತಲುಪಿದೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 73.0 ರೂ ನಷ್ಟಿದ್ದು ಇದು ಶನಿವಾರದ ದರಕ್ಕಿಂತ 6 ಪೈಸೆ ಕಡಿಮೆ ಇದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 78.48 ರೂ ನಷ್ಟಿದ್ದು ಶನಿವಾರದ ದರ 78.59 ರೂ ಗಿಂತ 11 ಪೈಸೆ ಕಡಿಮೆಯಾಗಿದೆ. ಡೀಸೆಲ್ ಬೆಲೆ ಲೀಟರ್ಗೆ 71.48 ರೂ.ಗೆ ಇಳಿಕೆ ಕಂಡಿದೆ. ಶನಿವಾರ ಡೀಸೆಲ್ ದರ ಲೀಟರ್ಗೆ 71.54 ರೂ ನಷ್ಟಿದ್ದು ಭಾನುವಾರ 6 ಪೈಸೆ ಕಡಿಮೆಯಾಗಿದೆ.