ಡಿಜಿಟಲ್ ತರಗತಿಯಲ್ಲಿ ಭಾಗವಹಿಸಲಾಗದೆ ಹತಾಶೆ: ವಿದ್ಯಾರ್ಥಿನಿ ಆತ್ಮಹತ್ಯೆ

ಮಲಪ್ಪುರಂ, ಜೂನ್ 02, ಆನ್ ಲೈನ್ ತರಗತಿಯಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಹತಾಶಳಾದ 9ನೇ ತರಗತುಇ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಾಲಂಚೇರಿಯಲ್ಲಿ ನಡೆದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಶಾಲಾ ವಿದ್ಯಾರ್ಥಿಗಳಿಗಾಗಿನ ಡಿಜಿಟಲ್ ತರಗತಿಯಲ್ಲಿ ಭಾಗವಹಿಸಲು ಸಾಧ್ಯವಾಗದಿರುವ ಬಗ್ಗೆ ಹತಾಶೆಯಿಂದ ಸೋಮವಾರ ಸಂಜೆ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ತನ್ನ ಮನೆಯಲ್ಲಿ ಟೆಲಿವಿಷನ್ ಸೆಟ್ ದೀರ್ಘಕಾಲದವರೆಗೆ ನಿಷ್ಕ್ರಿಯಗೊಂಡಿದ್ದರಿಂದ ಮತ್ತು ಮನೆಯಲ್ಲಿ ಯಾರೊಬ್ಬರೂ ಸ್ಮಾರ್ಟ್ ಫೋನ್ ಹೊಂದಿಲ್ಲದ ಕಾರಣ ಡಿಜಿಟಲ್ ತರಗತಿಯಲ್ಲಿ ಭಾಗವಹಿಸಲು ಸಾಧ್ಯವಾಗದೆ ದೇವಿಕಾ ಅಸಮಾಧಾನಗೊಂಡಿದ್ದಳು ಎಂದು ಮೂಲಗಳು ತಿಳಿಸಿವೆ.ದೇವಿಕಾ ಶಾಲೆಯಲ್ಲಿ ಎಲ್ಲರ ಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಳು.  ಅಧ್ಯಯನ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮೆಚ್ಚುಗೆ ಗಳಿಸಿದ್ದರು. "ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಲು ಅಸಮರ್ಥಳಾಗಿದ್ದರಿಂದ ಅವಳು ಚಿಂತಿತಳಾಗಿದ್ದಳು" ಎಂದು ಮೂಲಗಳು ತಿಳಿಸಿವೆ ಸ್ನೇಹಿತರು ಮತ್ತು ನೆರೆಹೊರೆಯವರಲ್ಲಿ ಪೊನ್ನು ಎಂದೇ ಖ್ಯಾತರಾಗಿದ್ದ ಅವರು ನಿನ್ನೆ ಮಧ್ಯಾಹ್ನದಿಂದ ಕಾಣೆಯಾಗಿದ್ದಳು.  ಹುಡುಕಾಟ ನಡೆಸಿದಾಗ ಮನೆಗೆ ಸ್ವಲ್ಪ ದೂರದಲ್ಲಿ ಮೃತದೇಹ ಪತ್ತೆಯಾಗಿದೆ ಆಕೆಯ ತಂದೆಗೆ ಸ್ಥಿರವಾದ ವೃತ್ತಿಯಿಲ್ಲದೆ ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.